HOME » NEWS » National-international » CRIME NEWS PUNE AUTOMOBILE COMPANY WORKER DIED HIS WIFE ALLEGES ROBOT CAUSED FOR HUSBAND DEATH STG SCT

ಪುಣೆಯ ಆಟೋಮೊಬೈಲ್‌ ಕಂಪನಿ ಉದ್ಯೋಗಿ ಸಾವು; ಗಂಡನ ಸಾವಿಗೆ ರೋಬೋಟ್‌ ಕಾರಣವೆಂದ ಹೆಂಡತಿ!

ರೋಬೋಟ್‌ವೊಂದರ ಅಸಮರ್ಪಕ ಕಾರ್ಯದಿಂದಾಗಿ ತನ್ನ ಪತಿ ಅಲಂಡಿ ಮೂಲದ ದತ್ ನಗರ ನಿವಾಸಿ ಉಮೇಶ್ ರಮೇಶ್ (44) ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತ್ನಿ ಆರೋಪಿಸಿದ್ದಾಳೆ.

news18-kannada
Updated:February 26, 2021, 12:38 PM IST
ಪುಣೆಯ ಆಟೋಮೊಬೈಲ್‌ ಕಂಪನಿ ಉದ್ಯೋಗಿ ಸಾವು; ಗಂಡನ ಸಾವಿಗೆ ರೋಬೋಟ್‌ ಕಾರಣವೆಂದ ಹೆಂಡತಿ!
ರೋಬೋಟ್
  • Share this:
ಮುಂಬೈ (ಫೆ. 26): ಇತ್ತೀಚೆಗೆ ಹಲವು ಕಾರ್ಯಕ್ಷೇತ್ರಗಳಲ್ಲಿ ರೋಬೋಟ್‌ಗಳ ಬಳಕೆ ಹೆಚ್ಚಾಗುತ್ತಿದೆ. ಈ ರೋಬೋಟ್‌ಗಳು ಈಗಾಗಲೇ ಸಾಕಷ್ಟು ಉದ್ಯೋಗಿಗಳ ಕೆಲಸವನ್ನು ಕಿತ್ತುಕೊಂಡಿದೆ. ಆದರೆ, ಇಲ್ಲಿ ರೋಬೋಟ್‌ ವ್ಯಕ್ತಿಯ ಪ್ರಾಣವನ್ನೇ ತೆಗೆದಿದೆ ಎನ್ನಲಾಗುತ್ತಿದೆ. ಕಂಪನಿಯೊಂದರಲ್ಲಿ ವೆಲ್ಡರ್‌ ಆಗಿರುವ ಉದ್ಯೋಗಿಯ ಸಾವಿಗೆ ರೋಬೋಟ್‌ ಕಾರಣ ಎಂದು ಮೃತನ ಪತ್ನಿ ಆರೋಪಿಸಿದ್ದಾಳೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಕನ್‌ನಲ್ಲಿ ಬುಧವಾರ ಬೆಳಗ್ಗೆ ಆಟೋಮೊಬೈಲ್ ಬಹುರಾಷ್ಟ್ರೀಯ ಕಂಪನಿಯ ಆವರಣದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟ ನಂತರ ಸಂಸ್ಥೆಯ ಐದು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು, ರೋಬೋಟ್‌ವೊಂದರ ಅಸಮರ್ಪಕ ಕಾರ್ಯದಿಂದಾಗಿ ತನ್ನ ಪತಿ ಅಲಂಡಿ ಮೂಲದ ದತ್ ನಗರ ನಿವಾಸಿ ಉಮೇಶ್ ರಮೇಶ್ (44) ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತ್ನಿ ಆರೋಪಿಸಿದ್ದಾಳೆ. ಮೃತ ವ್ಯಕ್ತಿ ಜಲ್ಗಾಂವ್‌ನ ಭೂಸಾವಲ್‌ನಲ್ಲಿರುವ ದೇನಾನಗರ್ ಮೂಲದವರು. ಮೃತರ ಪತ್ನಿ ಪ್ರಿಯಾ ರಮೇಶ್ (43) ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 8: 15 ಕ್ಕೆ ಈ ಘಟನೆ ನಡೆದಿದ್ದು, ನಂತರ ರಮೇಶ್‌ನನ್ನು ಯಶವಂತರಾವ್‌ ಚವ್ಹಾಣ್‌ ಸ್ಮಾರಕ (ವೈಸಿಎಂ) ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಬೆಳಗ್ಗೆ 10 ಗಂಟೆಯ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಸ್ ಟಿಕೆಟ್ ಬುಕಿಂಗ್​ಗಾಗಿ ಅಭಿಬಸ್‌ ಜೊತೆ ಐಆರ್‌ಸಿಟಿಸಿ ಒಪ್ಪಂದ

ಈ ವ್ಯಕ್ತಿಯು ವೆಲ್ಡಿಂಗ್ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದು, ಅದರ ಬಳಿ ರೋಬೋಟ್‌ ಇತ್ತು. ಅದರ ಸೆನ್ಸಾರ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಆ ರೋಬೋಟ್‌ ತನ್ನ ಪತಿ ಮೇಲೆ ಬಿದ್ದು ಅವರ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಕಂಪನಿಯ ಅಧಿಕಾರಿಗಳು ತನ್ನ ಪತಿಗೆ ಹೆಲ್ಮೆಟ್, ಕೈಗವಸುಗಳು ಮತ್ತು ಬೂಟುಗಳಂತಹ ಸುರಕ್ಷತಾ ಸಾಧನಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಹೆಂಡತಿಯ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ. ಇನ್ನು, ಈ ಘಟನೆ ಸಂಬಂಧ ಚಕನ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದಾಗಿ ಸಾವಿಗೆ ಕಾರಣವಾಗಿದೆ) ಮತ್ತು ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by: Sushma Chakre
First published: February 26, 2021, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories