ಅಪಹರಣಕ್ಕೊಳಗಾಗಿದ್ದ ನೈಜೀರಿಯಾ ಶಾಲೆಯ 279 ವಿದ್ಯಾರ್ಥಿನಿಯರ ಬಿಡುಗಡೆ!

279 ವಿದ್ಯಾರ್ಥಿನಿಯರನ್ನು ಮಾತ್ರ ಅಪಹರಿಸಲಾಗಿತ್ತು. ಅವರೆಲ್ಲರೂ ಇದೀಗ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ನಾವು ಅಲ್ಲಾಹನಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂದು ರಾಜ್ಯಪಾಲ ಮಾತಾವಾಲೆ ಹೇಳಿದ್ದಾರೆ.

ಬಿಡುಗಡೆಯಾದ ನೈಜೀರಿಯ ಪ್ರಜೆಗಳು

ಬಿಡುಗಡೆಯಾದ ನೈಜೀರಿಯ ಪ್ರಜೆಗಳು

 • Share this:
  ನವದೆಹಲಿ (ಮಾ. 3): ಕಳೆದ ವಾರ ಉತ್ತರ ನೈಜೀರಿಯಾದ ಬೋರ್ಡಿಂಗ್ ಶಾಲೆಯಲ್ಲಿ ಬಂದೂಕುಧಾರಿಗಳಿಂದ ಅಪಹರಿಸಲ್ಪಟ್ಟಿದ್ದ 279 ವಿದ್ಯಾರ್ಥಿನಿಯರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಾಮ್ಫಾರಾ ರಾಜ್ಯದ ರಾಜ್ಯಪಾಲ ಡಾ. ಬೆಲ್ಲೊ ಮಾತಾವಾಲೆ ತಿಳಿಸಿದ್ದಾರೆ.

  ‘ದುಷ್ಕರ್ಮಿಗಳಿಂದ ಅಪಹರಿಸಲ್ಪಟ್ಟಿದ್ದ ಎಲ್ಲ ವಿದ್ಯಾರ್ಥಿನಿಯರು ಸ್ವತಂತ್ರರಾಗಿದ್ದಾರೆ ಎಂದು ಘೋಷಿಸಲು ನನಗೆ ಸಂತಸವಾಗಿದೆ. ಅವರೆಲ್ಲರೂ ಇದೀಗ ಸರ್ಕಾರಿ ವಸತಿಗೃಹಕ್ಕೆ ಆಗಮಿಸಿದ್ದು, ಆರೋಗ್ಯವಾಗಿದ್ದಾರೆ’ ಎಂದು ರಾಜ್ಯಪಾಲರು ಎಎಫ್‌ಪಿಗೆ ತಿಳಿಸಿದ್ದಾರೆ. ನೂರಾರು ಬಾಲಕಿಯರು ಸರ್ಕಾರಿ ವಸತಿ ಗೃಹದ ಆವರಣದಲ್ಲಿ ಹಿಜಾಬ್ ಧರಿಸಿ ನಿಂತಿರುವ ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ಕಂಡುಬಂದಿದೆ.

  ಫೆಬ್ರವರಿ 27ರಂದು ಪಶ್ಚಿಮ ಆಫ್ರಿಕಾದ ಜಂಗೆಬೆ ಟೌನ್‍ನ ಸರ್ಕಾರಿ ಬಾಲಕಿಯರ ಕಿರಿಯ ಮಾಧ್ಯಮಿಕ ಶಾಲೆಯ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಬಂದೂಕುಧಾರಿಗಳ ತಂಡ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದುಕೊಂಡಿದ್ದರು. ಪ್ರಾರಂಭದಲ್ಲಿ ಅಧಿಕಾರಿಗಳು 317 ವಿದ್ಯಾರ್ಥಿನಿಯರನ್ನು ಅಪಹರಿಸಲಾಗಿದೆ ಎಂದು ಹೇಳಿದ್ದರು. ಆದರೆ, ರಾಜ್ಯಪಾಲ ಮಾತಾವಾಲೆ 279 ವಿದ್ಯಾರ್ಥಿನಿಯರನ್ನು ಮಾತ್ರ ಅಪಹರಿಸಲಾಗಿತ್ತು. ಅವರೆಲ್ಲರೂ ಇದೀಗ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ನಾವು ಅಲ್ಲಾಹನಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು

  ಪಶ್ಚಿಮ ಆಫ್ರಿಕಾದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಪಹರಣದ ಸರಣಿ ಪ್ರಕರಣಗಳು ನಡೆಯುತ್ತಿವೆ. ಕೇವಲ 3 ತಿಂಗಳ ಅವಧಿಯಲ್ಲಿ ನೈಜೀರಿಯಾದ 3ನೇ ಶಾಲಾ ದಾಳಿ ಇದಾಗಿದೆ. ಅಪಹರಣಕಾರರು, ಡಕಾಯಿತರು ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುವ್ಯ ಮತ್ತು ಮಧ್ಯ ನೈಜೀರಿಯಾದಲ್ಲಿ ಭಾರಿ ಶಸ್ತ್ರಸಜ್ಜಿತ ಕ್ರಿಮಿನಲ್ ಗ್ಯಾಂಗ್‌ಗಳು ಇತ್ತೀಚಿನ ವರ್ಷಗಳಲ್ಲಿ ಸಕ್ರಿಯವಾಗಿ ದಾಳಿ ನಡೆಸುತ್ತಿವೆ. ಸುಲಿಗೆ, ಅಪಹರಣ, ಅತ್ಯಾಚಾರ ಮತ್ತು ಕಳ್ಳತನ ಮಾಡುವುದನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡಿವೆ.

  2016ರಲ್ಲಿ ಈ ಪ್ರದೇಶಕ್ಕೆ ನೈಜೀರಿಯನ್ ಮಿಲಿಟರಿಯನ್ನು ನಿಯೋಜಿಸಲಾಗಿತ್ತು. ಅಲ್ಲದೇ ಡಕಾಯಿತರೊಂದಿಗೆ ಶಾಂತಿ ಒಪ್ಪಂದಕ್ಕೆ 2019ರಲ್ಲಿ ಸಹಿ ಹಾಕಲಾಗಿತ್ತು. ಆದರೂ ಕೂಡ ದಾಳಿಗಳು ಮುಂದುವರೆದಿವೆ. ಡಿಸೆಂಬರ್ ನಲ್ಲಿಯೂ ಕೂಡ 300 ವಿದ್ಯಾರ್ಥಿಗಳನ್ನು ಅಪಹರಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ಹಿಂದೆ ಚಿಬೊಕ್‌ನಲ್ಲಿ ಜಿಹಾದಿಗಳು 276 ಶಾಲಾ ಬಾಲಕಿಯರನ್ನು ಅಪಹರಿಸಿದ್ದರು. ಈ ವಿದ್ಯಾರ್ಥಿನಿಯರಲ್ಲಿ ಅನೇಕರು ಇಂದಿಗೂ ಪತ್ತೆಯಾಗಿಲ್ಲ. ಈ ಘಟನೆಗೆ ವ್ಯಾಪಕ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿತ್ತು. ಹಣಕ್ಕಾಗಿ ಅಪಹರಣ ಮಾಡುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ.

  ತೀವ್ರ ಬಡತನದಿಂದ ಬಳಲುತ್ತಿರುವ ಈ ಪ್ರದೇಶಗಳಲ್ಲಿ ಅಪಹರಣಗಳ ಹೆಚ್ಚಳಕ್ಕೆ ಕಾರಣ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆಫ್ರಿಕಾ ದೇಶದಲ್ಲಿ ಸುಲಿಗೆಗಾಗಿ ಅಪಹರಣ ನಡೆಸುವುದು ಮಾಮೂಲಾಗಿಬಿಟ್ಟಿದೆ. ಇದು ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದ್ದು, ದುಷ್ಕರ್ಮಿಗಳು ನಡುಬೀದಿಯಲ್ಲೇ ಉದ್ಯಮಿಗಳು, ಅಧಿಕಾರಿಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ದಾಳಿ ನಡೆಸಿ ಹಣಕ್ಕಾಗಿ ಅವರನ್ನು ಅಪಹರಿಸುತ್ತಾರೆ. ಹಣ ನೀಡದವರನ್ನು ಕೊಂದು ಹಾಕುತ್ತಾರೆ.
  Published by:Sushma Chakre
  First published: