Crime News: ಎಣ್ಣೆ ಏಟಲ್ಲಿ ದೋಸ್ತಿಗಳ ನಡುವೆ ಕಿರಿಕ್; ಒಂದು ಪೆಗ್ ಕಡಿಮೆ ಹಾಕಿದ್ದಕ್ಕೆ ಕೊಂದೇಬಿಟ್ಟ..!

ನೀನು ಹೆಚ್ಚು ಕುಡಿದಿಯಾ ಈ ಪೆಗ್ ನನಗೆ ಕೊಡು ಎಂದು ಸ್ನೇಹಿತನೊಬ್ಬ ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮತ್ತೊಬ್ಬ ಸ್ನೇಹಿತ, ನೀನೇ ನನಗಿಂತ ಹೆಚ್ಚು ಕುಡಿದಿರುವೆ, ಇದನ್ನು ನಾನೇ ಕುಡಿಯುತ್ತೇನೆ ಎಂದು ಉಳಿದಿದ್ದ ಪೆಗ್ ಅನ್ನ, ಕುಡಿಯಲು ಮುಂದಾಗಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಂದು ಸಿನಿಮಾದಲ್ಲಿ ಸುದೀಪ್ 'ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ... ಸೊಂಟಕ್ಕಿಂತ ವಾಸಿ ಕಣೋ ಗುಂಡಿನ ನಶ್ಯಾ' ಎಂಬ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದರು. ಆದರೆ, ಎಣ್ಣೆ ಏಟನ್ನ ತಡೆದುಕೊಳ್ಳದವರು ಭಾರೀ ಅವಾಂತರವನ್ನೇ ಸೃಷ್ಟಿ ಮಾಡಿಬಿಡುತ್ತಾರೆ. ಮನೆಯಲ್ಲಿ ನೋಡಿ ಮಾಡಿ ಸ್ನೇಹ ಮಾಡಿ ಎಂದು ತಂದೆ-ತಾಯಿ(Parents) ಸದಾ ಹೇಳುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ನಂಬಿದವರೆ ಕುತ್ತಿಗೆ ಕೊಯ್ದು ಹೋಗಿರುತ್ತಾರೆ. ಸ್ನೇಹ ಅಂತ ಒಳಗೊಳಗೇ ಸ್ಕೆಚ್ಚು ಹಾಕಿರುತ್ತಾರೆ. ನೀವು ಯಾವುದೇ ಪ್ರಕರಣಗಳನ್ನು ತೆಗೆದು ನೋಡಿ, ಮಾಡಿದಾಗಲೇ ಗಲಾಟೆ ಶುರುವಾಗುವುದು. ಕುಡಿದಾಗ ಮನುಷ್ಯನ ಮೆದುಳು ಆತನ ಕೈಯಲ್ಲಿ ಇರುವುದಿಲ್ಲ. ಮದ್ಯಪಾನದ(Alcohol) ನಶೆಯಲ್ಲಿ ಇರುವಾಗ ಏನು ಮಾಡುತ್ತಿರುವೆ ಎಂದು ಅರಿವೇ ಇರುವುದಿಲ್ಲ. ಕಂಠಪೂರ್ತಿ ಕುಡಿದು ಚಿತ್ತ್ ಹತ್ತಿಸಿ ಕೊಂಡರೆ, ಎದುರುಗಡೆ ಸ್ನೇಹಿತರಿದ್ದರು ಮೆದುಳಿಗೆ ತಿಳಿಯುವುದಿಲ್ಲ. ಇಂತಹದ್ದೇ ಪ್ರಕರಣವೊಂದು ಚಂಡೀಗಢ(Chandigarh)ದಲ್ಲಿ ನಡೆದಿದೆ.

  ಎಣ್ಣೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತರಿಬ್ಬರು ಕೆಲಸ ಮುಗಿಸಿಕೊಂಡು ಕುಡಿಯುವ ಪ್ಲಾನ್ ಹಾಕಿಕೊಂಡಿದ್ದರು. ಇಬ್ಬರೂ ಸಮನಾಗಿ ಹಂಚಿಕೊಂಡು ಎಣ್ಣೆ ಕೂಡ ತೆಗೆದುಕೊಂಡು ಬಂದಿದ್ದರು. ಮಾತನಾಡುತ್ತಾ ಎಣ್ಣೆ ಬಾಟಲಿಯನ್ನು ಮುಗಿಸಿದ್ದಾರೆ. ಕೊನೆಯಲ್ಲಿ ಒಂದು ಪೆಗ್ ಮಾತ್ರ ಉಳಿದುಕೊಂಡಿದೆ. ಆ ಕಡೆ ಪೆಗ್ ಗಾಗಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ. ನೀನು ಹೆಚ್ಚು ಕುಡಿದಿಯಾ ಈ ಪೆಗ್ ನನಗೆ ಕೊಡು ಎಂದು ಸ್ನೇಹಿತನೊಬ್ಬ ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮತ್ತೊಬ್ಬ ಸ್ನೇಹಿತ, ನೀನೇ ನನಗಿಂತ ಹೆಚ್ಚು ಕುಡಿದಿರುವೆ, ಇದನ್ನು ನಾನೇ ಕುಡಿಯುತ್ತೇನೆ ಎಂದು ಉಳಿದಿದ್ದ ಪೆಗ್ ಅನ್ನ, ಕುಡಿಯಲು ಮುಂದಾಗಿದ್ದ.

  ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಉಳಿದ ಪೆಗ್ ಕುಡಿಯಲು ಮುಂದಾಗಿದ್ದಕ್ಕೆ ಪಕ್ಕದಲ್ಲೇ ಬಿದ್ದಿದ್ದ, ಕಬ್ಬಿಣದ ರಾಡ್ ತೆಗೆದು ಸ್ನೇಹಿತನ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.

  ಇದನ್ನೂ ಓದಿ:Bengaluru Crime: ಬೆಂಗಳೂರಿನಲ್ಲಿ ಸಾವಿಗೆ ಶರಣಾದ ಮತ್ತೊಂದು ಕುಟುಂಬ, ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

  ಆರೋಪಿ ಸೋಹನ್ ಪಾಲ್ ಎಂಬಾತನನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹರಿಯಾಣ ಪಂಚಕುಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೋಹನ್ ಪಾಲ್ ಹಾಗೂ ಪ್ರದೀಪ್ ಎಂಬುವವರು ಅದೇ ಏರಿಯಾದ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

  ಕುಡಿದ ಮತ್ತಿನಲ್ಲಿ ಸೋಹನ್ ಪಾಲ್, ತನ್ನ ಸ್ನೇಹಿತ ಪ್ರದೀಪ್ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಸಾಯಿಸಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ನನ್ನ ಮೇಲೆ ಹಲ್ಲೆ ಮಾಡಲೆತ್ನಿಸಿದ, ಹೀಗಾಗಿ ನನ್ನ ರಕ್ಷಣೆಗೆ ರಾಡ್ ನಿಂದ ಹೊಡೆದೆ ಎಂದು ಹೇಳಿಕೊಂಡಿದ್ದ. ಈತನ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಅವರ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇದಾದ ಬಳಿಕ ಪೊಲೀಸರ ಮುಂದೆ ನಡೆದ ಘಟನೆಯನ್ನ ಪಾಲ್ ಬಾಯ್ಬಿಟ್ಟಿದ್ದ.

  ಬಳಿಕ ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಕುಡಿದ ಮತ್ತಿನಲ್ಲಿ ನಡೆದ ಘಟನೆಯ ಬಗ್ಗೆ ವಿವರವಾಗಿ ಪಾಲ್ ಸ್ಥಳದಲ್ಲಿ ತೋರಿಸಿದ್ದಾನೆ. ಪಾಲ್ ವಿರುದ್ಧ 302 ಅಡಿಯಲ್ಲಿ ಕೇಸ್ ದಾಖಲಿಸಿ, ಜೈಲಿಗೆ ಕಳಿಸಿದ್ದಾರೆ. ಕೇವಲ ಎಣ್ಣೆ ಕಡಿಮೆಯಾಯಿತು ಅನ್ನೋ ವಿಚಾರಕ್ಕೆ ಕೊಲೆ ಮಾಡಿ ಸೇರಿದ್ದಾನೆ. ಅತ್ತ ಪ್ರದೀಪ್ ಕೂಡ ಸಣ್ಣ ವಿಚಾರಕ್ಕೆ ಕೊಲೆಯಾಗಿ ಹೋಗಿದ್ದಾನೆ.ಈ ಇಬ್ಬರನ್ನೇ ನಂಬಿಕೊಂಡಿದ್ದ ಮನೆಯವರು ಮಾತ್ರ ಬೀದಿ ಪಾಲಾಗಿದ್ದು ನಿಜಕ್ಕೂ ದುರಂತವೇ ಸರಿ.

  • ವರದಿ -ವಾಸುದೇವ್.ಎಂ

  Published by:Latha CG
  First published: