ಮಹಿಳಾ ಸಬಲೀಕರಣದ ಕುರಿತು ಜಗತ್ತಿನೆಲ್ಲೆಡೆ ಅನೇಕ ಚರ್ಚೆಗಳು ನಡೆಯುತ್ತಿರುತ್ತದೆ. ಆದರೆ, ಪತಿ - ಪತ್ನಿಗೆ ಹಿಂಸೆ ನೀಡುವ ಪ್ರಕರಣಗಳು ದೇಶದಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜಸ್ಥಾನದಲ್ಲಿ ಪತಿ - ಪತ್ನಿಯ ಜಗಳ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಪತಿ ತನಗೆ ಹಿಂಸೆ ನೀಡಿದ್ದಾಲೆಂದು ಆರೋಪಿಸಿ ಮಹಿಳೆ ನೀಡಿರುವ ದೂರು ಉನ್ನತ ನ್ಯಾಯಾಲಯದ ಮೆಟ್ಟಿಲೇರಿದೆ. ಇನ್ನು, ಈ ಕೇಸ್‌ನಲ್ಲಿ ತನಗೆ ನಿರೀಕ್ಷಿತಾ ಜಾಮೀನು ಸಿಗಬೇಕೆಂದು ಆರೋಪಿ ಪತಿ ಅರ್ಜಿ ದಾಖಲಿಸಿದ್ದರೂ, ಸುಪ್ರೀಂ ಕೋರ್ಟ್ ಆರೋಪಿಯ ಪರ ವಕೀಲರ ವಾದಗಳಿಗೆ ಸೊಪ್ಪು ಹಾಕದೆ, ಜಾಮೀನು ನಿರಾಕರಿಸಿದೆ.
ರಾಜಸ್ಥಾನ ಮೂಲದ ಪತ್ನಿಗೆ ಹಿಂಸೆ ನೀಡಿರುವ ಆರೋಪ ಹೊತ್ತಿರುವ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹಿಂಸೆ ನೀಡಲು ಪತ್ನಿ ಮಾಡಿರುವ 300 ಅಶ್ಲೀಲ ಟಿಕ್‌ಟಾಕ್ ವಿಡಿಯೋಗಳೇ ಕಾರಣ ಎಂದು ಆರೋಪಿ ಪತಿ ಮನವಿ ಮಾಡಿಕೊಂಡರೂ ಸುಪ್ರೀಂ ಕೋರ್ಟ್ ಜಾಮೀನು ನೀಡಲಿಲ್ಲ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಜಾಮೀನು ನೀಡಲು ನಿರಾಕರಿಸಿದರು. ಆದರೆ, ಆರೋಪಿ ಯಾವುದೇ ಕ್ರೌರ್ಯವನ್ನು ಮಾಡಿಲ್ಲ ಎಂದು ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲರು ವಾದ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: ಜಾತಕ ಬದಲಿಸಿ ಮದುವೆ ಮಾಡಿದ್ದಕ್ಕೆ ಹೆಂಡತಿಗೆ ವಿಚ್ಛೇದನಕ್ಕೆ ಮುಂದಾದ ಗಂಡ; ಬಾಂಬೆ ಹೈಕೋರ್ಟ್ ಹೇಳಿದ್ದೇನು?
ಪತ್ನಿ ಸಲ್ಲಿಸಿದ್ದ ಎಫ್‌ಐಆರ್ ವಿರುದ್ಧ ರಾಜಸ್ಥಾನ ಮೂಲದ ವ್ಯಕ್ತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಪತಿಯನ್ನು ಕ್ರೂರಿ ಎಂದು ಮಹಿಳೆ ದೂರು ನೀಡಿದ್ದಳು.
ಪತ್ನಿ "300 ಅಶ್ಲೀಲ ಟಿಕ್-ಟಾಕ್ ವಿಡಿಯೋಗಳನ್ನು" ಮಾಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಾಡಿದ್ದರು. ಇದಕ್ಕುತ್ತರಿಸಿದ ನ್ಯಾಯಪೀಠ, ಈ ರೀತಿ ಮಾಡಿದ್ದಾರೆಂದು ನೀವು ಪತ್ನಿಗೆ ಕ್ರೌರ್ಯ ಮಾಡಬೇಕು ಎಂದರ್ಥವಲ್ಲ. ''ಅವಳು ವಿಡಿಯೋ ಮಾಡಿದ್ದರೂ, ನೀವು ಅವಳನ್ನು ಆ ರೀತಿ ನಡೆಸಿಕೊಳ್ಳಬಾರದು'' ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ನೀವು ಒಟ್ಟಿಗೆ ಇರಲು ಸಾಧ್ಯವಾಗದಿದ್ದರೆ ವಿಚ್ಛೇದನ ನೀಡಿ, ಹಿಂಸೆ ಮಾಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ಇನ್ನು, ಈ ವಿಷಯದಲ್ಲಿ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಆರೋಪಿ ಪರ ವಕೀಲ ವಾದ ಮಾಡಿದರು. ಆದರೆ, ಪತ್ನಿ ದಾಖಲಿಸಿರುವ ಎಫ್‌ಐಆರ್ ಉಲ್ಲೇಖಿಸಿದ ನ್ಯಾಯಪೀಠ, ಅರ್ಜಿದಾರರ ವಾದ ಒಪ್ಪುವುದಿಲ್ಲ ಎಂದೂ ಉತ್ತರಿಸಿದೆ. ಅಲ್ಲದೆ, ಎಫ್‌ಐಆರ್ ಏಕಪಕ್ಷೀಯವಾಗಿದೆ ಎಂಬ ವಕೀಲರ ವಾದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ, ಎಫ್‌ಐಆರ್‌ಗಳು ಯಾವಾಗಲೂ ಏಕಪಕ್ಷೀಯವಾಗಿದ್ದು, ಎರಡೂ ಕಡೆಯವರು ಜಂಟಿ ಎಫ್‌ಐಆರ್ ದಾಖಲಿಸಿದ್ದನ್ನು ನೋಡಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ