Crime News: ಅತ್ಯಾಚಾರ ನಡೆಸಲು ಯತ್ನಿಸಿದವನ ಗುಪ್ತಾಂಗವನ್ನೇ ಕತ್ತರಿಸಿದ ಮಹಿಳೆ!

Madhya Pradesh Crime: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ರಾತ್ರಿ ವೇಳೆ ಮಹಿಳೆಯ ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ವ್ಯಕ್ತಿಯ ಶಿಶ್ನವನ್ನೇ ಕತ್ತರಿಸಿದ್ದಾಳೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಿಧಿ (ಮಾ. 23): ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಆದರೆ, ಅತ್ಯಾಚಾರಿಗಳಿಗೆ ಶಿಕ್ಷೆ ಆಗಲು ಹತ್ತಾರು ವರ್ಷಗಳೇ ಬೇಕಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಹೀಗಾಗಿ, ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಕಾಮುಕನೊಬ್ಬನಿಗೆ ಮಹಿಳೆಯೇ ತಕ್ಕ ಪಾಠ ಕಲಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ವ್ಯಕ್ತಿಯ ಶಿಶ್ನವನ್ನೇ ಕತ್ತರಿಸಿದ್ದಾಳೆ. ರಾತ್ರಿ ವೇಳೆ ಮಹಿಳೆಯ ಮನೆಯೊಳಗೆ ನುಗ್ಗಿ, ಆಕೆಯ ಮೇಲೆ ಬಲಾತ್ಕಾರ ನಡೆಸಲು ಮುಂದಾದ ವ್ಯಕ್ತಿಯ ಗುಪ್ತಾಂಗವನ್ನು ಆಕೆ ಕತ್ತರಿಸಿದ್ದಾಳೆ. ಈ ಘಟನೆ ನಡೆದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದು, ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Viral Video: ಸೆಲ್ಫಿ ತೆಗೆಯುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಮೇಕೆ!; ವೈರಲ್ ಆಯ್ತು ವಿಡಿಯೋ

ಆ ಮಹಿಳೆಯ ಗಂಡ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಆಕೆ ತನ್ನ 13 ವರ್ಷದ ಮಗನೊಂದಿಗೆ ಮನೆಯಲ್ಲಿದ್ದಾಗ ರಾತ್ರಿ ವೇಳೆ 45 ವರ್ಷದ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿದ್ದ. ಆತ ಕಳ್ಳತನ ಮಾಡಲು ಬಂದಿದ್ದಾನೆ ಎಂದುಕೊಂಡು ಅಮ್ಮ-ಮಗ ಇಬ್ಬರೂ ಭಯದಿಂದ ಮನೆಯಿಂದ ಹೊರಗೆ ಓಡಲು ಮುಂದಾದರು. ಆಗ ಆತ ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಮುಂದಾಗಿದ್ದ. ಆಕೆಯ ಮಗ ಭಯದಿಂದ ಮನೆಯಿಂದ ಹೊರಗೆ ಓಡಿದ್ದ.

ಆಗ ಆತನಿಂದ ತಪ್ಪಿಸಿಕೊಳ್ಳಲು ಮಹಿಳೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ರೂಮಿನೊಳಗೆ ಓಡಿ, ಆತನಿಂದ ಬಚಾವಾಗಲು ಪ್ರಯತ್ನಿಸಿದ ಆಕೆ ತನ್ನನ್ನು ರಕ್ಷಿಸಿಕೊಳ್ಳಲು ನೆಲದಲ್ಲಿ ಬಿದ್ದಿದ್ದ ಚಾಕುವಿನಿಂದ ಆತನ ಶಿಶ್ನವನ್ನು ಕತ್ತರಿಸಿದ್ದಾಳೆ. ಆತನ ನೋವಿನಿಂದ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಪೊಲೀಸ್ ಠಾಣೆಗೆ ಹೋದ ಆಕೆ ರಾತ್ರಿ 1.30ರ ಸಮಯದಲ್ಲಿ ದೂರು ನೀಡಿದ್ದಾಳೆ. ತಕ್ಷಣ ಆಕೆಯ ಮನೆಗೆ ತೆರಳಿದ ಪೊಲೀಸರು ಆ ಕಾಮುಕನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ವ್ಯಕ್ತಿ ಕೂಡ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾನೆ. ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾಗಿ ಆತ ದೂರು ನೀಡಿದ್ದಾನೆ.
Published by:Sushma Chakre
First published: