Sushma ChakreSushma Chakre
|
news18-kannada Updated:May 22, 2020, 9:30 PM IST
ಸಾಂದರ್ಭಿಕ ಚಿತ್ರ
ಭೂಪಾಲ್ (ಮೇ 22): ಮದುವೆಯಾದ ಬಳಿಕ ಹೆಂಡತಿಯ ಮನೆಯಲ್ಲೇ ವಾಸವಾಗಿದ್ದ ಪತಿರಾಯನಿಗೆ ಆತನ ಅತ್ತೆ ಬಿಸಿಯಾದ ಚಪಾತಿ ಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯನ್ನೇ ಕೊಲೆ ಮಾಡಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಿಲ್ಲೋರದದಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ಗುಜರ್ ಬಾಯಿ ಸಾವನ್ನಪ್ಪಿದ್ದಾರೆ. 35 ವರ್ಷದ ಸುರೇಶ್ ಹೆಂಡತಿಯೊಂದಿಗೆ ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದ. ಸೋಮವಾರ ಮಧ್ಯರಾತ್ರಿ ಮನೆಗೆ ಹೋದ ಸುರೇಶ್ ಊಟಕ್ಕೆ ಕುಳಿತಾಗ ಚಪಾತಿ ತಣ್ಣಗಾಗಿತ್ತು. ಅಳಿಯನಿಗೆ ಊಟ ಬಡಿಸಲು ರಾತ್ರಿ ಎದ್ದುಬಂದ ಅತ್ತೆ ಗುಜರ್ ಬಾಯಿಗೆ ಬಿಸಿಯಾದ ಚಪಾತಿ ಬೇಕೆಂದು ಸುರೇಶ್ ಬೇಡಿಕೆಯಿಟ್ಟಿದ್ದಾನೆ. ಆ ನಡುರಾತ್ರಿಯಲ್ಲಿ ಬಿಸಿ ಚಪಾತಿ ಮಾಡಿಕೊಡಲು ಸಾಧ್ಯವಿಲ್ಲ ಎಂದು ಆತನ ಅತ್ತೆ ನಿರಾಕರಿಸಿದ್ದಾಳೆ.
ಇದನ್ನೂ ಓದಿ: ತೆಲಂಗಾಣದ ವಾರಂಗಲ್ನ ಬಾವಿಯಲ್ಲಿ 9 ಶವಗಳು ಪತ್ತೆ!
ಇದರಿಂದ ಕೋಪಗೊಂಡ ಸುರೇಶ್ ಅತ್ತೆಯ ಜೊತೆ ಜಗಳವಾಡಿದ್ದಾನೆ. ಮನೆ ಬಿಟ್ಟು ಹೋಗುವದಾಗಿ ಹೆದರಿಸಿದ್ದಾನೆ. ಅದ್ಯಾವುದಕ್ಕೂ ಅತ್ತೆ ಹೆದರದೆ ಇದ್ದಾಗ ಕೋಲಿನಿಂದ ಮನಬಂದಂತೆ ಅತ್ತೆಗೆ ಹೊಡೆದಿದ್ದಾನೆ. ಗುಜರ್ ಬಾಯಿ ಕಿರುಚಿಕೊಂಡ ಶಬ್ದ ಕೇಳಿ ಮನೆಯವರೆಲ್ಲ ಎದ್ದು ಬರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ತನ್ನ ಹೆಂಡತಿಯನ್ನು ಅಳಿಯನೇ ಕೊಂದಿರುವುದಾಗಿ ಗುಜರ್ ಬಾಯಿಯ ಗಂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅತ್ತೆ ಸಾವನ್ನಪ್ಪಿದ ಕೂಡಲೆ ಭಯದಿಂದ ಸುರೇಶ್ ಮನೆಯಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
First published:
May 22, 2020, 9:30 PM IST