ನವದೆಹಲಿ: ಕೊರೋನಾ ಬರಲಿ, ಲಾಕ್ಡೌನೇ ಆಗಲಿ ದೇಶಾದ್ಯಂತ ಕಳ್ಳತನ, ದರೋಡೆ, ಕೊಲೆಯ ಪ್ರಕರಣಗಳಂತೂ ಕಡಿಮೆಯಾಗುವುದಿಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಕೇವಲ 10 ವರ್ಷದ ಬಾಲಕನೊಬ್ಬ ಬ್ಯಾಂಕ್ ಅಧಿಕಾರಿಗಳನ್ನೇ ಯಾಮಾರಿಸಿ ಬರೋಬ್ಬರಿ 10 ಲಕ್ಷ ರೂ. ಹಣವನ್ನು ದರೋಡೆ ಮಾಡಿದ್ದಾನೆ!
ಅಚ್ಚರಿಯಾದರೂ ಇದು ಸತ್ಯ. ಮಧ್ಯಪ್ರದೇಶದಲ್ಲಿ 10 ವರ್ಷದ ಬಾಲಕ ಕೇವಲ 30 ಸೆಕೆಂಡ್ನಲ್ಲಿ ಬ್ಯಾಂಕಿನಿಂದ 10 ಲಕ್ಷ ರೂ.ಗಳಿದ್ದ ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದಾನೆ. ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ಜವಾದ್ ನಗರದ ಸಹಕಾರಿ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ. ಬಾಲಕ ಹಣದ ಬ್ಯಾಗ್ ಎತ್ತಿಕೊಂಡು ಹೋಗಿರುವು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕ ಈ ರೀತಿಯ ಕೃತ್ಯ ಎಸಗಬಹುದು ಎಂದು ಯಾರೂ ಊಹಿಸಿರದ ಕಾರಣ ಬ್ಯಾಂಕ್ನ ಸಿಬ್ಬಂದಿ ಮತ್ತು ಸೆಕ್ಯುರಿಟಿ ಆ ಹುಡುಗನ ಬಗ್ಗೆ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ, ಹಣದ ಬ್ಯಾಗ್ ಎಲ್ಲೂ ಕಾಣದಿದ್ದಾಗ ಗಾಬರಿಯಾದ ಬ್ಯಾಂಕ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಬಾಲಕ ಬ್ಯಾಗ್ ಎತ್ತಿಕೊಂಡು ಹೋಗಿರುವುದನ್ನು ನೋಡಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: Assam Flood: ಪ್ರವಾಹದಲ್ಲಿ ಸಿಲುಕಿದ ಜನರು, ಸಾಕುಪ್ರಾಣಿಗಳನ್ನು ದಡ ಸೇರಿಸಿದ ಅಸ್ಸಾಂ ಬಿಜೆಪಿ ಶಾಸಕ; ವಿಡಿಯೋ ವೈರಲ್
ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಕೋ ಆಪರೇಟಿವ್ ಬ್ಯಾಂಕ್ನೊಳಗೆ ಬಂದಿದ್ದ 10 ವರ್ಷದ ಬಾಲಕ ಕ್ಯಾಶಿಯರ್ ಚೇಂಬರಿಗೆ ತೆರಳಿದ್ದ. ಆದರೆ ಕ್ಯಾಶ್ ಕೌಂಟರಿನ ಎದುರು ಸಾಲಾಗಿ ಗ್ರಾಹಕರು ನಿಂತಿದ್ದರಿಂದ ಪುಟಾಣಿ ಬಾಲಕ ಅವರ ಕಣ್ಣಿಗೆ ಕಂಡಿರಲಿಲ್ಲ. ಹಾಗೇ, ಯಾರೂ ಆತನ ಬಗ್ಗೆ ಗಮನವನ್ನೂ ಕೊಟ್ಟಿರಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ