ಟ್ರೋಲ್ ವಿಡಿಯೋ ಮಾಡಲೆಂದು ಆಕ್ಸಿಡೆಂಟ್!; ಯುವಕರ ಹುಚ್ಚಾಟಕ್ಕೆ ಮಹಿಳೆ ಸಾವು

Crime News: ಕೇರಳದ ಆಲಪ್ಪುಳದಲ್ಲಿ 6 ಯುವಕರು ಸೇರಿ ಟ್ರೋಲ್ ವಿಡಿಯೋ ಮಾಡಲೆಂದು ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ರಸ್ತೆಯಲ್ಲಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಟ್ರೋಲ್ ಮಾಡಲು ವಿಡಿಯೋ ಮಾಡಿದ ಕೇರಳದ ಯುವಕರು

ಟ್ರೋಲ್ ಮಾಡಲು ವಿಡಿಯೋ ಮಾಡಿದ ಕೇರಳದ ಯುವಕರು

 • Share this:
  ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಯುವಕರನ್ನು ಟ್ರೋಲ್ ವಿಡಿಯೋಗಳನ್ನು ಅವರನ್ನು ಕೆರಳಿಸುವಂತೆ ಮಾಡುತ್ತವೆ. ಟ್ರೋಲ್ ಆದ ವಿಡಿಯೋ ನೋಡಿ ನಾವು ಈ ರೀತಿ ಮಾಡಬೇಕೆಂದು ಯುವಕರು ನಿರ್ಧರಿಸುತ್ತಾರೆ. ಆದರೆ, ಇದರಿಂದ ಆಗುವ ಅಪಾಯಗಳ ಮುನ್ಸೂಚನೆ ಯುವಕರಿಗೆ ತಿಳಿಯುವುದಿಲ್ಲ. ಇಂತಹದ್ದೆ ಅನಾಹುತಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ.

  ಕೇರಳದ ಆಲಪ್ಪುಳ ಜಿಲ್ಲೆಯ ಥ್ರಿಕ್ಕುನಾಪುಜ಼ ಎಂಬ ಸ್ಥಳದಲ್ಲಿ ಆರು ಯುವಕರು ಸೇರಿ ಟ್ರೋಲ್ ವಿಡಿಯೋ ಮಾಡಲೆಂದು ಅಡ್ಡಾದಿಡ್ಡಿ ವಾಹನ ಚಲಾಯಿಸಿ ರಸ್ತೆಯಲ್ಲಿ ಓರ್ವ ಮಹಿಳೆಗೆ ಡಿಕ್ಕಿ ಹೊಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉದ್ದೇಶಪೂರ್ವಕವಾಗಿ ಎಸಗಿದ ಅಪಘಾತ ಎಂದು ಥ್ರಿಕ್ಕುನಾಪುಜ಼ ಪೊಲೀಸರು ಯುವಕರ ವಿರುದ್ಧ ದೂರು ದಾಖಲಿಸಿಕೊಂಡು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

  ಟ್ರೋಲ್ ಆಗಲೆಂದು ತೆಗೆದ ವಿಡಿಯೋಗೆ ಮಹಿಳೆ ಬಲಿ!
  ಸಾರ್ವಜನಿಕ ಸ್ಥಳದಲ್ಲಿ ವಾಹನ ಅಡ್ಡಾದಿದ್ದಿ ಚಲಾಯಿಸಿದಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279, ಮೋಟಾರ್ ವೆಹಿಕಲ್ ಕಾಯ್ದೆಯ ಸೆಕ್ಷನ್ 112, ಅಪಾಯಕಾರಿಯಾಗಿ ಬೈಕ್ ಚಲಾಯಿಸಿದಕ್ಕೆ ಸೆಕ್ಷನ್ 184 ಅಡಿ ದೂರು ದಾಖಲಿಸಿಕೊಂಡಿದ್ದಾರೆ. ನಾಲ್ವು ವಾಹನಗಳಲ್ಲಿ ಆರು ಯುವಕರು ಸೇರಿ ಟ್ರೋಲ್ ಆಗಲೆಂದು ವಿಡಿಯೋ ಮಾಡುತ್ತಿದ್ದರು. ಪಲ್ಲನಾ ಮೂಲದ ಅಲ್ತಾಫ್ ಬೈಕ್ ಓಡಿಸುತ್ತಿದ್ದ. ಈ ವೇಳೆ ಮತ್ತೊಂದು ಬೈಕ್, ಇನ್ನೊಂದು ಬೈಕ್ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಗೆ ಬೈಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ವಿಡಿಯೋ ಟ್ರೋಲ್ ಆಗಲೆಂದು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ. ಈ ವೇಳೆ ಅನಾಹುತ ನಡೆದರೂ ಯುವಕರು ಸ್ಥಳದಲ್ಲಿ ಕ್ಷಮೆ ಯಾಚಿಸಿ ತಮ್ಮ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ಇದನ್ನೂ ಓದಿ: SBI ಗ್ರಾಹಕರೇ ಗಮನಿಸಿ..! ಎಟಿಎಂನಿಂದ ಹಣ ಹಿಂಪಡೆಯುವ ನಿಯಮ ಚೇಂಜ್..!

  ಈ ವಿಡಿಯೋ ನೋಡಿದ ಸ್ಥಳೀಯರು ಆರ್​ಟಿಓಗೆ ಈ ಯುವಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದಾರೆ. ಯುವಕರು ಪೋಸ್ಟ್ ಮಾಡಿದ ವಿಡಿಯೋ ಅಪಘಾತದಲ್ಲಿ ಮಲಯಾಳಂನ 'ಇನ್ ಹರಿಹರ್ ನಗರ' ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಜಗದೀಶ್ ಎಂಬುವವರು ನಿರ್ವಹಿಸಿದ ಅಪ್ಪುಕ್ಕಟ್ಟನ್ ಎಂಬ ಪಾತ್ರವು ವಯಸ್ಸಾದ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿ ‘ನಾನು ಮಾತ್ರ ಅಲ್ಲ, ಅವರು ಕೂಡ ಇದ್ದಾರೆ’ ಎಂಬ ಸಂಭಾಷಣೆ ಬರುತ್ತದೆ. ಇದೇ ರೀತಿ ಯುವಕರು ‘ನಾನು ಮಾತ್ರ, ಅವರು ಕೂಡ ಇದ್ದಾರೆ' ಎಂದು ಶೀರ್ಷಿಕೆ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  ಯುವಕರ ದಾರಿ ತಪ್ಪಿಸಿದ ಮಲಯಾಳಂ ಚಿತ್ರ!:
  ಯುವಕರು ಪೋಸ್ಟ್ ಮಾಡಿದ ವಿಡಿಯೋ ಅಪಘಾತವನ್ನು "ನಾನು ಮಾತ್ರವಲ್ಲ, ಅವರು ಕೂಡ ಇದ್ದಾರೆ" ಎಂಬ ಮಲಯಾಳಂ ಚಿತ್ರ ಇನ್ ಹರಿಹರ್ ನಗರದ ಸಂಭಾಷಣೆಯೊಂದಿಗೆ ತೋರಿಸುತ್ತದೆ. ಚಿತ್ರದಲ್ಲಿ, ಜಗದೀಶ್ ನಿರ್ವಹಿಸಿದ ಅಪ್ಪುಕ್ಕಟ್ಟನ್ ಎಂಬ ಪಾತ್ರವು ವಯಸ್ಸಾದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದ ನಂತರ ಸಂಭಾಷಣೆ ಹೇಳುತ್ತದೆ.

  ಈ ಘಟನೆಗೆ ಸಂಬಂಧಿಸಿದ್ದಂತೆ ಯುವಕರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಅವರ ಪರವಾನಗಿಗಳನ್ನು ಆರು ತಿಂಗಳವರೆಗೆ ಅಮಾನತುಗೊಳಿಸುವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜ.27ರಂದು ನಂಗಿಯಾರ್ಕುಲಂಗರ ಜಂಕ್ಷನ್ ಬಳಿ 38 ವರ್ಷದ ಮಹಿಳೆಗೆ ಈ ಗುಂಪಿನಲ್ಲಿದ್ದ ಯುವಕನೊಬ್ಬ ಬೈಕ್ ಡಿಕ್ಕಿ ಹೊಡೆದಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
  Published by:Sushma Chakre
  First published: