• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅಫ್ಘಾನ್​ ಜೈಲಿನ ಮೇಲೆ ರಾತ್ರೋರಾತ್ರಿ ಐಸಿಸ್​ ಉಗ್ರರ ಗುಂಡಿನ ದಾಳಿ; 21ಕ್ಕೂ ಹೆಚ್ಚು ಜನ ಸಾವು

ಅಫ್ಘಾನ್​ ಜೈಲಿನ ಮೇಲೆ ರಾತ್ರೋರಾತ್ರಿ ಐಸಿಸ್​ ಉಗ್ರರ ಗುಂಡಿನ ದಾಳಿ; 21ಕ್ಕೂ ಹೆಚ್ಚು ಜನ ಸಾವು

ಅಫ್ಗಾನಿಸ್ತಾನದಲ್ಲಿ ಐಸಿಸ್ ಉಗ್ರರ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು

ಅಫ್ಗಾನಿಸ್ತಾನದಲ್ಲಿ ಐಸಿಸ್ ಉಗ್ರರ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು

ಅಫ್ಘಾನಿಸ್ತಾನದ ಜಲಲಾಬಾದ್​ನಲ್ಲಿ ಜೈಲಿನ ಮುಖ್ಯದ್ವಾರದ ಬಳಿ ನಿನ್ನೆ ರಾತ್ರಿ ವಾಹನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ ಐಸಿಸ್ ಉಗ್ರರು ಸೀದಾ ಒಳಗೆ ನುಗ್ಗಿ ಗುಂಡಿನ ಮಳೆಗರೆದರು.

  • Share this:

ಜಲಲಾಬಾದ್ (ಆ. 3): ಅಪ್ಘಾನಿಸ್ತಾನದ ಜಲಲಾಬಾದ್​ನಲ್ಲಿ ಅಪ್ಘಾನ್​ ಭದ್ರತಾ ಪಡೆ ಮತ್ತು ಐಸಿಸ್​ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 21ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಜೈಲಿನ ಮೇಲೆ ದಾಳಿ ನಡೆಸಿದ ಉಗ್ರರು ಗುಂಡಿನ ದಾಳಿ ಶುರು ಮಾಡಿದ್ದರು. ಆ ಉಗ್ರರು ಐಸಿಸ್ ಸಂಘಟನೆಗೆ ಸೇರಿದವರು ಎನ್ನಲಾಗಿದೆ.


ಈ ಸಂಘರ್ಷದಲ್ಲಿ ಜೈಲಿನಲ್ಲಿದ್ದ ಕೈದಿಗಳು ಮಾತ್ರವಲ್ಲದೆ ನಾಗರಿಕರು, ಜೈಲು ಮೇಲ್ವಿಚಾರಕರು ಮತ್ತು ಅಫ್ಘಾನ್ ಭದ್ರತಾ ಪಡೆಯ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಗವರ್ನರ್ ವಕ್ತಾರ ಅತುವುಲ್ಲಾ ಖೋಗ್ಯಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾತ್ರೋರಾತ್ರಿ ನಡೆದ ದಾಳಿಯಲ್ಲಿ 43ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಭಾನುವಾರ ರಾತ್ರಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಉಗ್ರರು ಜೈಲನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಜೈಲಿನ ಮುಖ್ಯದ್ವಾರದ ಬಳಿ ವಾಹನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ ಉಗ್ರರು ಸೀದಾ ಒಳಗೆ ನುಗ್ಗಿ ಗುಂಡಿನ ಮಳೆಗರೆದರು. ಇದುವರೆಗೂ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಪ್ಘಾನ್ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.


(ಇನ್ನಷ್ಟು ಮಾಹಿತಿಗೆ ನಿರೀಕ್ಷಿಸಿ...)

Published by:Sushma Chakre
First published: