HOME » NEWS » National-international » CRIME NEWS INDIAN ORIGIN WOMAN TORTURES 24 YEAR OLD HOUSE MAID TO DEATH IN SINGAPORE STG SCT

ಸಿಂಗಾಪುರದಲ್ಲಿ ಮನೆ ಕೆಲಸದವಳಿಗೆ ಚಿತ್ರಹಿಂಸೆ ನೀಡಿ ಕೊಂದ ಭಾರತೀಯ ಮಹಿಳೆ

ಭಾರತ ಮೂಲದ 40 ವರ್ಷದ ಗಾಯತ್ರಿ ಮುರುಗಯನ್ ಮನೆಗೆ 24 ವರ್ಷದ ಮ್ಯಾನ್ಮಾರ್ ಮೂಲದ ಯುವತಿ ಐದು ತಿಂಗಳ ಹಿಂದೆ ಹೊಸದಾಗಿ ಮನೆ ಕೆಲಸಕ್ಕೆ ಸೇರಿಕೊಂಡಳು. ಆ ಯುವತಿ ಮೇಲೆ ಹಲ್ಲೆ ನಡೆಸಿ ಬರೆ ಹಾಕಿ ಊಟ ನೀಡದೇ ಚಿತ್ರಹಿಂಸೆ ನೀಡಿ ಗಾಯತ್ರಿ ಕೊಂದಿದ್ದಾಳೆ.

news18-kannada
Updated:February 25, 2021, 2:42 PM IST
ಸಿಂಗಾಪುರದಲ್ಲಿ ಮನೆ ಕೆಲಸದವಳಿಗೆ ಚಿತ್ರಹಿಂಸೆ ನೀಡಿ ಕೊಂದ ಭಾರತೀಯ ಮಹಿಳೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಫೆ. 25): ಭಾರತೀಯ ಮೂಲದ 40 ವರ್ಷದ ಮಹಿಳೆಯೊಬ್ಬಳು ಸಿಂಗಾಪುರದಲ್ಲಿ 24 ವರ್ಷದ ಮ್ಯಾನ್ಮಾರ್ ಮೂಲದ ಮನೆ ಕೆಲಸದವಳಿಗೆ ಹಿಂಸೆ ನೀಡಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ. ಪ್ರಾಸಿಕ್ಯೂಷನ್ ಹೇಳುವಂತೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಸೇವಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಚಿತ್ರಹಿಂಸೆ ನೀಡಿ ಹಸಿವಿನಿಂದ ಬಳಲಿ ಸಾಯುವಂತೆ ಮಾಡಿದ್ದ ಭಾರತೀಯ ಮೂಲದ ಮಹಿಳೆಯ ಈ ಕ್ರೂರ ಕೆಲಸಕ್ಕೆ ಖಂಡನೆ ವ್ಯಕ್ತವಾಗಿದೆ.

ಇನ್ನು, ಭಾರತೀಯ ಮೂಲದ 40 ವರ್ಷದ ಮಹಿಳೆಯನ್ನು ಗಾಯತ್ರಿ ಮುರುಗಯನ್ ಎಂದು ಗುರುತಿಸಲಾಗಿದೆ. ಈಕೆ ಮನೆಗೆ 24 ವರ್ಷದ ಮ್ಯಾನ್ಮಾರ್ ಮೂಲದ ಯುವತಿ ಐದು ತಿಂಗಳ ಹಿಂದೆ ಹೊಸದಾಗಿ ಮನೆ ಕೆಲಸಕ್ಕೆ ಸೇರಿಕೊಂಡಳು. ಐದು ತಿಂಗಳ ಬಳಿಕ ಕೆಲಸಕ್ಕೆ ಸೇರಿಕೊಂಡ ಯುವತಿಗೆ ಗಾಯತ್ರಿ ಚಿತ್ರಹಿಂಸೆ ನೀಡಲು, ನಿಂದಿಸಲು ಶುರುಮಾಡಿದ್ದಳು. ಯುವತಿ ಮೇಲೆ ಹಲ್ಲೆ ನಡೆಸಿ ಬರೆ ಹಾಕಿ ಊಟ ನೀಡದೇ 24ರ ಯುವತಿಯ ತೂಕ 24 ಕೆಜಿ ಆಗುವಷ್ಟು ಚಿತ್ರಹಿಂಸೆ ನೀಡಿದ್ದಳು ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

24 ವರ್ಷದ ಮನೆ ಕೆಲಸದವಳು ಮೆದುಳಿನ ಗಾಯ ಮತ್ತು ಕುತ್ತಿಗೆ ಮೇಲೆ ಆಗಿರುವ ತೀವ್ರ ಗಾಯದಿಂದಾಗಿ ಸಾವನ್ನಪ್ಪಿದ್ದಾಳೆ. ಮನೆ ಸೇವಕಿ ಸಾಯುವ ಮುನ್ನ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದಳು. ಮನೆಯಲ್ಲಿ ರಾತ್ರಿ ವೇಳೆ ಹೊಟ್ಟೆ ಹಸಿವು ತಾಳಲಾರದೇ ಸೇವಕಿ ಕಿಟಕಿ ಮೂಲಕ ಆಹಾರವನ್ನು ನೀಡುವಂತೆ ಬೇಡಿಕೊಂಡಳು. ಆಗ ಗಾಯತ್ರಿ ಆಕೆ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಳು.

28 ಆರೋಪಗಳನ್ನು ಒಪ್ಪಿಕೊಂಡ ಗಾಯತ್ರಿ:
ಫೆ.23ರಂದು ತಾನು ಮಾಡಿರುವುದು ತಪ್ಪೊಪ್ಪಿಕೊಂಡಿರುವ ಗಾಯತ್ರಿ 28 ಆರೋಪಗಳನ್ನು ಒಪ್ಪಿಕೊಂಡಿದ್ದಾಳೆ. ನರಹತ್ಯೆ, ಉದ್ದೇಶಪೂರ್ವಕವಾಗಿ ಹೊಟ್ಟೆ ಹಸಿವಿನಿಂದ ಬಳಲುವಂತೆ ಮಾಡಿರುವುದು, ಹಲ್ಲೆ, ನಿಂದನೆ, ಬಿಸಿಯಾದ ವಸ್ತುಗಳಿಂದ ಹಲ್ಲೆ ನಡೆಸಿ ಗಾಯಗೊಳಿಸುವುದು ಈ ರೀತಿಯ 28 ಆರೋಪಗಳಿಗೆ ಗಾಯತ್ರಿ ಒಪ್ಪಿಕೊಂಡಿದ್ದಾಳೆ. ಈಕೆಗೆ ವಿಧಿಸುವ ಶಿಕ್ಷೆಯಲ್ಲಿ ಇನ್ನೂ 87 ಆರೋಪಗಳನ್ನು ಪರಿಗಣಿಸಲಾಗುವುದು. ಇನ್ನು, ಈಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು.

ಇದನ್ನೂ ಓದಿ: ಭಯಾನಕ ಘಟನೆ; ಆಲೂಗಡ್ಡೆಯೊಂದಿಗೆ ಹೃದಯ ಬೇಯಿಸಿ ಅಡುಗೆ ಮಾಡಿದ ಕೊಲೆಗಾರ!

ಕ್ರೂರ ಕೃತ್ಯ ಎಸಗಿರುವ ಗಾಯತ್ರಿಯ ಮನೆ ಕೆಲಸ ಮಾಡಲು ಮೃತ ಯುವತಿ ಸಿಂಗಾಪುರದಿಂದ ಬಂದಿದ್ದಳು. ಗಾಯತ್ರಿಗೆ ಮೂರು ವರ್ಷದ ಮಗನಿದ್ದಾನೆ. ಇನ್ನು, ಗಾಯತ್ರಿ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ 35 ದಿನಗಳ ದೃಶ್ಯಾವಳಿಗಳನ್ನು ಪರಿಗಣಿಸಿದಾಗ ಗಾಯತ್ರಿ ತಪ್ಪು ಎಸಗಿರುವುದು ಬಹಿರಂಗವಾಗಿದೆ.ಶವಪರೀಕ್ಷೆ ವೇಳೆ ಮೃತ ಸೇವಕಿ ದೇಹದ ಮೇಲೆ 31 ಇತ್ತೀಚಿನ ಗಾಯಗಳು ಆಗಿದ್ದವು. ದೇಹದೊಳಗೆ 47 ಗಾಯಗಳಾಗಿರುವುದು ಕಂಡುಬಂದಿದೆ. ಮೃತ ಸೇವಕಿಯು ಮೆದುಳಿನ ಗಾಯ ಮತ್ತು ಕುತ್ತಿಗೆ ಮೇಲೆ ಆಗಿರುವ ಗಾಯದಿಂದ ನರಳಾಡುತ್ತಿದ್ದಳು. ಅಷ್ಟೇ ಅಲ್ಲದೇ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಸೇವಕಿಗೆ ಪೌಷ್ಟಿಕಾಂಶಗಳ ಕೊರತೆ ಎದುರಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಿರಿಯ ವಕೀಲ ಮೊಹಮ್ಮದ್ ಫೈಜಲ್ ನೇತೃತ್ವದ ಪ್ರಾಸಿಕ್ಯೂಷನ್, ಮನೆಯ ಸೇವಕಿಗೆ ಉದ್ದೇಶ ಪೂರ್ವಕವಾಗಿ ಚಿತ್ರಹಿಂಸೆ, ನಿಂದನೆ, ಹೊಟ್ಟೆ ಹಸಿವಿನಿಂದ ನರಳಾಡಿ ಸಾಯುವಂತೆ ಮಾಡಿದ ಆರೋಪಿ ಗಾಯತ್ರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ವಾದ ಮಂಡಿಸಿದ್ದಾರೆ. ಆಕೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದರೇ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು, ಗಾಯತ್ರಿ ಪತಿಯ ವಿರುದ್ಧ ಕೂಡ ಸೇವಕಿ ಮೇಲೆ ನಿಂದನೆ ಆರೋಪ ಬಾಕಿ ಉಳಿದಿದೆ.
Published by: Sushma Chakre
First published: February 25, 2021, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories