HOME » NEWS » National-international » CRIME NEWS INDIAN COUPLE FOUND DEAD IN AMERICA AFTER 4 YEAR OLD DAUGHTER SEEN CRYING IN BALCONY SCT

ಅಪ್ಪ-ಅಮ್ಮನ ಹೆಣ ನೋಡಿ ಅಳುತ್ತಾ ನಿಂತ ಕಂದಮ್ಮ; ಭಾರತ ಮೂಲದ ದಂಪತಿ ಅಮೆರಿಕದಲ್ಲಿ ಶವವಾಗಿ ಪತ್ತೆ

ಮನೆಯ ಲಿವಿಂಗ್ ರೂಂನಲ್ಲಿದ್ದ ಗಂಡನೊಂದಿಗೆ ಹೆಂಡತಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಆತ ಆಕೆಯ ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ. ಮೃತರಾದವರನ್ನು 32 ವರ್ಷದ ಬಾಲಾಜಿ ಭಾರತ್ ರುದ್ರಾವರ್, 30 ವರ್ಷದ ಆರತಿ ಬಾಲಾಜಿ ರುದ್ರಾವರ್ ಎಂದು ಗುರುತಿಸಲಾಗಿದೆ.

news18-kannada
Updated:April 19, 2021, 8:13 AM IST
ಅಪ್ಪ-ಅಮ್ಮನ ಹೆಣ ನೋಡಿ ಅಳುತ್ತಾ ನಿಂತ ಕಂದಮ್ಮ; ಭಾರತ ಮೂಲದ ದಂಪತಿ ಅಮೆರಿಕದಲ್ಲಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ. 19): 4 ವರ್ಷದ ಬಾಲಕಿ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಅಳುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದಾಗ ಆಕೆಯ ಅಪ್ಪ-ಅಮ್ಮ ಮೃತಪಟ್ಟಿರುವುದು ಪತ್ತೆಯಾಗಿದೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಮೂಲದ ದಂಪತಿ ಸಾವನ್ನಪ್ಪಿದವರು. ಈ ಕುರಿತು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದ್ದು, ಭಾರತೀಯ ದಂಪತಿಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮನೆಯ ಲಿವಿಂಗ್ ರೂಂನಲ್ಲಿದ್ದ ಗಂಡನೊಂದಿಗೆ ಹೆಂಡತಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಆತ ಆಕೆಯ ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ. ಮೃತರಾದವರನ್ನು 32 ವರ್ಷದ ಬಾಲಾಜಿ ಭಾರತ್ ರುದ್ರಾವರ್, 30 ವರ್ಷದ ಆರತಿ ಬಾಲಾಜಿ ರುದ್ರಾವರ್ ಎಂದು ಗುರುತಿಸಲಾಗಿದೆ. ಅವರಿಬ್ಬರ ಮೃತದೇಹಗಳನ್ನು ನ್ಯೂಜೆರ್ಸಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಬುಧವಾರ ಬೆಳಗ್ಗೆ ನನ್ನ ಮಗನ ಅಪಾರ್ಟ್​ಮೆಂಟ್​ನ ಪಕ್ಕದ ಮನೆಯವರು ನನ್ನ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಾ ನಿಂತಿದ್ದನ್ನು ನೋಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾರೆ. ಆಗ ನನ್ನ ಮಗ-ಸೊಸೆ ಸಾವನ್ನಪ್ಪಿರುವುದು ಗೊತ್ತಾಗಿದೆ ಎಂದು ಬಾಲಾಜಿ ಅವರ ತಂದೆ ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅದಾದ ಬಳಿಕ ಸತ್ಯಾಂಶ ತಿಳಿಯಲಿದೆ.
Published by: Sushma Chakre
First published: April 19, 2021, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories