HOME » NEWS » National-international » CRIME NEWS HYDERABAD MUSLIM CLERIC ARRESTED FOR DUPING CANCER PATIENT SCT STG

ಹೈದರಾಬಾದ್‌ನಲ್ಲಿ ಕ್ಯಾನ್ಸರ್ ರೋಗಿ ಹೆಸರಿನಲ್ಲಿ ವಂಚನೆ; ಮುಸ್ಲಿಂ ಧಾರ್ಮಿಕ ಮುಖಂಡನ ಬಂಧನ

ತೆಲಂಗಾಣ ಸಿಎಂ ಪರಿಹಾರ ನಿಧಿಯಿಂದ ಕ್ಯಾನ್ಸರ್ ರೋಗಿಗೆ ಪರಿಹಾರ ದೊರಕಿಸುವುದಾಗಿ ಹೇಳಿ ಮೋಸ ಮಾಡಿದ ಆರೋಪ ಹೈದರಾಬಾದ್​ನ ಸೀರ್ಟ್-ಉನ್-ನಬಿ ಅಕಾಡೆಮಿಯ ಅಧ್ಯಕ್ಷ ಆಲಿ ಖಾದ್ರಿ ಮೇಲಿದೆ.

news18-kannada
Updated:February 24, 2021, 9:01 AM IST
ಹೈದರಾಬಾದ್‌ನಲ್ಲಿ ಕ್ಯಾನ್ಸರ್ ರೋಗಿ ಹೆಸರಿನಲ್ಲಿ ವಂಚನೆ; ಮುಸ್ಲಿಂ ಧಾರ್ಮಿಕ ಮುಖಂಡನ ಬಂಧನ
ಮುಸ್ಲಿಂ ಲೀಡರ್
  • Share this:
ಹೈದರಾಬಾದ್ (ಫೆ. 24): ಕ್ಯಾನ್ಸರ್ ರೋಗಿಯೊಬ್ಬರಿಗೆ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಹೈದರಾಬಾದ್ ನಗರದ ಮುಸ್ಲಿಂ ಧಾರ್ಮಿಕ ಮುಖಂಡನನ್ನು ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ತೆಲಂಗಾಣ ಸಿಎಂ ಪರಿಹಾರ ನಿಧಿಯಿಂದ ಕ್ಯಾನ್ಸರ್ ರೋಗಿಗೆ ಪರಿಹಾರ ದೊರಕಿಸುವ ಆಸೆ ಹುಟ್ಟಿಸಿ ಮೋಸ ಮಾಡಿದ ಆರೋಪ ಹೈದರಾಬಾದ್ ಹಳೆಯ ನಗರದ ಸೀರ್ಟ್-ಉನ್-ನಬಿ ಅಕಾಡೆಮಿಯ ಅಧ್ಯಕ್ಷ ಆಲಿ ಖಾದ್ರಿ ಮೇಲಿದೆ. ಈತನು ಹಳೆಯ ನಗರದ ಜಮೀಲ್ ಸಿದ್ದಿಕಿ ಎಂಬುವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಯಿಂದ ಮುಸ್ಲಿಂ ಮುಖಂಡ ಖಾದ್ರಿ ಎರಡು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕ್ಯಾನ್ಸರ್ ರೋಗಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಹಣ ದೊರಕಿಸಿ ಕೊಡುವದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಅಜಿತ್ ದೋವಲ್​ರನ್ನು ಭೇಟಿ ಮಾಡಿದ್ದ ವಂಚಕ ಖಾದ್ರಿ!:
ಬಂಧಿತ ಆಲಿ ಖಾದ್ರಿಯೂ 2020ರ ಜನವರಿ ತಿಂಗಳಿನಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗವು ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಜಮೀಲ್ ಸಿದ್ದಿಕಿಗೆ ಪರಿಹಾರ ನೀಡುವ ನೆಪದಲ್ಲಿ ನಗದು ಹಣ ಸಂಗ್ರಹಿಸಿದ್ದಾನೆ. ಆದರೆ ನಗದು ರೂಪದಲ್ಲಿ ಬಂದ ಪರಿಹಾರದ ಹಣ ರೋಗಿಗೆ ನೀಡದೇ ವಂಚನೆ ಮಾಡಿದ್ದನು. ಆದ್ದರಿಂದ ಈತನ ವಿರುದ್ಧ ಐಪಿಸಿ ಸೆಕ್ಷನ್ 420, 406 ಅಡಿಯಲ್ಲಿ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಕಾಳಿಂಗ ರಾವ್ ಮಾತನಾಡಿ, ಬಂಧಿತ ಖಾದ್ರಿ ವಿರುದ್ಧ ಶೂನ್ಯ ಎಫ್ಐಆರ್ ಹೊರಡಿಸಿದ್ದೇವೆ. ಪ್ರಾದೇಶಿಕ ನ್ಯಾಯ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ಚಾರ್ಮಿನಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಆಯುಕ್ತರ ಕಾರ್ಯಪಡೆಯೂ ಆಲಿ ಖಾದ್ರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Published by: Sushma Chakre
First published: February 24, 2021, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories