HOME » NEWS » National-international » CRIME NEWS HARYANA BUSINESSMAN FAKES MURDER TO CLAIM 2 CRORE RUPEES INSURANCE SCT

Crime News: 2 ಕೋಟಿ ರೂ. ಇನ್ಶುರೆನ್ಸ್​ ಹಣಕ್ಕಾಗಿ ಸಾವಿನ ನಾಟಕವಾಡಿದ ಉದ್ಯಮಿ; ಕೊನೆಗೂ ಬಯಲಾಯ್ತು ಸತ್ಯ

Crime News: ರಾಮ್ ಮೆಹರ್ ಬಳಿಯಿದ್ದ 11 ಲಕ್ಷ ಲೂಟಿ ಮಾಡಲು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ, ಹಣ ದೋಚಿಕೊಂಡು, ಕಾರಿಗೆ ಬೆಂಕಿ ಹಚ್ಚಿ, ಕೊಲೆ ಮಾಡಿರಬಹುದು ಎಂಬ ಅನುಮಾನದಿಂದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.

Sushma Chakre | news18-kannada
Updated:October 11, 2020, 12:46 PM IST
Crime News: 2 ಕೋಟಿ ರೂ. ಇನ್ಶುರೆನ್ಸ್​ ಹಣಕ್ಕಾಗಿ ಸಾವಿನ ನಾಟಕವಾಡಿದ ಉದ್ಯಮಿ; ಕೊನೆಗೂ ಬಯಲಾಯ್ತು ಸತ್ಯ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಅ. 11): ಹಣಕ್ಕಾಗಿ ಕೆಲವರು ಎಂತಹ ಕೆಲಸ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಹರಿಯಾಣದಲ್ಲಿ ಉದ್ಯಮಿಯೊಬ್ಬರು ತಮ್ಮ ವಿಮೆಯ (ಇನ್ಶುರೆನ್ಸ್​) ಹಣಕ್ಕಾಗಿ ತಾನೇ ಸಾವನ್ನಪ್ಪಿದ್ದಾಗಿ ಎಲ್ಲರನ್ನೂ ನಂಬಿಸಿರುವ ಘಟನೆ ಬೆಳಕಿಗೆ ಬಂದಿದೆ. 2 ಕೋಟಿ ರೂ. ವಿಮೆ ಮಾಡಿಸಿದ್ದ ಛತ್ತೀಸ್​ಘಡದ 35 ವರ್ಷದ ಉದ್ಯಮಿ ರಾಮ್ ಮೆಹರ್ ವಿಮೆಯ ಹಣಕ್ಕಾಗಿ ತನ್ನದೇ ಕಾರಿಗೆ ಬೆಂಕಿ ಹಚ್ಚಿ, ತಾನು ಸಾವನ್ನಪ್ಪಿದ್ದಾಗಿ ನಂಬಿಸಿದ್ದರು. ಆದರೆ, ರಾಮ್ ಮೆಹರ್ ಕುಟುಂಬಸ್ಥರು ನೀಡಿದ ಮಾಹಿತಿಯಿಂದ ಅನುಮಾನಕ್ಕೊಳಗಾದ ಪೊಲೀಸರು ತನಿಖೆ ನಡೆಸಿದರು. ಆ ವೇಳೆ ಸತ್ಯಾಂಶ ಹೊರಬಿದ್ದಿದೆ. ಹರಿಯಾಣದ ಹಾನ್ಸಿಯಲ್ಲಿರುವ ದಾಟಾ ಗ್ರಾಮದಲ್ಲಿರುವ ರಾಮ್ ಮೆಹರ್ ಎಂಬ ಉದ್ಯಮಿ ಈ ರೀತಿಯ ಕೊಲೆಯ ನಾಟಕವಾಡಿ ಸಿಕ್ಕಿಬಿದ್ದವರು. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ರಾಮ್ ಮೆಹರ್ ತಾವು ಸಾವನ್ನಪ್ಪಿದರೆ ಮನೆಯವರಿಗೆ 2 ಕೋಟಿ ರೂ. ವಿಮೆಯ ಹಣ ಸಿಗುತ್ತದೆ ಎಂದು ಸಾವಿನ ನಾಟಕವಾಡಿದ್ದರು. ಬರ್ವಾಲ್​ದಲ್ಲಿ ಗ್ಲಾಸ್ ಡಿಸ್ಪೋಸಲ್ ಉದ್ಯಮ ನಡೆಸುತ್ತಿದ್ದ ರಾಮ್ ಮೆಹರ್ ಭಾರೀ ನಷ್ಟ ಅನುಭವಿಸಿದ್ದರು.

ಮಂಗಳವಾರ ಮನೆಯವರಿಗೆ ಫೋನ್ ಮಾಡಿದ್ದ ರಾಮ್ ಮೆಹರ್ ತನ್ನನ್ನು ಯಾರೋ ಬೈಕ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ತನ್ನ ಬಳಿ ಕಾರಿನಲ್ಲಿ 11 ಲಕ್ಷ ರೂ.ಗಳಿದ್ದು, ಪ್ರಾಣಭಯ ಕಾಡುತ್ತಿದೆ ಎಂದು ಹೇಳಿದ್ದರು. ಅದಾದ ಮೇಲೆ ಮನೆಯವರು ಎಷ್ಟೇ ಪ್ರಯತ್ನಿಸಿದ್ದರೂ ರಾಮ್ ಮೆಹರ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಿದ ರಾಮ್ ಕುಟುಂಬಸ್ಥರು ಅವರು ಬರುತ್ತಿದ್ದ ರಸ್ತೆಯಲ್ಲಿ ಹೋಗಿ ನೋಡಿದಾಗ ರಾಮ್ ಮೆಹರ್ ಅವರ ಕಾರು ಹೊತ್ತಿ ಉರಿಯುತ್ತಿತ್ತು. ಅಲ್ಲದೆ, ಕಾರಿನಲ್ಲಿ ಒಬ್ಬರ ಶವ ಸುಟ್ಟು ಕರಕಲಾಗಿತ್ತು. ಹೀಗಾಗಿ, ಅದು ರಾಮ್ ಮೆಹರ್ ಅವರದ್ದೇ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಹೆಂಡತಿಯ ಹೊಟ್ಟೆ, ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಗಂಡ!

ಆದರೆ, ಈ ಪ್ರಕರಣದಲ್ಲಿ ಪೊಲೀಸರಿಗೆ ಅನುಮಾನ ಕಾಡಿತ್ತು. ರಾಮ್ ಮೆಹರ್ ಅವರ ಬಗ್ಗೆ ವಿಚಾರಣೆ ನಡೆಸಿದಾಗ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಲಾಕ್​ಡೌನ್ ಬಳಿಕ ಉದ್ಯಮ ಕುಸಿದುಬಿದ್ದಿತ್ತು ಎಂಬುದು ಗೊತ್ತಾಗಿತ್ತು. ಅಲ್ಲದೆ, ರಾಮ್ ಅವರ ಹೆಸರಿನಲ್ಲಿ 2 ಕೋಟಿ ರೂ. ಮೌಲ್ಯದ ವಿಮೆಯಿದ್ದು, ಅವರು ಸಾವನ್ನಪ್ಪಿದರೆ ಆ ಹಣ ಅವರ ಹೆಂಡತಿ, ಮಕ್ಕಳಿಗೆ ಸೇರುತ್ತದೆ ಎಂಬುದು ಕೂಡ ಗೊತ್ತಾಗಿತ್ತು. ರಾಮ್ ಮೆಹರ್ ಬಳಿಯಿದ್ದ 11 ಲಕ್ಷ ಲೂಟಿ ಮಾಡಲು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ, ಹಣ ದೋಚಿಕೊಂಡು, ಕೊಲೆ ಮಾಡಿರಬಹುದು ಎಂಬ ಅನುಮಾನದಿಂದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.

ತನಿಖೆ ವೇಳೆ ರಾಮ್ ಮೆಹರ್ ಸಾವನ್ನಪ್ಪಿಲ್ಲ. ಅವರು ಛತ್ತೀಸ್​ಘಡದ ಬಿಲಾಸ್ಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬುದು ಗೊತ್ತಾಗಿತ್ತು. ಇದೀಗ ಉದ್ಯಮಿಯನ್ನು ಹಿಸ್ಸಾರ್​ಗೆ ಕರೆತಂದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಮ್ ಮೆಹರ್ ಅವರ ಕಾರಿನಲ್ಲಿದ್ದ ಶವ ಯಾರದ್ದು ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆ ಬಗ್ಗೆ ಪೊಲೀಸರು ರಾಮ್ ಮೆಹರ್ ಅವರ ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬೀಳಬೇಕಿದೆ.
Published by: Sushma Chakre
First published: October 11, 2020, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories