Crime News: ಪ್ರೇಯಸಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಡಾಬಾ ಮಾಲೀಕ

Murder News: ರಾಜೇಶ್ ಜೊತೆ ಹೊರಹೋದ ಪ್ರಿಯಾಂಕಾ ನಡುರಾತ್ರಿಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬಸ್ಥರು ಪ್ರಿಯಾಂಕಾಳನ್ನು ಹುಡುಕಾಡಿದ್ದರು. ಭಾನುವಾರ ಬೆಳಗ್ಗೆ ರಾಜೇಶ್ ಅವರ ಡಾಬಾದ ಹಿಂದೆ ಪ್ರಿಯಾಂಕಾಳ ಹೆಣ ಪತ್ತೆಯಾಗಿತ್ತು.

Sushma Chakre | news18-kannada
Updated:July 13, 2020, 8:42 PM IST
Crime News: ಪ್ರೇಯಸಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಡಾಬಾ ಮಾಲೀಕ
ಸಾಂದರ್ಭಿಕ ಚಿತ್ರ
  • Share this:
ಗುರುಗ್ರಾಮ (ಜು. 13): ಗುರುಗ್ರಾಮದ ಡಾಬಾವೊಂದರ ಮಾಲೀಕ ಮಹಿಳೆಯೊಬ್ಬರನ್ನು ಶೂಟ್ ಮಾಡಿ, ಅದೇ ಗನ್​ನಿಂದ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. 30 ವರ್ಷದ ರಾಜೇಶ್ ಎಂಬ ಡಾಬಾ ಮಾಲೀಕ ಈ ಕೃತ್ಯ ಎಸಗಿದಾತ. ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

30 ವರ್ಷದ ರಾಜೇಶ್ ಮತ್ತು 20 ವರ್ಷದ ಪ್ರಿಯಾಂಕಾ ಪಟೌಡಿಯ ನಂಕೌನ್​ ಗ್ರಾಮದವರಾಗಿದ್ದರು. ಇವರಿಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿತ್ತು. ಈ ಪರಿಚಯ ಪ್ರೀತಿಯಾಗಿ ಪರಿರ್ತಿತವಾಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ರಾಜೇಶ್​ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪ್ರಿಯಾಂಕಾಗೆ ಕಳೆದ ತಿಂಗಳು ಮದುವೆಯಾಗಿತ್ತು. ಆಕೆ ತನ್ನ ತವರು ಮನೆಗೆ ಬಂದಾಗ ರಾಜೇಶ್ ಆಕೆಯನ್ನು ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ನಂತರ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ವಿಕಾಸ್​ ದುಬೆ ಎನ್​ಕೌಂಟರ್​; ಮಗ ಸಾವನ್ನಪ್ಪಿದ ಮೂರೇ ದಿನಕ್ಕೆ ಹೃದಯಾಘಾತದಿಂದ ಅಪ್ಪನೂ ನಿಧನ

2 ದಿನಗಳ ಹಿಂದೆ ಪ್ರಿಯಾಂಕಾಳ ಮನೆಗೆ ಬಂದಿದ್ದ ರಾಜೇಶ್ ಆಕೆಯನ್ನು ತನ್ನ ಡಾಬಾಗೆ ಕರೆದುಕೊಂಡು ಹೋಗಿದ್ದ. ರಾಜೇಶ್ ಜೊತೆ ಹೊರಹೋದ ಪ್ರಿಯಾಂಕಾ ನಡುರಾತ್ರಿಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬಸ್ಥರು ಪ್ರಿಯಾಂಕಾಳನ್ನು ಹುಡುಕಾಡಿದ್ದರು. ಭಾನುವಾರ ಬೆಳಗ್ಗೆ ರಾಜೇಶ್ ಅವರ ಡಾಬಾದ ಹಿಂದೆ ಪ್ರಿಯಾಂಕಾಳ ಹೆಣ ಪತ್ತೆಯಾಗಿತ್ತು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ನೇಣಿಗೆ ಶರಣು; ಆತ್ಮಹತ್ಯೆಯಲ್ಲ ಕೊಲೆ ಎಂದ ಕುಟುಂಬಸ್ಥರು

ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.  ಪ್ರಿಯಾಂಕಾ ಬೇರೊಬ್ಬರೊಂದಿಗೆ ಮದುವೆಯಾಗಿರುವುದಕ್ಕೆ ಕೋಪಗೊಂಡಿದ್ದ ರಾಜೇಶ್ ಆಕೆಯೊಂದಿಗೆ ಜಗಳವಾಡಿದ್ದ. ನಂತರ ಆಕೆಯ ಎದೆಗೆ ಗುಂಡು ಹಾರಿಸಿ ನಂತರ ತನ್ನ ತಲೆಗೆ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹಗಳೂ ಅಕ್ಕಪಕ್ಕದಲ್ಲೇ ಸಿಕ್ಕಿದ್ದು, ಹತ್ಯೆಗೆ ಬಳಸಲಾದ ಪಿಸ್ತೂಲ್ ಅನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ.
Published by: Sushma Chakre
First published: July 13, 2020, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading