ಅಮ್ಮಾ, ಅಜ್ಜನ ಮನೆಗೆ ಕಳಿಸ್ಬೇಡ!; ತಾತನಿಂದಲೇ 7 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ

Coimbatore Rape News: ತಮಿಳುನಾಡಿನ ಕೊಯಮತ್ತೂರಿನಲ್ಲಿ ರಜೆಗೆಂದು ತನ್ನ ಮನೆಗೆ ಬಂದ 7 ವರ್ಷದ ಮೊಮ್ಮಗಳ ಮೇಲೆ 65 ವರ್ಷದ ಅಜ್ಜನೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ನಡೆದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊಯಮತ್ತೂರು (ಜು. 6): ಎಲ್ಲ ಮಕ್ಕಳಿಗೂ ರಜೆಯಲ್ಲಿ ಅಜ್ಜನ ಮನೆಗೆ ಹೋಗುವುದೆಂದರೆ ಸಂಭ್ರಮ. ಅಜ್ಜ-ಅಜ್ಜಿಯ ಜೊತೆಗೆ ಆಟವಾಡುತ್ತಾ, ಅವರು ಹೇಳುವ ಕತೆಗಳನ್ನು ಕೇಳುತ್ತಾ ರಜೆ ಕಳೆಯಬೇಕೆಂಬುದು ಎಲ್ಲ ಮಕ್ಕಳ ಆಸೆ. ಅಜ್ಜ-ಅಜ್ಜಿಗೂ ಅಷ್ಟೇ... ತಮ್ಮ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ತುಸು ಹೆಚ್ಚೇ ಪ್ರೀತಿ. ಅಂಬೆಗಾಲಿಡುತ್ತಾ, ತಮ್ಮ ಕೈ ಹಿಡಿದು ನಡೆಯುತ್ತಿದ್ದ ಮೊಮ್ಮಕ್ಕಳು ಎದೆಯೆತ್ತರಕ್ಕೆ ಬೆಳೆದು ನಿಂತಿದ್ದನ್ನು ನೋಡುವಾಗ ಅವರ ಕಂಗಳಲ್ಲಿ ಬೆರಗು ಮೂಡಿರುತ್ತದೆ. ಆದರೆ, ವಾತ್ಸಲ್ಯ ತುಂಬಿರಬೇಕಾಗಿದ್ದ ಕಂಗಳಲ್ಲಿ ಕಾಮ ತುಂಬಿದರೆ?!

ತಮಿಳುನಾಡಿನ ಕೊಯಮತ್ತೂರಿನಲ್ಲಿ ರಜೆಗೆಂದು ತನ್ನ ಮನೆಗೆ ಬಂದ 7 ವರ್ಷದ ಮೊಮ್ಮಗಳ ಮೇಲೆ 65 ವರ್ಷದ ಅಜ್ಜನೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ನಡೆದಿದೆ. ಕೊಯಮತ್ತೂರಿನ 7 ವರ್ಷದ ಹುಡುಗಿ ತನ್ನ ತಮ್ಮ ಮತ್ತು ಅಪ್ಪ-ಅಮ್ಮನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆಕೆಯ ಅಪ್ಪ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ. ಕೊರೋನಾದಿಂದ ತಾನು ಹೊರಗೆ ವ್ಯಾಪಾರ ಮಾಡಿ, ಮನೆಗೆ ಬಂದರೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬುದು ಆತನ ಆತಂಕವಾಗಿತ್ತು.

ಇದನ್ನೂ ಓದಿ: Karnataka Coronavirus: ಕೊರೋನಾ ಚಿಕಿತ್ಸೆಗೆ ವೈದ್ಯರೇ ಇಲ್ಲ; ವಿಡಿಯೋ ಮೂಲಕ ವಾಸ್ತವ ಸ್ಥಿತಿ ಬಿಚ್ಚಿಟ್ಟ ಬೆಂಗಳೂರು ಡಾಕ್ಟರ್

ಹೀಗಾಗಿ, ಮಕ್ಕಳಿಗೆ ರಜೆ ಇದ್ದುದರಿಂದ ಸುರಕ್ಷತೆಯಿಂದ ಇರಲಿ ಎಂಬ ಕಾರಣಕ್ಕೆ ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಡಲಾಗಿತ್ತು.  ಹೆಂಡತಿ ಮತ್ತು ಮಗ ಕೆಲಸಕ್ಕೆ ಹೋದ ನಂತರ ತನ್ನ ಮೊಮ್ಮಗಳ ಜೊತೆ ಆಟವಾಡುತ್ತಿದ್ದ ತಾತನಿಗೆ ಅವಳ ದೇಹದ ಮೇಲೆ ಕಣ್ಣುಬಿದ್ದಿತ್ತು. ಆಕೆಯ ತಮ್ಮ ಮಲಗಿದ್ದಾಗ ತಾತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಜೂನ್ 26ರಿಂದ ಜುಲೈ 2ರವರೆಗೆ ಆತ ಪ್ರತಿದಿನ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ್ದ.

ಇದರಿಂದ ಗಾಬರಿಗೊಂಡಿದ್ದ ಆಕೆ ತನ್ನ ಅಪ್ಪ-ಅಮ್ಮ ಬಂದಾಗ ನಾನಿನ್ನು ಅಜ್ಜನ ಜೊತೆ ಇರುವುದಿಲ್ಲ ಎಂದು ಹಠ ಮಾಡಿದ್ದಾಳೆ. ಮಗಳ ದಿಢೀರ್ ನಡವಳಿಕೆಯಿಂದ ಸಂಶಯಗೊಂಡ ಅವರು ಏನಾಯಿತು ಎಂದು ವಿಚಾರಿಸಿದ್ದಾರೆ. ಆಗ ಆ ಬಾಲಕಿ ಎಲ್ಲ ವಿಷಯವನ್ನು ಅಪ್ಪ- ಅಮ್ಮನಿಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ 65 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
Published by:Sushma Chakre
First published: