HOME » NEWS » National-international » CRIME NEWS FATHER DIES BY SUICIDE AFTER RUNNING THE TRUCK OVER DAUGHTERS IN MAHARASHTRA FOR CHATTING IN WHATSAPP SCT

ಯುವಕನೊಂದಿಗೆ ಚಾಟ್ ಮಾಡಿದ್ದೇ ತಪ್ಪಾಯ್ತು!; ಹೆಣ್ಣುಮಕ್ಕಳ ಮೇಲೆ ಟ್ರಕ್ ಚಲಾಯಿಸಿ ಕೊಂದು, ತಂದೆ ಆತ್ಮಹತ್ಯೆ

Crime News: ತನ್ನ 18 ವರ್ಷದ ಮಗಳು ಯುವಕನೊಂದಿಗೆ ಮೊಬೈಲ್​ನಲ್ಲಿ ಚಾಟ್ ಮಾಡಿದ್ದಕ್ಕೆ ಕೋಪಗೊಂಡ ತಂದೆ ಆಕೆಗೆ ಹೊಡೆದಿದ್ದ. ಬಳಿಕ ಅಕ್ಕನ ಬೆಂಬಲಕ್ಕೆ ನಿಂತ ಇನ್ನೊಬ್ಬ ಮಗಳನ್ನೂ ಎಳೆದುಕೊಂಡು ಹೋಗಿ ರಸ್ತೆಯಲ್ಲಿ ಮಲಗಿಸಿ, ಅವರ ಮೇಲೆ ಟ್ರಕ್ ಚಲಾಯಿಸಿ ಕೊಲೆ ಮಾಡಿದ್ದ. ಆಮೇಲೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Sushma Chakre | news18-kannada
Updated:April 19, 2021, 9:28 AM IST
ಯುವಕನೊಂದಿಗೆ ಚಾಟ್ ಮಾಡಿದ್ದೇ ತಪ್ಪಾಯ್ತು!; ಹೆಣ್ಣುಮಕ್ಕಳ ಮೇಲೆ ಟ್ರಕ್ ಚಲಾಯಿಸಿ ಕೊಂದು, ತಂದೆ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಪುಣೆ (ಏ. 19): ಮಗಳು ಯಾವುದೋ ಯುವಕನೊಂದಿಗೆ ವಾಟ್ಸಾಪ್​ನಲ್ಲಿ ಚಾಟ್ ಮಾಡುವುದು ಗೊತ್ತಾದ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಟ್ರಕ್ ಚಲಾಯಿಸಿ, ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದೂರಿ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಭರತ್ ಬರಾಟೆ ಎಂಬಾತ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮಕ್ಕಳ ಜೀವ ತೆಗೆದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಾತ.

ಪುಣೆಯ 40 ವರ್ಷದ ಭರತ್​ನ 18 ವರ್ಷದ ಮಗಳು ನಂದಿನಿ ವಾಟ್ಸಾಪ್​ನಲ್ಲಿ ಯುವಕನೊಂದಿಗೆ ಚಾಟ್ ಮಾಡುತ್ತಿದ್ದಾಗ ಅಪ್ಪನ ಕೈಗೆ ಸಿಕ್ಕಿಬಿದ್ದಿದ್ದಳು. ಮಗಳಿಗೆ ಬೈದು ಬುದ್ಧಿ ಹೇಳಿದ್ದರೂ ಆಕೆ ತಾನೇನೂ ತಪ್ಪು ಮಾಡುತ್ತಿಲ್ಲ ಎಂದು ವಾದಿಸಿದ್ದಳು. ಆಕೆಗೆ ಆಕೆಯ 14 ವರ್ಷದ ತಂಗಿ ವೈಷ್ಣವಿ ಕೂಡ ಬೆಂಬಲ ನೀಡಿದ್ದಳು. ಅಕ್ಕ-ತಂಗಿ ಇಬ್ಬರೂ ತನ್ನ ವಿರುದ್ಧವೇ ಮಾತನಾಡಿದ್ದನ್ನು ಸಹಿಸದ ಭರತ್ ಕೋಪದಿಂದ ಅವರಿಬ್ಬರ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಹಲ್ಲೆ ಮಾಡಿದ ವ್ಯಕ್ತಿಯ ಕಾಲು ಕಚ್ಚಿ ಒಡತಿಯನ್ನು ಕಾಪಾಡಿದ ಸಾಕು ನಾಯಿ!

ಟ್ರಕ್ ಚಾಲಕನಾಗಿದ್ದ ಭರತ್ ಶನಿವಾರ ಸಂಜೆ ಮನೆಗೆ ಬಂದಾಗ ಮಗಳು ಬೇರೊಬ್ಬನೊಂದಿಗೆ ಮೊಬೈಲ್​ನಲ್ಲಿ ಚಾಟ್ ಮಾಡುತ್ತಿರುವುದನ್ನು ನೋಡಿ ಕೋಪಗೊಂಡಿದ್ದ. ಇಬ್ಬರೂ ಹೆಣ್ಣುಮಕ್ಕಳಿಗೆ ಮನ ಬಂದಂತೆ ಥಳಿಸಿದ್ದ. ನಂತರ ಅವರಿಬ್ಬರನ್ನೂ ಹೊರಗೆ ಎಳೆದೊಯ್ದು ಟ್ರಕ್​ ಹರಿಸಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಇಬ್ಬರು ಮಕ್ಕಳನ್ನು ಹೊರಗೆ ಎಳೆದೊಯ್ದ ಭರತ್ ಕೊಲೆ ಮಾಡಿದ್ದಾನೆ. ರಾತ್ರಿ ಟ್ರಕ್ ಶಬ್ದ ಕೇಳಿದ ಆತನ ಹೆಂಡತಿ ಮನೆಯಿಂದ ಹೊರಗೆ ಬಂದು ನೋಡಿದಾಗ ತನ್ನಿಬ್ಬರು ಹೆಣ್ಣುಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕಂಗಾಲಾದಳು. ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಭರತ್ ತನ್ನ ಹೆಂಡತಿಗೆ ಹೆದರಿಸಿದ್ದ. ಆದರೆ, ಈ ವಿಷಯ ಗೊತ್ತಾಗಿ ಪೊಲೀಸರು ತನ್ನನ್ನು ಬಂಧಿಸುತ್ತಾರೆಂಬ ಭಯದಿಂದ ಕೊನೆಗೆ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Youtube Video

ಸಾಯುವ ಸ್ವಲ್ಪ ಸಮಯದ ಹಿಂದೆ ಭರತ್ ನನ್ನ ಕೈಯಲ್ಲಿ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡಿದ್ದ. ಮಕ್ಕಳ ಸಾವಿನ ಆಘಾತದಲ್ಲಿದ್ದ ನಾನು ಅದನ್ನು ಓದದೆ ಸಹಿ ಹಾಕಿದ್ದೆ. ಮಾರನೇ ದಿನ ಬೆಳಗ್ಗೆ ಪೊಲೀಸರು ಬಂದು ಆ ಪತ್ರವನ್ನು ತೆಗೆದುಕೊಂಡು ಹೋದರು. ಅದು ಸೂಸೈಡ್ ನೋಟ್ ಆಗಿದ್ದು, ನಾನು, ನನ್ನ ಹೆಂಡತಿ, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಭರತ್ ಅದರಲ್ಲಿ ಬರೆದಿದ್ದ. ಮೊದಲೇ ಯೋಚಿಸಿ ಆತ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಭರತ್​ನ ಹೆಂಡತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
Published by: Sushma Chakre
First published: April 19, 2021, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories