ಟವಲ್‌ಗಳನ್ನು ಒಣಗಿಸುವ ಹೋಟೆಲ್ ರೇಡಿಯೇಟರ್‌ನಿಂದ ಬೆನ್ನಿನ ಚರ್ಮವನ್ನು ಬ್ರಿಯಾನಿ ಆನ್ ಎಂಬ ಮಹಿಳೆ ಸುಟ್ಟುಕೊಂಡಿದ್ದಾಳೆ. ಯುಕೆಯ ಡಾನ್ಕಾಸ್ಟರ್‌ನ 25 ವರ್ಷದ ಮಹಿಳೆ ಈ ರೀತಿ ತಮ್ಮ ದೇಹವನ್ನು ಸುಟ್ಟುಕೊಂಡಿದ್ದು, ಈ ಸುಟ್ಟ ಗಾಯಗಳು ತಮ್ಮ ಇಡೀ ಜೀವನ ಪರ್ಯಂತ ಇರಲಿದೆಯೇ ಎಂದು ಆಕೆ ಭಯಭೀತಳಾಗಿದ್ದಾಳೆ. ಮಾರ್ಚ್ 16ರಂದು ಡಾನ್‌ಕಾಸ್ಟರ್‌ನ ಮೆಕ್ಸ್‌ಬರೋದ ಬೆಸ್ಟ್ ವೆಸ್ಟರ್ನ್ ಪ್ಯಾಸ್ಟರ್ಸ್ ಹೋಟೆಲ್‌ನಲ್ಲಿ ಬಿಸಿಯಾದ ಟವೆಲ್ ರೈಲ್‌ಗೆ ಬೆನ್ನು ತಾಗಿ ಈ ರೀತಿ ಸುಟ್ಟ ಗಾಯಗಳಾಗಿವೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇನ್ನು, ಈ ರೇಡಿಯೇಟರ್ ಎಷ್ಟು ಬಿಸಿ ಇತ್ತೆಂದರೆ "ನೀವು ಅದರ ಮೇಲೆ ಮೊಟ್ಟೆಯನ್ನು ಫ್ರೈ ಮಾಡಬಹುದು''. ಇದರಿಂದ ತಾನು ಎರಡನೇ ಹಂತದ ಸುಟ್ಟಗಾಯಗಳಿಗೆ ಒಳಗಾಗಿದ್ದೇನೆ ಎಂದು ಬ್ರಿಯಾನಿ ಆನ್ ಹೇಳಿಕೊಂಡಿದ್ದಾಳೆ.
ಶವರ್‌ನಿಂದ ಹೊರಬಂದ ನಂತರ ತಾನು ಪಾದಗಳನ್ನು ಒಣಗಿಸುತ್ತಿದ್ದೆ. ಅಲ್ಲದೆ, ಆ ಹೋಟೆಲ್‌ನಿಂದ ಚೆಕ್ ಔಟ್ ಆಗಲು ತಯಾರಾಗುತ್ತಿದ್ದೆ. ಆ ವೇಳೆ, ಕೆಳಕ್ಕೆ ಬಾಗುತ್ತಿದ್ದಂತೆ, ಆಕೆಯ ಬೆನ್ನು ಆಕಸ್ಮಿಕವಾಗಿ ರೇಡಿಯೇಟರ್ ಅನ್ನು ಮುಟ್ಟಿತು ಮತ್ತು ಸೆಕೆಂಡ್‌ನಲ್ಲೇ ತನ್ನ ಚರ್ಮ ರೇಡಿಯೇಟರ್‌ಗೆ ಸಿಕ್ಕಿಹಾಕಿಕೊಂಡಿತು ಎಂದು ಯಾರ್ಕ್‌ಶೈರ್ ಲೈವ್ ಜತೆ ಮಾತನಾಡಿದ ಬ್ರಿಯಾನಿ ಆನ್ ಹೇಳಿದ್ದಾಳೆ.
ಅಲ್ಲದೆ, ಹೋಟೆಲ್‌ನಿಂದ ತುರ್ತಾಗಿ ಹೋಗಬೇಕಿದ್ದ ಕಾರಣ ತಾನು ಆ ವಿಚಾರವನ್ನು ಹೋಟೆಲ್‌ನವರಿಗೆ ತಿಳಿಸಲಿಲ್ಲ. ಹಾಗೇ ಚೆಕ್ ಔಟ್ ಮಾಡಿದೆ. ನಂತರ ಮನೆಗೆ ತೆರಳಿದ ಬಳಿಕ ಚರ್ಮದಲ್ಲಿ ಸುಟ್ಟ ಗಾಯಗಳಾಗಿರುವುದನ್ನು ತಿಳಿದು ಮತ್ತೆ ಹೋಟೆಲ್‌ಗೆ ತೆರಳಿದೆ. ಆದರೆ, ಕೆಲವು ದಿನಗಳವರೆಗೆ ಹೋಟೆಲ್ ಮ್ಯಾನೇಜರ್ ಲಭ್ಯವಿರುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು ಎಂದೂ ಯುಕೆ ಮಹಿಳೆ ವಿವರಿಸಿದ್ದಾಳೆ.
Pastures hotel room features:
A towel rail that you could seal a fucking steak on, or maybe you’re feeling cute and...
Posted by Briony Anne on Friday, March 19, 2021
ಆದರೆ, ಬ್ರಿಯಾನಿ ಈ ಬಗ್ಗೆ ಹೋಟೆಲ್‌ನವರ ಜತೆ ಮಾತನಾಡಿದ್ದಕ್ಕೆ, ಆ ಹೀಟರ್ ಕಂಪನಿ ಉತ್ಪಾದನೆಯ ವಿಶೇಷಣಗಳನ್ನು ಪೂರೈಸುತ್ತದೆ ಎಂದು ಅಲ್ಲಿನ ಸಿಬ್ಬಂದಿ ಪರಿಶೀಲಿಸಿದ ಬಳಿಕ ಹೇಳಿದ್ದಾರೆ. ಇನ್ನು, ತಾನು ಹೋಟೆಲ್‌ಗೆ ಕರೆ ಮಾಡಿದರೂ, ಅವರು ತನ್ನ ದೂರು ಕೇಳಲು ಪ್ರಾಮಾಣಿಕವಾದ ಆಸಕ್ತಿಯನ್ನೇ ಹೊಂದಿರಲಿಲ್ಲ ಎಂದೂ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ