Murder News: ಕಸದ ರಾಶಿಯಲ್ಲಿ ಬಿದ್ದಿತ್ತು 14 ವರ್ಷದ ಬಾಲಕಿಯ ಸುಟ್ಟ ಮೃತದೇಹ!

ತಿರುಚ್ಚಿಯಲ್ಲಿ 9ನೇ ತರಗತಿ ಓದುತ್ತಿದ್ದ ಗಂಗಾದೇವಿ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದಳು. ಸಂಜೆಯಾದರೂ ವಾಪಾಸ್​ ಬಾರದ ಕಾರಣ ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Sushma Chakre | news18-kannada
Updated:July 7, 2020, 9:58 AM IST
Murder News: ಕಸದ ರಾಶಿಯಲ್ಲಿ ಬಿದ್ದಿತ್ತು 14 ವರ್ಷದ ಬಾಲಕಿಯ ಸುಟ್ಟ ಮೃತದೇಹ!
ಸಾಂದರ್ಭಿಕ ಚಿತ್ರ
  • Share this:
ಚೆನ್ನೈ (ಜು. 7): ತಮಿಳುನಾಡಿನ ತಿರುಚ್ಚಿಯಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಜೀವಂತವಾಗಿ ಸುಟ್ಟಹಾಕಿರುವ ಘಟನೆ ನಡೆದಿದೆ. ಇಲ್ಲಿನ ಸೋಮರಸಂಪೆಟ್ಟಾಯ್​ನಲ್ಲಿ ತ್ಯಾಜ್ಯದ ರಾಶಿಯ ಪಕ್ಕದಲ್ಲಿ ಬಾಲಕಿಯ ಅರೆಬರೆ ಸುಟ್ಟ ಶವ ಪತ್ತೆಯಾಗಿದೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಗಂಗಾದೇವಿ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದಳು. ಸಂಜೆಯಾದರೂ ವಾಪಾಸ್​ ಬಾರದ ಆಕೆಯನ್ನು ಪೋಷಕರು ಎಲ್ಲ ಕಡೆ ಹುಡುಕಿದ್ದರು. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟರಲ್ಲಿ ಸ್ಥಳೀಯರು ಕಸದ ರಾಶಿಯ ಪಕ್ಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರೆಬರೆ ಸುಟ್ಟಿದ್ದ ಆಕೆಯ ಬಟ್ಟೆಯ ತುಂಡಿನಿಂದ ಅವಳ ಪೋಷಕರು ಮಗಳ ಶವವನ್ನು ಪತ್ತೆಹಚ್ಚಿದ್ದಾರೆ.ಈ ಆಘಾತಕಾರಿ ಘಟನೆಯಿಂದ ತಿರುಚ್ಚಿಯ ಜನರು ಆತಂಕಕ್ಕೀಡಾಗಿದ್ದಾರೆ. ಯಾವ ಕಾರಣಕ್ಕೆ, ಯಾರು ಈ ರೀತಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣದ ತನಿಖೆ ನಡೆಸಲು ಎರಡು ತಂಡ ರಚನೆ ಮಾಡಲಾಗಿದೆ. ಇದೇ ರೀತಿ ಕಳೆದ ಮೇ ತಿಂಗಳಲ್ಲೂ 14 ವರ್ಷದ ಶಾಲಾ ಬಾಲಕಿಯನ್ನು ಎಐಎಡಿಎಂಕೆಗೆ ಸೇರಿದ್ದ ಇಬ್ಬರು ದುಷ್ಕರ್ಮಿಗಳು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಅದೇರೀತಿಯ ಕೃತ್ಯ ನಡೆದಿರುವುದರಿಂದ ಸ್ಥಳೀಯರು ಗಾಬರಿಯಾಗಿದ್ದಾರೆ.
Published by: Sushma Chakre
First published: July 7, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading