ನವದೆಹಲಿ (ಮಾ. 11): ಹೆದ್ದಾರಿಯಲ್ಲಿ ಬೈಕ್ ಮತ್ತು ಟ್ರಕ್ ನ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಮಾಯಕ ಹೆಣ್ಣು ಜೀವವೊಂದು ಬಲಿಯಾದ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಬೈಕ್ ಸವಾರ, ವೇಗವಾಗಿ ಚಲಿಸುತ್ತಿದ್ದ ಲಾರಿಗೆ ತಾಗಿದಾಗ, ಆತನ ಪತ್ನಿ ಲಾರಿಗೆ ಸಿಲುಕಿ ಸಾವನಪ್ಪಿದ ಆಘಾತಕಾರಿ ದುರ್ಘಟನೆಗೆ ದಕ್ಷಿಣ ಬ್ರೆಜಿಲ್ ಸಾಕ್ಷಿಯಾಗಿದೆ. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಚಿತ್ರಿಕರಣಗೊಂಡಿದ್ದು ನೋಡುಗರನ್ನು ದಿಗ್ರ್ಭಮೆಗೊಳಿಸಿದೆ.
ಬೈಕ್ ಸವಾರನಾದ 49 ವರ್ಷದ ಆಂಡರ್ಸನ್ ಆಂಟೋನಿಯೊ ಪಿರೇರಾ ಮತ್ತು ಅವನ ಪತ್ನಿ ಸಾಂಡ್ರಾ (47) ಭಾನುವಾರದಂದು ಬಿಆರ್ -101 ಮೋಟಾರು ಮಾರ್ಗದಲ್ಲಿ ಪೆಹ್ನಾ ಪುರಸಭೆಯ ಸಾಂತಾ ಕ್ಯಾಟರಿನಾದ ಉತ್ತರ ಕರಾವಳಿಯ ಪ್ರದೇಶದಲ್ಲಿ ಮೋಜಿನಿಂದ ತಮ್ಮ ಬೈಕ್‌ನಲ್ಲಿ ಚಾಲನೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಬೈಕ್ ಗೆ ತಾಗಿಕೊಂಡಿದೆ. ಪರಿಣಾಮ ಈ ಭೀಕರ ಅಪಘಾತದಲ್ಲಿ ದುರದೃಷ್ಟವಶಾತ್, ಬೈಕ್ ಸವಾರನ ಪತ್ನಿ ತೀವ್ರ ಗಾಯಗೊಂಡ ನಂತರ ಅಪಘಾತದಲ್ಲಿ ಬಲಿಯಾಗಿದ್ದಾರೆ.
ಅಪಘಾತ ಮಾಡಿದ ಟ್ರಕ್ ಸವಾರನು ವಾಹನವನ್ನು ನಿಲ್ಲಿಸದೇ ಹಾಗೇ ಮುಂದೆ ಚಲಾಯಿಸಿದ್ದಾನೆ. ಮಡಿದ ಪತ್ನಿಯನ್ನು ರಸ್ತೆಯಲ್ಲೇ ಬಿಟ್ಟು ವೇಗವಾಗಿ ಚಲಿಸುತ್ತಿದ್ದ ಟ್ರಕ್ ಸವಾರನನ್ನು ಹಿಡಿಯಲು, ಟ್ರಕ್ ನ ಬಾಗಿಲನ್ನು ಹಿಡಿದುಕೊಂಡು ಬೈಕ್ ಸವಾರ ಆಂಟೋನಿಯೊ ಬಂದಿದ್ದಾನೆ. ಬೈಕ್ ಸವಾರ ಹೊರಗಡೆಯಿಂದ ಟ್ರಕ್ ಬಾಗಿಲನ್ನು ಹಿಡಿದುಕೊಂಡು ಬರುತ್ತಿದ್ದರೂ ಟ್ರಕ್ ನಿಲ್ಲಿಸದೇ 30 ಕಿ.ಮೀ.ವರೆಗೆ ಟ್ರಕ್ ಚಾಲಕ ವಾಹನವನ್ನು ಚಲಾಯಿಸಿದ್ದಾನೆ.
ಇತ್ತ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬೈಕ್ ಸವಾರನ ಪತ್ನಿ ಸಾಂಡ್ರಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತಲೆಗೆ ಗಂಭೀರವಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದರು. ಅಷ್ಟೇ ಅಲ್ಲದೇ ಘರ್ಷಣೆಯಲ್ಲಿ ಬೈಕ್ ಸವಾರ ಆಂಡರ್ಸನ್ ಸಹ ಗಾಯಗೊಂಡನು ಮತ್ತು ಅಜಾಗರೂಕ ಚಾಲಕನನ್ನು ಬಂಧಿಸಲಾಯಿತು.
36 ವರ್ಷದ ಚಾಲಕ ಅಪಘಾತ ಮಾಡಿದ ಸಂದರ್ಭದಲ್ಲಿ ಮಾದಕ ದ್ರವ್ಯ ಸೇವಿಸಿದ್ದನು ಎಂದು ಹೇಳಲಾಗಿದೆ ಮತ್ತು ಸಹ ವಾಹನ ಚಾಲಕರು ಟ್ರಕ್ ನಿಲ್ಲಿಸಲು ಒತ್ತಾಯಿಸಿದರು. ಅಷ್ಟೇ ಅಲ್ಲದೇ ಬೈಕ್ ಸವಾರ ಆಂಟೋನಿಯೊ, ಟ್ರಕ್ ನ ಬಾಗಿಲನ್ನು ಹಿಡಿದುಕೊಂಡು ಟ್ರಕ್ ಚಾಲಕನಿಗೆ ವಾಹನವನ್ನು ನಿಲ್ಲಿಸುವಂತೆ ಮಾಡಿದ ಮನವಿಯನ್ನೂ ನಿರ್ಲಕ್ಷಿಸಿ ಟ್ರಕ್ ಅನ್ನು ಚಲಾಯಿಸಿದ್ದಾನೆಂದು ಡೈಲಿ ಮೇಲ್ ವರದಿ ಮಾಡಿದೆ.
ಇನ್ನೊಬ್ಬ ವಾಹನ ಚಾಲಕ ಚಿತ್ರೀಕರಿಸಿದ ವಿಡಿಯೋದಲ್ಲಿ ಆಂಡರ್ಸನ್ ಆಂಟೋನಿಯೊನ ಬೈಕ್, ಟ್ರಕ್ ನ ಮುಂಭಾಗ ಸಿಕ್ಕಿಹಾಕಿಕೊಂಡಿತ್ತು. ಮತ್ತು ಬೈಕ್ ಸವಾರ ಆಂಟೋನಿಯೊ, ಟ್ರಕ್‌ನ ಎಡ ಬಾಗಿಲನ್ನು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ಮುಂಬೈನ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ 14 ವರ್ಷಗಳ ನಂತರ ಮರಳಿ ಸಿಕ್ಕಿತು!; ಹೇಗೆ ಅಂತೀರಾ?
ವರದಿಯ ಪ್ರಕಾರ, ಟ್ರಕ್ ಅನ್ನು ಅಪಘಾತ ನಡೆದ ನಂತರ 30 ಕಿ.ಮೀ ವರೆಗೆ ಚಲಾಯಿಸಿದ ನಂತರ ನಿಲ್ಲಿಸಿದ್ದಾನೆ. ನಂತರ ಸಾರ್ವಜನಿಕರು, ಚಾಲಕನನ್ನು ರಸ್ತೆಯ ಮೇಲೆ ಎಳೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಕ್ಕೂ ಮೊದಲು ಟ್ರಕ್ ಚಾಲಕನೊಂದಿಗೆ ಜಗಳವಾಡಿದ್ದಾರೆ. ಈ ಘಟನಾವಳಿ ಸಂಬಂಧ ಟ್ರಕ್ ಚಾಲಕನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಟ್ರಕ್'ನ ಒಳಗೆ ಕೊಕೇನ್ ಪತ್ತೆಯಾಗಿದೆ ಮತ್ತು ಚಾಲಕ ಮಾದಕವಸ್ತು ವ್ಯಸನಿ ಎಂಬುದು ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಅಧಿಕಾರಿ ಉಲಿಯಮ್ ಸೊರೆಸ್ ಡಾ ಸಿಲ್ವಾ ಅವರು ಹೇಳಿದರು. "ಟ್ರಕ್ ಚಾಲಕ ವಾಸಿಸುವ ಪ್ರದೇಶ ಮಾದಕ ವ್ಯಸನಿಯಾಗಿತ್ತು. ಟ್ರಕ್ ಚಾಲಕ ಪೊಲೀಸ್ ಠಾಣೆಗೆ ಬಂದಾಗ, ಸಾರ್ವಜನಿಕರನ್ನು ಕಚ್ಚಲು ಪ್ರಯತ್ನಿಸುತ್ತಿದ್ದರು. ಅವನು ಅತ್ಯಂತ ಆಕ್ರಮಣಕಾರಿ" ಎಂದು ಸಿಲ್ವಾ ಹೇಳಿದರು.
ಏತನ್ಮಧ್ಯೆ, ಬೈಕ್ ಸವಾರ ಆಂಟೋನಿಯೊ ಅವರ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ದಂಪತಿಗೆ 26 ವರ್ಷದ ಮಗನಿದ್ದಾನೆ. ಈ ಭೀಕರ ಅಪಘಾತದಲ್ಲಿ ಅಮಾಯಕಿ ಬೈಕ್ ಸವಾರ ಆಂಟೋನಿಯೊನ ಪತ್ನಿ ಸಾಂಡ್ರಾಳ ಸಾವು ನೋವುತರಿಸುತ್ತದೆ. ಮಾಧಕ ದ್ರವ್ಯ ವ್ಯಸನಿಯಾಗಿದ್ದ ಟ್ರಕ್ ಚಾಲಕನ ಅಜಾರೂಕ ಚಾಲನೆಯಿಂದ ಹೆಣ್ಣು ಜೀವವೊಂದು ಬಲಿಯಾಗಿರುವುದು ಶೋಚನೆಯ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ