ಮದುವೆಯಾದ ಒಂದು ವಾರದಲ್ಲಿಯೇ ಗಂಡನನ್ನು ಕೊಂದ ಆರೋಪ ; ನವ ವಿವಾಹಿತೆಯನ್ನು ಬಂಧಿಸಿರುವ ಬಿಹಾರ ಪೊಲೀಸರು

ಮದುವೆಯಾದ ಕೇವಲ ಒಂದು ವಾರದ ನಂತರ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೆಂಡತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪಟ್ನಾ(ಡಿಸೆಂಬರ್​.21): ಮದುವೆಯಾದ ಕೇವಲ ಒಂದು ವಾರದ ನಂತರ ಗಂಡನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೆಂಡತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ನಡೆದಿದೆ. ಶ್ಯಾಮ್ಜಿ ಸಾಹ್ ಅವರ ಕುಟುಂಬವು ಭಾನುವಾರ ಮುಂಜಾನೆ ದಂಪತಿಗಳ ಕೋಣೆಗೆ ಪ್ರವೇಶಿಸಿದಾಗ ಗಂಟಲು ಸೀಳಿ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ವ್ಯಕ್ತಿ ಮಲಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ ಎಂದು ಬೈರಿಯಾ ಎಸ್‌ಎಚ್‌ಒ ದುಶ್ಯಂತ್ ಕುಮಾರ್ ತಿಳಿಸಿದ್ದಾರೆ. ಶ್ಯಾಮ್ಜಿ ಡಿಸೆಂಬರ್ 13 ರಂದು ಪೂರ್ವ ಚಂಪಾರನ್ ಜಿಲ್ಲೆಯ ಸರಯಾದ ಗೃತಿ ದೇವಿಯನ್ನು ವಿವಾಹವಾಗಿದ್ದರು. ಮಲಾಹಿ ಟೋಲಾದಲ್ಲಿನ ವರನ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿ ಕಾಣುತ್ತಿದ್ದರು ಎಂದು ಎಸ್‌ಎಚ್‌ಒ ಹೇಳಿದ್ದರು, ಈ ಸಂಬಂಧ ಗೃತಿಯನ್ನು ಪ್ರಶ್ನಿಸಲಾಗಿದೆ.

  ತನ್ನ ಗಂಡನ ದೇಹವನ್ನು ಕಂಡ ಗೃತಿ ಪರಾರಿಯಾಗಲು ಪ್ರಯತ್ನಿಸಿದಳೆಂದು ಗ್ರಾಮಸ್ಥರು ಹೇಳಿದ್ದಾರೆ. ಪರಾರಿಯಾಗುತ್ತಿದ್ದವಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಯೋಗೇಂದ್ರ ಚೌಧರಿ ಅವರು ಒಬ್ಬರಾಗಿದ್ದಾರೆ. ಅಪರಾಧ ನಡೆದಾಗ ಶ್ಯಾಮ್ಜಿಯ ಪೋಷಕರು, ಹಿರಿಯ ಸಹೋದರ ಮತ್ತು ಅವರ ಹೆಂಡತಿ ಮತ್ತು ಕಿರಿಯ ಸಹೋದರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

  ಇದನ್ನೂ ಓದಿ : ಬ್ರಿಟನಲ್ಲಿ ಆತಂಕ ಮೂಡಿಸುತ್ತಿರುವ ಹೊಸ ಸ್ವರೂಪದ ಕೊರೋನಾ; ಯುಕೆ ವಿಮಾನಗಳಿಗೆ ನಿರ್ಬಂಧ

  ಮಧ್ಯರಾತ್ರಿಯ ನಂತರ ಯಾರೋ ಬಾಗಿಲು ಬಡಿದಿದ್ದಾರೆ ಎಂದು ಗೃತಿ ಅವರಿಗೆ ತಿಳಿಸಿದ್ದಾರೆ. ಅವಳು ಬಾಗಿಲು ತೆರೆದಾಗ, ಮುಖವಾಡ ಧರಿಸಿದ್ದ ಇಬ್ಬರು ಪುರುಷರು ಒಳಗೆ ಬಂದು, ಮಹಿಳೆಗೆ ಅಡ್ಡಗಟ್ಟಿ ಅವಳ ಮುಖದ ಮೇಲೆ ಏನನ್ನೋ ಎಸೆದರು. ನಂತರ ಅವಳು ಮೂರ್ಛೆಗೆ ಹೋಗಿದ್ದಳು. ನಂತರ ಆಕೆಗೆ ಏನಾಯಿತು ಎಂಬುದನ್ನು ನೆನಪಿಲ್ಲ ಎಂದು ಚೌಧರಿ ಹೇಳಿದ್ದಾರೆ.

  ಈ ಅಪರಾಧದಲ್ಲಿ ಸಹಚರರ ಬಳಸಿಕೊಂಡಿರುವ ಸಾಧ್ಯತೆಯನ್ನು ನಿವಾಸಿಗಳು ತಳ್ಳಿಹಾಕದಿದ್ದರೂ, ಗ್ರಿಟಿಯ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ತಮ್ಮ ತನಿಖೆಯನ್ನು ಮಾಡುತ್ತಿದ್ದಾರೆ. ನಾವು ಅವಳ ಫೋನ್ ಕರೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅವಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಎಸ್‌ಎಚ್‌ಒ ಕುಮಾರ್ ತಿಳಿಸಿದ್ದಾರೆ, ಕೊಲೆಗೆ ಬಳಸಿದ ಮಾರಕಾಸ್ತ್ರಗಳು ಇದುವರೆಗೆ ಪತ್ತೆಯಾಗಿಲ್ಲ.
  Published by:G Hareeshkumar
  First published: