Crime News: 14 ವರ್ಷದ ಮಗಳ ಮೇಲೆ ಸತತ ಒಂದು ವರ್ಷದಿಂದ ತಂದೆಯಿಂದಲೇ ಅತ್ಯಾಚಾರ!

Rape Case: ಭೋಪಾಲ್​ನಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಬಗ್ಗೆ ಈ ವರ್ಷ ದಾಖಲಾಗಿರುವ ಎರಡನೇ ಕೇಸ್ ಇದು ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚೆಗೆ ತಂದೆ - ಮಗಳ ಮೇಲೆ ಅತ್ಯಾಚಾರ, ಸಹೋದರ - ಸಹೋದರಿ ಮೇಲೆ ಅತ್ಯಾಚಾರ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಶೋಚನೀಯ. ಇದೇ ರೀತಿ ಮಧ್ಯ ಪ್ರದೇಶದ ಭೋಪಾಲ್​ನಲ್ಲೂ ಕಾಮುಕ ತಂದೆ ತನ್ನ
  14 ವರ್ಷದ ಮಗಳ ಮೇಲೆ ಸತತ ಒಂದು ವರ್ಷದಿಂದ ಅತ್ಯಾಚಾರ ಮಾಡಿರುವ ಆರೋಪಕ್ಕೆ ಒಳಗಾಗಿದ್ದಾನೆ. ಭೋಪಾಲ್​ನಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಬಗ್ಗೆ ಈ ವರ್ಷ ದಾಖಲಾಗಿರುವ ಎರಡನೇ ಕೇಸ್ ಇದು ಎಂದು ತಿಳಿದು ಬಂದಿದೆ.

  ಹಲವು ಬಾರಿ ಅತ್ಯಾಚಾರಕ್ಕೊಳಗಾದ ಸಂತ್ರಸ್ಥ ಬಾಲಕಿ, ಜಹಾಂಗೀರಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ. ಭೋಪಾಲ್​ನ ಗೋವಿಂದಪುರ ನಿವಾಸಿಯಾಗಿರುವ ಬಾಲಕಿ ಅತ್ಯಾಚಾರಕ್ಕೊಳಗಾಗಿರುವ ಜತೆಗೆ ಹಲವು ಬಾರಿ ಹಲ್ಲೆಗೊಳಗಾಗಿದ್ದಾಳೆ. ತಾಯಿಗೆ ರೇಪ್ ಬಗ್ಗೆ ದೂರು ನೀಡಿದ್ರೆ ಬೆದರಿಕೆ ಹಾಕುತ್ತಿದ್ದ ಎಂದೂ ಬಾಲಕಿ ಹೇಳಿಕೊಂಡಿದ್ದಾಳೆ. ಈ ಹಿಂದೆ ಬಾಲಕಿ ಹಾಗೂ ಅವರ ಕುಟುಂಬ ಜಹಾಂಗಿರಾಬಾದ್​ನಲ್ಲಿ ನೆಲೆಸಿದ್ದ ಕಾರಣ ಸಂತ್ರಸ್ಥೆ ಆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂದೂ ತಿಳಿದುಬಂದಿದೆ.

  ಬಾಲಕಿಯ ತಾಯಿ ಗೃಹ ಸಹಾಯಕಳಾಗಿ ಕೆಲಸ ಮಾಡುತ್ತಾಳೆ ಹಾಗೂ ತಂದೆ ಕಾರ್ಮಿಕನಾಗಿದ್ದಾನೆ. ಸುಮಾರು ಒಂದು ವರ್ಷದ ಹಿಂದೆ ಆರೋಪಿ ತಂದೆ ತಾನು ಒಬ್ಬಂಟಿಯಾಗಿರುವಾಗ ಮೊದಲ ಬಾರಿ ರೇಪ್ ಮಾಡಿದ್ದು, ಈ ಘಟನೆಯನ್ನು ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಆ ವೇಳೆ ತನ್ನ ಕಿರಿಯ ಸಹೋದರ - ಸಹೋದರಿಯರಿಬ್ಬರೂ ಹೊರಗೆ ಆಡುತ್ತಿದ್ದರು ಎಂದು ದೂರು ನೀಡಿರುವ ಬಗ್ಗೆ ಎಸ್ಐ ರಿದ್ಧಿ ಶರ್ಮಾ ಹೇಳಿದ್ದಾರೆ.

  ಇದನ್ನೂ ಓದಿ: Crime News: ಯುವಕನೊಂದಿಗೆ ಪ್ರೇಮಾಂಕುರ; ಸಿಟ್ಟಿಗೆದ್ದ ತಂದೆ ಮಗಳ ತಲೆಯನ್ನೇ ಕತ್ತರಿಸಿದ...!

  ಅಲ್ಲದೆ, ತನ್ನ ತಾಯಿ ಕೆಲಸಕ್ಕೆ ಹೋಗುವಾಗೆಲ್ಲ ಹಲವು ಬಾರಿ ಅತ್ಯಾಚಾರ ಮಾಡುತ್ತಲೇ ಇದ್ದ. ಫೆಬ್ರವರಿ 28 ರಂದು, ತಾಯಿ ಕೆಲಸಕ್ಕೆ ತೆರಳಿದ್ದಾಗ, ಆರೋಪಿ ಮತ್ತೆ 14 ವರ್ಷದ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅವಳು ಓಡಿಹೋಗಲು ಪ್ರಯತ್ನಿಸಿದಳು, ಆದರೆ, ಆರೋಪಿ ಆಕೆಯ ಮೇಲೆ ಹಲ್ಲೆ ಮಾಡಿ ಒತ್ತಾಯ ಮಾಡಿದನು. ಬಾಲಕಿ ಮಂಗಳವಾರ ತನ್ನ ತಾಯಿಗೆ ಈ ಬಗ್ಗೆ ತಿಳಿಸಿದ್ದಾಳೆ. ಈ ಬಗ್ಗೆ ತಾಯಿ ತನ್ನ ಪತಿಯನ್ನು ಪ್ರಶ್ನಿಸಿದಾಗ ಇಬ್ಬರ ಮೇಲೂ ಹಲ್ಲೆ ಮಾಡಿದನು. ಆತ ಪಾನಮತ್ತನಾಗಿದ್ದ ಎಂದೂ ತಿಳಿದುಬಂದಿದೆ.

  ನಂತರ ಬಾಲಕಿಯ ತಾಯಿಯೇ ಸಂತ್ರಸ್ಥೆ ಬಾಲಕಿಯನ್ನು ಜಹಾಂಗೀರಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಈಗ ಆರೋಪಿಗಳನ್ನು ಹುಡುಕುತ್ತಿದ್ದಾರೆ.

  ಬಾಲಕಿಯ ತಾಯಿ ಆಕೆಯನ್ನು ಜಹಾಂಗೀರಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಆರೋಪಿ ತಂದೆ ತಪ್ಪಿಸಿಕೊಂಡಿದ್ದು, ಪೊಲೀಸರು ಈಗ ಆತನನ್ನು ಹುಡುಕುತ್ತಿದ್ದಾರೆ.
  Published by:Sushma Chakre
  First published: