Crime News: ಕೃಷ್ಣಾ ನದಿಗೆ ಹಾರಿ ಆಂಧ್ರ ವೈದ್ಯ ಆತ್ಮಹತ್ಯೆ; ಮೃತದೇಹಕ್ಕಾಗಿ ಹುಡುಕಾಟ

ವಿಜಯವಾಡದ ಬ್ಯಾರೇಜ್ ಬಳಿ ತನ್ನ ಐಡಿ ಕಾರ್ಡ್​, ಪರ್ಸ್​, ಮೊಬೈಲ್ ಫೋನನ್ನು ಇಟ್ಟು ಡಾ. ಶ್ರೀನಿವಾಸ್ ಕೃಷ್ಣಾ ನದಿಗೆ ಹಾರಿದ್ದಾರೆ. ವ್ಯಕ್ತಿಯೊಬ್ಬ ರಾತ್ರಿ ನದಿಗೆ ಹಾರುವಾಗ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

news18-kannada
Updated:August 24, 2020, 12:28 PM IST
Crime News: ಕೃಷ್ಣಾ ನದಿಗೆ ಹಾರಿ ಆಂಧ್ರ ವೈದ್ಯ ಆತ್ಮಹತ್ಯೆ; ಮೃತದೇಹಕ್ಕಾಗಿ ಹುಡುಕಾಟ
ಸಾಂದರ್ಭಿಕ ಚಿತ್ರ
  • Share this:
ವಿಜಯವಾಡ (ಆ. 24): ಆಂಧ್ರ ಪ್ರದೇಶದ ಗುಂಟೂರು ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯ ವಿಜಯವಾಡದ ಪ್ರಕಾಶಂ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ವೈದ್ಯ ನದಿಗೆ ಹಾರಿದ್ದು, ಅವರ ಮೃತದೇಹಕ್ಕಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

ವೈದ್ಯರ ಶವ ಇನ್ನೂ ಪತ್ತೆಯಾಗಿಲ್ಲ ಆದರೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಗುಂಟೂರಿನ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ವೈದ್ಯರನ್ನು 40 ವರ್ಷದ ಡಾ. ಎ. ಶ್ರೀನಿವಾಸ್ ಎಂದು ಗುರುತಿಸಲಾಗಿದೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Crime News: ಬುದ್ಧಿ ಹೇಳಿದ ಅಪ್ಪನನ್ನು ನಡುರಸ್ತೆಯಲ್ಲಿ ಕೊಂದ ಮಗ; ಬೆಳ್ತಂಗಡಿಯಲ್ಲಿ ಭೀಕರ ಕೃತ್ಯ

ಸೇತುವೆಯ ಮೇಲೆ ತನ್ನ ಐಡಿ ಕಾರ್ಡ್​, ಪರ್ಸ್​, ಮೊಬೈಲ್ ಫೋನನ್ನು ಇಟ್ಟು ಡಾ. ಶ್ರೀನಿವಾಸ್ ನದಿಗೆ ಹಾರಿದ್ದಾರೆ. ವ್ಯಕ್ತಿಯೊಬ್ಬ ರಾತ್ರಿ ನದಿಗೆ ಹಾರುವಾಗ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ವೈದ್ಯರ ಪರ್ಸ್​, ಐಡಿ ಕಾರ್ಡ್​, ಮೊಬೈಲ್ ಸಿಕ್ಕಿದೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಸಿಬ್ಬಂದಿ ಡಾ. ಶ್ರೀನಿವಾಸ್​ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಡಾ. ಶ್ರೀನಿವಾಸ್​ ಅವರು ಯಾವ ಕಾರಣಕ್ಕಾಗಿ ಕೃಷ್ಣಾ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಈ ಬಗ್ಗೆ ವಿಷಯ ಸಂಗ್ರಹಿಸುತ್ತಿದ್ದಾರೆ.

(ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ)
Published by: Sushma Chakre
First published: August 24, 2020, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading