Crime News: ಇನ್ಷುರೆನ್ಸ್ ಹಣಕ್ಕಾಗಿ ಹೆಂಡತಿ, ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಆರೋಪಿಗೆ 212 ವರ್ಷ ಜೈಲು ಶಿಕ್ಷೆ!
Murder: ಅಮೆರಿಕದ ಲಾಸ್ ಏಂಜಲೀಸ್ನ 45 ವರ್ಷದ ಅಲಿ ಎಲ್ಮೆಜಯೆನ್ ಎಂಬಾತ ವಿಮಾ ಪಾಲಿಸಿಯ ಹಣಕ್ಕಾಗಿ ಹೆಂಡತಿ, ಮಕ್ಕಳನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಅದಕ್ಕಾಗಿ ನೀರಿನಲ್ಲಿ ಅವರನ್ನು ಮುಳುಗಿಸಿ, ಅದು ಆಕಸ್ಮಿಕ ಸಾವು ಎಂದು ನಂಬಿಸಲು ಪ್ರಯತ್ನಿಸಿದ್ದ.
ಲಾಸ್ ಏಂಜಲೀಸ್ (ಮಾ. 12): ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಅಮೆರಿಕದ ಲಾಸ್ ಏಂಜಲೀಸ್ನ ವ್ಯಕ್ತಿಯೋರ್ವನಿಗೆ 212 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ! ಇನ್ಷುರೆನ್ಸ್ ಪಾಲಿಸಿಗಾಗಿ ಹೆಂಡತಿ ಮತ್ತು ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಲಾಸ್ ಏಂಜಲೀಸ್ನಲ್ಲಿ ಇದುವರೆಗೂ ನೀಡಿರುವ ಅತಿ ಹೆಚ್ಚಿನ ಜೈಲುಶಿಕ್ಷೆ ಇದಾಗಿದೆ.
45 ವರ್ಷದ ಅಲಿ ಎಲ್ಮೆಜಯೆನ್ ಎಂಬಾತ ವಿಮಾ ಪಾಲಿಸಿಯ ಹಣಕ್ಕಾಗಿ ಹೆಂಡತಿ, ಮಕ್ಕಳನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಅದಕ್ಕಾಗಿ ನೀರಿನಲ್ಲಿ ಅವರನ್ನು ಮುಳುಗಿಸಿ, ಅದು ಆಕಸ್ಮಿಕ ಸಾವು ಎಂದು ನಂಬಿಸಲು ಪ್ರಯತ್ನಿಸಿದ್ದ. 2015ರಲ್ಲಿ ತನ್ನ ಕಾರು ಕೆರೆಗೆ ಬಿದ್ದಿತೆಂದು ನಂಬಿಸಿ, ತಾನೊಬ್ಬನೇ ಆ ಅಪಘಾತದಲ್ಲಿ ಬಚಾವಾದೆ ಎಂದು ನಂಬಿಸಲು ನೋಡಿದ್ದ. ಆದರೆ, ಅದರ ಹಿಂದೆ ಅಲಿಯ ಕೈವಾಡವಿದೆ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. ಆತನ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿತ್ತು.
ತನ್ನ ಹೆಂಡತಿ-ಮಕ್ಕಳು ನೀರಿನಲ್ಲಿ ಮುಳುಗಿ ಸತ್ತರು ಎಂದು ಇನ್ಷುರೆನ್ಸ್ ಕಂಪನಿಗೆ ದಾಖಲೆಗಳನ್ನು ನೀಡಿ ಹಣ ಪಡೆದಿದ್ದ ಆರೋಪಿ ಅಲಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಇನ್ಷುರೆನ್ಸ್ ಕಂಪನಿಗೆ ಮೋಸ ಮಾಡಿದ್ದಕ್ಕೆ 2.61 ಲಕ್ಷ ಡಾಲರ್ ಪರಿಹಾರವನ್ನು ನೀಡಬೇಕೆಂದು ಆದೇಶಿಸಲಾಗಿದೆ. ಆತ ಇನ್ಷುರೆನ್ಸ್ ಕಂಪನಿಯಿಂದ 3 ಮಿಲಿಯನ್ ಡಾಲರ್ ಮೊತ್ತದ ಪಾಲಿಸಿ ಮಾಡಿಸಿಕೊಂಡಿದ್ದ. ಈ ಅಪಘಾತ ಸಂಭವಿಸುವುದಕ್ಕೂ ಮೊದಲು ಆ ಪಾಲಿಸಿಗಳ ಬಗ್ಗೆ ಇನ್ಷುರೆನ್ಸ್ ಕಂಪನಿಗೆ ಫೋನ್ ಮಾಡಿ ಮಾಹಿತಿ ಪಡೆದಿದ್ದ.
ಹೆಂಡತಿ ಮತ್ತು ಮಕ್ಕಳ ಹೆಸರಲ್ಲಿ ಇನ್ಷುರೆನ್ಸ್ ಪಾಲಿಸಿ ಮಾಡಿಸಿದ್ದ ಅಲಿ ವರ್ಷಕ್ಕೆ 6 ಸಾವಿರ ಡಾಲರ್ ಹಣ ಕಟ್ಟುತ್ತಿದ್ದ. ಅವರ ಹೆಸರಲ್ಲಿರುವ ಪಾಲಿಸಿ ಹಣವನ್ನು ಪಡೆಯಲು ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಕಾರಿನಲ್ಲಿ ಹೋಗುವಾಗ ಕಾರನ್ನು ಕೆರೆಗೆ ಹಾರಿಸಿದ್ದ. ಆತನ ಹೆಂಡತಿಗೂ ಈಜಲು ಬರುತ್ತಿರಲಿಲ್ಲ. ಮಕ್ಕಳು ಕಾರಿನ ಬಾಗಿಲು ತೆರೆದು ಹೊರಬರಲಾರದೆ ಕಾರೊಳಗೇ ಸಾವನ್ನಪ್ಪಿದ್ದರು. ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ದಾಖಲೆ ಸೃಷ್ಟಿಸಿದ್ದ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ