HOME » NEWS » National-international » CRIME NEWS A FATHER CHOPPED HER DAUGHTER HEAD AND TAKE IT POLICE STATION AT UTTAR PRADESH LG

Crime News: ಹದಿಹರೆಯದ ಮಗಳು ಅನ್ಯ ವ್ಯಕ್ತಿಯೊಂದಿಗೆ ಸಂಬಂಧ; ಆಕೆಯ ತಲೆ ಕತ್ತರಿಸಿ ರಸ್ತೆಗೆ ತಂದ ಅಪ್ಪ..!

17 ವರ್ಷದ ಆತನ ಮಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಯ ಮಗಳು ಯುವಕನೋರ್ವನೊಂದಿಗೆ ಸಂಬಂಧ ಹೊಂದಿದ್ದಳು. ಇದರಿಂದ ಅಸಮಾಧಾನವಾಗಿ ಈ ಕೃತ್ಯ ಎಸಗಿದ್ದೇನೆ. ಮೃತದೇಹ ನನ್ನ ಮನೆಯಲ್ಲಿದೆ ಎಂದು ಹೇಳಿಕೊಂಡಿದ್ದನು.

news18-kannada
Updated:March 5, 2021, 9:52 AM IST
Crime News: ಹದಿಹರೆಯದ ಮಗಳು ಅನ್ಯ ವ್ಯಕ್ತಿಯೊಂದಿಗೆ ಸಂಬಂಧ; ಆಕೆಯ ತಲೆ ಕತ್ತರಿಸಿ ರಸ್ತೆಗೆ ತಂದ ಅಪ್ಪ..!
ಸಾಂದರ್ಭಿಕ ಚಿತ್ರ
  • Share this:
ಉತ್ತರ ಪ್ರದೇಶ(ಮಾ.04): ಮಕ್ಕಳು ತಪ್ಪು ಮಾಡಿದಾಗ ಪೋಷಕರು ಬುದ್ಧಿ ಹೇಳಿ ಈ ರೀತಿಯ ತಪ್ಪುಗಳನ್ನು ಪುನಃ ಮಾಡದಂತೆ ಎಚ್ಚರಿಕೆ ಕೊಡುವುದನ್ನು ನೋಡಿರುತ್ತೇವೆ. ಆದರೆ, ಹದಿಹರೆಯದ ಮಗಳು ಅನ್ಯ ವ್ಯಕ್ತಿಯೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ತಲೆಯನ್ನು ಕತ್ತರಿಸಿ ಕೈಯಲ್ಲಿ ತಲೆ ಹಿಡಿದುಕೊಂಡು ಮೃತ ಯುವತಿಯ ತಂದೆ ರಸ್ತೆಯಲ್ಲಿ ಅರಾಮವಾಗಿ ನಡೆದುಕೊಂಡು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಲಕ್ನೋ ನಗರದಿಂದ 200 ಕಿ.ಮೀ. ದೂರದಲ್ಲಿರುವ ಪಾಂಡೇತರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ನಿವಾಸಿ ಸರ್ವೇಶ್ ಕುಮಾರ್ ಎಂಬಾತನಿಗೆ 17 ವರ್ಷದ ಮಗಳಿದ್ದಳು. ಆಕೆ ಇನ್ನೊಬ್ಬ ಯುವಕನೊಂದಿಗೆ ಸಂಬಂಧದಲ್ಲಿದ್ದಳು. ಇದಕ್ಕೆ ಅಸಮಾಧಾನಗೊಂಡ ತಂದೆ ಆಕೆಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ತಲೆಯನ್ನು ಕತ್ತರಿಸಿದ್ದನು. ಬಳಿಕ ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ನೀಡಲು ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಇಬ್ಬರು ಪೊಲೀಸ್ ಅಧಿಕಾರಿಗಳು ಆತನನ್ನು ತಡೆದು ಆತನ ಹೆಸರು, ಎಲ್ಲಿಂದ ಬರುತ್ತಿರುವುದು, ಈ ತಲೆ ಯಾರದು ಎಂದು ಪ್ರಶ್ನಿಸಿ ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಪೊಲೀಸರ ಪ್ರಶ್ನೆಗಳಿಗೆ ಗಾಬರಿ ಆಗದೇ ಧೈರ್ಯದಿಂದಲೇ ಸರ್ವೇಶ್ ಉತ್ತರ ಕೊಟ್ಟಿದ್ದಾನೆ.

Hatti Gold Mines: ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಬಂಗಾರ ಉತ್ಪಾದನೆ ಕುಸಿತ

ಇನ್ನು, ಪೊಲೀಸರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಸರ್ವೇಶ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. 17 ವರ್ಷದ ಆತನ ಮಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಯ ಮಗಳು ಯುವಕನೋರ್ವನೊಂದಿಗೆ ಸಂಬಂಧ ಹೊಂದಿದ್ದಳು. ಇದರಿಂದ ಅಸಮಾಧಾನವಾಗಿ ಈ ಕೃತ್ಯ ಎಸಗಿದ್ದೇನೆ. ಮೃತದೇಹ ನನ್ನ ಮನೆಯಲ್ಲಿದೆ ಎಂದು ಹೇಳಿಕೊಂಡಿದ್ದನು. ಈತನ ಹೇಳಿಕೆ ಪಡೆದುಕೊಂಡ ನಂತರ ಆತನನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು.

ಈ ಪ್ರಕರಣದ ಬಗ್ಗೆ ಮಾತನಾಡಿದ ಹರ್ದೋಯ್ನ ಪೊಲೀಸ್ ಅಧಿಕಾರಿ ಕಪಿಲ್ ಡಿಯೋ ಸಿಂಗ್ ಅವರು, 17 ವರ್ಷದ ಮಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಇರುವುದನ್ನು ಖಂಡಿಸಿ ಆಕೆಯ ತಂದೆ ಕೊಲೆ ಮಾಡಿದ್ದಾನೆ. ಮಗಳನ್ನು ಕೊಲೆಗೈದ ತಂದೆ ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ತರಲು ರಸ್ತೆಯಲ್ಲಿ ಬರುತ್ತಿದ್ದನು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರಿಗೆ ಸ್ಥಳಕ್ಕೆ ಹೋಗಲು ಸೂಚಿಸಲಾಯಿತು. ಆದರೆ, ಪೊಲೀಸರು ಆರೋಪಿಯೊಂದಿಗೆ ವಿಚಾರಣೆ ವೇಳೆ ವಿಡಿಯೋ ರೆಕಾರ್ಡ್ ಮಾಡಿದ್ದರು. ವಿಡಿಯೋದಲ್ಲಿ ಆರೋಪಿ ಕೈಯಲ್ಲಿದ್ದ ತಲೆಯನ್ನು ರೆಕಾರ್ಡ್ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ವಿಡಿಯೋ ರೆಕಾರ್ಡ್ ಮಾಡಿದ ಪೊಲೀಸ್ ಅನ್ನು ಅಮಾನತು ಮಾಡಲಾಗಿದೆ ಎಂದು ಕಪಿಲ್ ಡಿಯೋ ಅವರು ತಿಳಿಸಿದ್ದಾರೆ.
2020ರ ಸೆಪ್ಟಂಬರ್ನಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ 2019 ರಲ್ಲಿ ಅತಿ ಹೆಚ್ಚು ಅಪರಾಧಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಇನ್ನು, ಉತ್ತರ ಪ್ರದೇಶದಲ್ಲಿ ಪೋಕ್ಸೊ ಕಾಯ್ದೆಯಡಿ 7,444 ಪ್ರಕರಣಗಳು ದಾಖಲಾಗಿವೆ. ಇದು ಹೆಣ್ಣು ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳು ನಡೆದ ರಾಜ್ಯ ಎಂಬ ಕುಖ್ಯಾತಿಯನ್ನು ಪಡೆದಿದೆ. ಪೋಕ್ಸೊ ಅಡಿ ಮಹಾರಾಷ್ಟ್ರದಲ್ಲಿ 6,402 ಪ್ರಕರಣ, ಮಧ್ಯಪ್ರದೇಶದಲ್ಲಿ 6,053 ಕೇಸ್ ದಾಖಲಾಗಿವೆ.

Story Link: https://www.ndtv.com/india-news/hardoi-up-man-cuts-off-daughters-head-tries-to-take-it-to-police-station-2383087
https://www.thebharatexpressnews.com/up-man-cuts-off-his-daughters-head-and-tries-to-take-her-to-the-police-station/
Published by: Latha CG
First published: March 4, 2021, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories