Murder: ಹೆಂಡತಿಯನ್ನು ಕೊಂದು, ಬೆಡ್​ರೂಂನಲ್ಲೇ ಸುಟ್ಟು ಹಾಕಿದ 84 ವರ್ಷದ ವೃದ್ಧ!

Crime News: ಮಹಾರಾಷ್ಟ್ರದ ಬಲಿರಾಮ್ ಎಂಬ 84 ವರ್ಷದ ವೃದ್ಧ ತಮ್ಮ 80 ವರ್ಷದ ಹೆಂಡತಿಯ ಜೊತೆ ಜಗಳವಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಬೆಡ್​ರೂಂನಲ್ಲೇ ಸುಡಲು ಪ್ರಯತ್ನಿಸಿದ್ದಾರೆ. ಬೆಳಗ್ಗೆ ಅರೆಬರೆ ಸುಟ್ಟ ಶವ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ (ಫೆ. 2): ಮಹಾರಾಷ್ಟ್ರದ ಡೊಂಬಿವ್ಲಿಯ 84 ವರ್ಷದ ವೃದ್ಧರೊಬ್ಬರು ತಮ್ಮ ಹೆಂಡತಿಯನ್ನು ಕೊಲೆ ಮಾಡಿ, ತಮ್ಮ ಬಂಗಲೆ ಬೆಡ್​ರೂಂನಲ್ಲೇ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಕೆಡಿಎಂಸಿ ಮಾಜಿ ಕಾರ್ಪೋರೇಟರ್​ನ ತಂದೆಯಾಗಿರುವ ಬಲಿರಾಮ್ ಪಾಟೀಲ್ ಈ ಕೊಲೆ ಮಾಡಿದವರು. ತಮ್ಮ 80 ವರ್ಷದ ಹೆಂಡತಿ ಪಾರ್ವತಿ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಲಾರಂಭಿಸಿದ ಅವರು ಕೋಪದಿಂದ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಶಾರ್ಟ್​ ಟೆಂಪರ್ ಆಗಿದ್ದ ಬಲಿರಾಮ ಪಾಟೀಲ್ ಹೆಂಡತಿಯ ಜೊತೆ ಜಗಳವಾಡಿಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಬಲಿರಾಮ್ ಅವರನ್ನು ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ. ಆರೋಪಿಯ ಮಗ ರಮಾಕಾಂತ್ ಮಾಜಿ ಕಾರ್ಪೋರೇಟರ್ ಆಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿದುಬಂದಿದೆ.

ಡೊಂಬಿವ್ಲಿಯಲ್ಲಿರುವ ಬಲಿರಾಮ ಅವರ ಬಂಗಲೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಹೆಂಡತಿಯನ್ನು ಕೊಂದ ಬಲಿರಾಮ್ ಆಕೆಯ ಶವವನ್ನು ಬೆಡ್​ರೂಂನಲ್ಲೇ ಸುಟ್ಟುಹಾಕಿದ್ದಾರೆ. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ಭಾನುವಾರ ಬೆಳಗ್ಗೆ ಬಲಿರಾಮ್ ಅವರ ಸೊಸೆ ಎದ್ದ ಮೇಲೆ ಮನೆಯಲ್ಲಿ ಹೊಗೆ ತುಂಬಿಕೊಂಡಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ತನ್ನ ಅತ್ತೆ-ಮಾವನ ರೂಮಿನಿಂದ ಹೊಗೆ ಬರುತ್ತಿರುವುದನ್ನು ಕಂಡು ಆತಂಕದಿಂದ ತನ್ನ ಗಂಡನನ್ನು ಎಬ್ಬಿಸಿದ್ದಾರೆ.

ಇದನ್ನೂ ಓದಿ: ಪೋಲಿಯೋ ಹನಿ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್ ಹಾಕಿದ ಅಧಿಕಾರಿಗಳು; 12 ಮಕ್ಕಳು ಆಸ್ಪತ್ರೆಗೆ ದಾಖಲು

ವಿಷಯ ತಿಳಿದ ಕೂಡಲೆ ಆ ಬಂಗಲೆಯಲ್ಲಿ ವಾಸಿಸುವವರೆಲ್ಲರೂ ಬಲಿರಾಮ್ ಅವರ ರೂಮಿನತ್ತ ಬಂದಿದ್ದಾರೆ. ರೂಮಿನ ಬಾಗಿಲು ಬಡಿದರೂ ತೆಗೆಯದ ಕಾರಣ ಅನುಮಾನಗೊಂಡ ಅವರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ರೂಮಿನ ಬೆಡ್ ಮೇಲೆ ಅರೆಬರೆ ಸುಟ್ಟುಹೋಗಿದ್ದ ಪಾರ್ವತಿಯವರ ಮೃತದೇಹ ಕಂಡು ಗಾಬರಿಯಾಗಿದ್ದಾರೆ. ಆಕೆಯ ಹೊಟ್ಟೆಗೆ ಸಾಕಷ್ಟು ಬಾರಿ ಚಾಕುವಿನಿಂದ ಇರಿದಿದ್ದರಿಂದ ರಕ್ತದ ಹೊಳೆಯೇ ಹರಿದಿತ್ತು. ಕೊಲೆ ಮಾಡಿದ ಮೇಲೆ ತಾನು ಸಿಕ್ಕಿಬೀಳುತ್ತೇನೆಂಬ ಭಯದಲ್ಲಿ ಬಲಿರಾಮ್ ಮನೆಯಿಂದ ನಾಪತ್ತೆಯಾಗಿದ್ದರು.

ಈ ಕೊಲೆಗೆ ಕಾರಣ ಯಾರು, ತಮ್ಮ ಅಪ್ಪ ಎಲ್ಲಿ ಹೋದರೆಂದು ತಿಳಿಯದೆ ರಮಾಕಾಂತ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪಕ್ಕದ ಊರಿನ ಸಂಬಂಧಿಕರ ಮನೆಯಲ್ಲಿದ್ದ ಬಲಿರಾಮ್ ಅವರನ್ನು ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಸದಾ ಸಣ್ಣಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುತ್ತಿದ್ದ ಬಲಿರಾಮ್ ಇತ್ತೀಚೆಗೆ ಸದಾ ಜಗಳವಾಡುತ್ತಿದ್ದರು ಎಂದು ರಮಾಕಾಂತ್ ಹೇಳಿದ್ದಾರೆ. ಘಟನೆಯ ದಿನ ರಾತ್ರಿ ಕೂಡ ತನ್ನ ತಂದೆ-ತಾಯಿ ಜೋರಾಗಿ ಜಗಳವಾಡಿದ್ದರೆಂದು ರಮಾಕಾಂತ್ ಹೇಳಿದ್ದಾರೆ.
Published by:Sushma Chakre
First published: