6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಆರೋಪಿ ಮನೆಯಲ್ಲಿ ಅರೆಬರೆ ಸುಟ್ಟ ಶವ ಪತ್ತೆ

ಪಂಜಾಬ್​ನ ವಲಸೆ ಕಾರ್ಮಿಕನ ಮಗಳಾಗಿದ್ದ 6 ವರ್ಷದ ಬಾಲಕಿಯನ್ನು ಗುರಪ್ರೀತ್ ಸಿಂಗ್ ತನ್ನ ಮನೆಗೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದ. ನಂತರ ಅಜ್ಜನೊಂದಿಗೆ ಸೇರಿ ಆಕೆಯ ಶವವನ್ನು ಮನೆಯಲ್ಲೇ ಸುಟ್ಟುಹಾಕಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಅ. 23): ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಸ್ವಲ್ಪವೂ ಕಡಿಮೆಯಾಗಿಲ್ಲ. ದಿನ ಬೆಳಗಾದರೆ ಅತ್ಯಾಚಾರ, ಕೊಲೆಯ ವಿಷಯಗಳನ್ನು ಕೇಳಿ ಜನರು ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಯೋಚನೆ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಕಳೆದ ವಾರ ಸಾಲುಸಾಲಾಗಿ ಭಯಾನಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ನಿನ್ನೆ ಪಂಜಾಬ್​ನಲ್ಲಿ ಅದೇ ರೀತಿಯ ಭಯಾನಕ ಘಟನೆಯೊಂದು ನಡೆದಿದ್ದು, 6 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಆ ಬಾಲಕಿಯ ಅರೆಬರೆ ಸುಟ್ಟ ಮೃತದೇಹ ಆರೋಪಿಯ ಮನೆಯಲ್ಲಿ ಪತ್ತೆಯಾಗಿದೆ!

  ಪಂಜಾಬ್​ನ ಹೋಶಿಯಾರ್​ಪುರದ ಜಲಾಲ್ಪುರ ಗ್ರಾಮದಲ್ಲಿ ಈ ಹೀನ ಕೃತ್ಯ ನಡೆದಿದೆ. ವಲಸೆ ಕಾರ್ಮಿಕನ ಮಗಳಾಗಿದ್ದ 6 ವರ್ಷದ ಬಾಲಕಿಯನ್ನು ಆಕೆಯ ತಂದೆ-ತಾಯಿ ಕೆಲಸಕ್ಕೆ ಹೋಗುವಾಗ ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಗುರಪ್ರೀತ್ ಸಿಂಗ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಗುರಪ್ರೀತ್ ಸಿಂಗ್ ಮನೆಗೆ ತೆರಳಿದಾಗ ಆತನ ಮನೆಯಲ್ಲಿ ಅರ್ಧಂಬರ್ಧ ಸುಟ್ಟುಹೋಗಿದ್ದ ಬಾಲಕಿಯ ಶವ ಪತ್ತೆಯಾಗಿತ್ತು.

  ಇದನ್ನೂ ಓದಿ: ಹಬ್ಬಗಳ ಪ್ರಯುಕ್ತ ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ; ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

  ಕೊಲೆ ಆರೋಪಿಗಳಾದ ಗುರಪ್ರೀತ್ ಸಿಂಗ್ ಮತ್ತು ಆತನ ಅಜ್ಜ ಸುರ್ಜೀತ್ ಸಿಂಗ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ ಗುರಪ್ರೀತ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ತನ್ನ ಅಜ್ಜ ಸುರ್ಜೀತ್ ಸಿಂಗ್ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಿದ್ದ.

  ಕೊಲೆಯ ವಿಷಯ ಗೊತ್ತಾಗಬಹುದು ಎಂಬ ಭೀತಿಯಲ್ಲಿ ಆಕೆಯ ಶವವನ್ನು ಮನೆಯಲ್ಲೇ ಸುಟ್ಟುಹಾಕಿದ್ದ. ಪೂರ್ತಿ ಸುಟ್ಟಿರದ ಮೃತದೇಹ ಪೊಲೀಸ್ ವಿಚಾರಣೆ ವೇಳೆ ಸಿಕ್ಕಿತ್ತು. ಮೃತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಗುರಪ್ರೀತ್ ಸಿಂಗ್ ಮತ್ತು ಸುರ್ಜೀತ್ ಸಿಂಗ್ ಅವರ ಮೇಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅತ್ಯಾಚಾರ ಮತ್ತು ಕೊಲೆಯ ಕೇಸನ್ನೂ ದಾಖಲಿಸಲಾಗಿದೆ.
  Published by:Sushma Chakre
  First published: