HOME » NEWS » National-international » CRIME NEWS 50 YEAR OLD MUMBAI MAN SLASHES LOVERS CHEEK WITH BLADE AFTER SEEING HER INSTAGRAM PHOTO SCT

ಪ್ರೇಯಸಿಯ ಇನ್​ಸ್ಟಾಗ್ರಾಂ ಫೋಟೋ ನೋಡಿ ಅಸೂಯೆ; ಬ್ಲೇಡ್​ನಿಂದ ಯುವತಿಯ ಕೆನ್ನೆ ಸೀಳಿದ ಪ್ರೇಮಿ

Crime News | ತನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವತಿ ಬೇರೊಬ್ಬನ ಜೊತೆ ಕ್ಲೋಸ್ ಆಗಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಕ್ಕೆ ಅಸೂಯೆಗೊಂಡ ವ್ಯಕ್ತಿ ಆಕೆಯ ಕೆನ್ನೆಯನ್ನು ಸೀಳಿದ್ದಾನೆ!

Sushma Chakre | news18-kannada
Updated:February 6, 2021, 1:12 PM IST
ಪ್ರೇಯಸಿಯ ಇನ್​ಸ್ಟಾಗ್ರಾಂ ಫೋಟೋ ನೋಡಿ ಅಸೂಯೆ; ಬ್ಲೇಡ್​ನಿಂದ ಯುವತಿಯ ಕೆನ್ನೆ ಸೀಳಿದ ಪ್ರೇಮಿ
ಪ್ರಾತಿನಿಧಿಕ ಚಿತ್ರ
  • Share this:
ಮುಂಬೈ (ಫೆ. 6): 20 ವರ್ಷದ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ 50 ವರ್ಷದ ವ್ಯಕ್ತಿಯೊಬ್ಬ ಆಕೆಯ ಮೇಲೆ ಕೋಪಗೊಂಡು, ಆಕೆಯ ಕೆನ್ನೆಯನ್ನು ಬ್ಲೇಡ್​ನಿಂದ ಕತ್ತರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವತಿ ಬೇರೊಬ್ಬನ ಜೊತೆ ಕ್ಲೋಸ್ ಆಗಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಕ್ಕೆ ಅಸೂಯೆಗೊಂಡ ವ್ಯಕ್ತಿ ಆಕೆಯ ಕೆನ್ನೆಯನ್ನು ಸೀಳಿದ್ದಾನೆ!

ಮುಂಬೈನ ಜೋಗೇಶ್ವರಿ ನಿವಾಸಿಯಾಗಿರುವ 50 ವರ್ಷದ ಸಗೀರ್ ಖಾನ್ ಎಂಬ ವ್ಯಕ್ತಿ 20 ವರ್ಷದ ಸನಾ ಶೇಖ್ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ತನಗಿಂತ 30 ವರ್ಷ ಚಿಕ್ಕವಳಾಗಿದ್ದ ಆಕೆ ತನ್ನನ್ನು ಬಿಟ್ಟು ಬೇರೆಯವರೊಂದಿಗೆ ಹೋದರೆ ಏನು ಮಾಡುವುದು ಎಂದು ಆತನಿಗೆ ಆತಂಕ ಉಂಟಾಗಿತ್ತು. ಈ ವಿಷಯವನ್ನು ಆಕೆಯ ಬಳಿಯೂ ಹೇಳಿದ್ದ. ಇದೇ ಕಾರಣಕ್ಕೆ ಆಗಾಗ ಜಗಳವೂ ಆಗುತ್ತಿತ್ತು. ಆಕೆ ತನ್ನ ಸ್ನೇಹಿತನ ಜೊತೆ ಸೆಲ್ಫೀ ತೆಗೆದುಕೊಂಡು ಅದನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಳು. ಸುಂದರವಾಗಿದ್ದ ಆಕೆಯ ಜೊತೆ ನಿಂತಿದ್ದ ಯುವಕನ ಫೋಟೋವನ್ನು ನೋಡಿ ಅಸೂಯೆಗೊಂಡ ಸಗೀರ್ ಖಾನ್ ಆಕೆಗೆ ಫೋನ್ ಮಾಡಿ ಬರಲು ಹೇಳಿದ್ದ.

ಇದನ್ನೂ ಓದಿ: Murder: ಹೆಂಡತಿಯನ್ನು ಕೊಂದು, ಬೆಡ್​ರೂಂನಲ್ಲೇ ಸುಟ್ಟು ಹಾಕಿದ 84 ವರ್ಷದ ವೃದ್ಧ!

ಸಗೀರ್ ಖಾನ್​ನನ್ನು ಭೇಟಿಯಾದ ಸನಾ ಶೇಖ್ ಆತನ ಜೊತೆ ಜಗಳವಾಡಿದ್ದಳು. ಆಕೆ ಆ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆಂಬ ಕೋಪದಲ್ಲಿ ಸಗೀರ್ ಖಾನ್ ಆಕೆಯ ಕೆನ್ನೆಗೆ ಬ್ಲೇಡ್​ನಿಂದ ಗಾಯಗೊಳಿಸಿದ್ದಾನೆ.

ಆಕೆಯ ಮುಖದ ಸೌಂದರ್ಯವನ್ನು ಹಾಳು ಮಾಡಿದರೆ ಯಾರೂ ಆಕೆಯೊಂದಿಗೆ ಸ್ನೇಹ ಬೆಳೆಸುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಆತ ಹೇಳಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Published by: Sushma Chakre
First published: February 6, 2021, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories