HOME » NEWS » National-international » CRIME NEWS 45 YEAR OLD WOMAN ARRESTED FOR RAPING MINOR BOY IN UTTAR PRADESH STG SCT

Crime News: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ!

Crime News: ಬಾಲಕ ಶಿಕ್ಷಕರ ಮನೆಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದ. ಇದನ್ನು ಗಮನಿಸಿದ್ದ ನೆರೆಮನೆಯ ಮಹಿಳೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆಂದು ಆರೋಪಿಸಲಾಗಿದೆ.

news18
Updated:February 26, 2021, 2:29 PM IST
Crime News: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ!
ಸಾಂದರ್ಭಿಕ ಚಿತ್ರ
  • News18
  • Last Updated: February 26, 2021, 2:29 PM IST
  • Share this:
ನವದೆಹಲಿ (ಫೆ. 26): ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಮಹಿಳೆಯ ವಿರುದ್ಧ ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ಧಾರ್ಥನಗರ ಜಿಲ್ಲೆ ಮೂಲದ 45 ವರ್ಷದ ಮಹಿಳೆ 2016ರ ಜುಲೈ 10 ರಂದು ಬಾಲಕನ ಮೇಲೆ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಶಿಕ್ಷಕರ ಮನೆಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದ. ಇದನ್ನು ಗಮನಿಸಿದ್ದ ನೆರೆಮನೆಯ ಮಹಿಳೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆಂದು ಆರೋಪಿಸಲಾಗಿದೆ.

ಆಕೆ ಬಾಲಕನ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದಳು. ನಂತರ 2020ರ ಡಿಸೆಂಬರ್ 20 ರಂದು ಆಕೆ ಇಬ್ಬರು ದುಷ್ಕರ್ಮಿಗಳೊಂದಿಗೆ ಬಾಲಕನ ಮನೆಗೆ ಹೋಗಿದ್ದಳು. ಬಾಲಕನ ಜೊತೆ ತನ್ನ ಮಗಳಿಗೆ ಮದುವೆ ಮಾಡಿಸಬೇಕೆಂದು ಆತನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಳು. ನನಗೆ ದೊಡ್ಡ ದೊಡ್ಡವರ ಪರಿಚಯವಿದೆ, ಒಂದು ವೇಳೆ ನನ್ನ ಮಗಳ ಜೊತೆ ನಿಮ್ಮ ಮಗನ ಮದುವೆ ಮಾಡಿಸದಿದ್ದರೆ ಆತನ ವಿರುದ್ಧ ಸುಳ್ಳು ಆರೋಪ ಹೋರಿಸಿ ಜೈಲಿಗೆ ಕಳಿಸುತ್ತೇನೆ ಎಂದು ಕೂಡ ಹೆದರಿಸಿದ್ದಳು.

2016ರಲ್ಲಿ 9ನೇ ತರಗತಿ ಓದುತ್ತಿದ್ದ ಯುವಕನಿಗೂ ಈಕೆ ಬೆದರಿಕೆ ಹಾಕಿದ್ದಳು. 2019ರಲ್ಲಿ ಇಂಟರ್ ಮೀಡಿಯಟ್ ಶಿಕ್ಷಣ ಪೂರೈಸಿದ್ದ ಆ ಯುವಕ ಸದ್ಯ ಪದವೀಧರ ವಿದ್ಯಾರ್ಥಿಯಾಗಿದ್ದಾನೆ. ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆ ಸಿದ್ಧಾರ್ಥನಗರ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿವಿಧ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಪುಣೆಯ ಆಟೋಮೊಬೈಲ್‌ ಕಂಪನಿ ಉದ್ಯೋಗಿ ಸಾವು; ಗಂಡನ ಸಾವಿಗೆ ರೋಬೋಟ್‌ ಕಾರಣವೆಂದ ಹೆಂಡತಿ!

ನ್ಯಾಯಾಲಯವು ಗುರುವಾರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ)ಯ ಸೆಕ್ಷನ್ 156 (3) ರ ಅಡಿಯಲ್ಲಿ ಆದೇಶ ಹೊರಡಿಸಿದ್ದು, ನಂತರ ಎಫ್‌ಐಆರ್ ದಾಖಲಿಸಲಾಗಿದೆ. ‘ನ್ಯಾಯಾಲಯದ ಆದೇಶದೊಂದಿಗೆ, ಐಪಿಸಿ ಸೆಕ್ಷನ್ 504 (ಶಾಂತಿ ಉಲ್ಲಂಘನೆ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಪೋಕ್ಸೋ ಕಾಯ್ದೆಯಡಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Youtube Video

ಸದ್ಯ ನಮ್ಮ ಪೊಲೀಸ್ ಸಿಬ್ಬಂದಿ ಮಹಿಳೆಯ ಹುಡುಕಾಟದಲ್ಲಿದ್ದಾರೆ’ ಸಿದ್ಧಾರ್ಥನಗರದ ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ ಪೆಕ್ಟರ್ ರಾಜೇಂದ್ರ ಯಾದವ್ ಹೇಳಿದ್ದಾರೆ.
Published by: Sushma Chakre
First published: February 26, 2021, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories