4 ವರ್ಷದ ಮಗನಿಂದಲೇ ಬಯಲಾಯ್ತು ಅಮ್ಮನ ಅಕ್ರಮ ಸಂಬಂಧ; ಆಮೇಲೆ ನಡೆದಿದ್ದು ದೊಡ್ಡ ದುರಂತ!

ಹೆಂಡತಿಯ ನಡವಳಿಕೆ ಬಗ್ಗೆ ಮೊದಲೇ ಅನುಮಾನವಿದ್ದುದರಿಂದ ಹೆಂಡತಿ ದೀಪಾಗೆ ಆಂಟೋನಿ ವಾಟ್ಸಾಪ್​ ವಿಡಿಯೋ ಕಾಲ್ ಮಾಡಿದ್ದ. ಆದರೆ, ಪ್ರಿಯಕರನ ಜೊತೆ ಲಾಡ್ಜ್​ನಲ್ಲಿದ್ದ ದೀಪಾ ಗಂಡನ ಫೋನ್ ರಿಸೀವ್ ಮಾಡಿರಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧುರೈ (ಫೆ. 25): ಕೆಲವೊಮ್ಮೆ ಸಣ್ಣ-ಪುಟ್ಟ ಕಾರಣಗಳೇ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತವೆ. ಗಂಡ-ಹೆಂಡತಿ ನಡುವೆ ಸಂಬಂಧ ಸರಿ ಇಲ್ಲದಿದ್ದಾಗ ಮಕ್ಕಳ ಮೇಲೂ ಪರಿಣಾಮ ಉಂಟಾಗುತ್ತದೆ. ಮಕ್ಕಳ ಮನಸಿನ ಮೇಲೆ ಅವರ ಸುತ್ತಲೂ ನಡೆಯುವ ಘಟನೆಗಳು ಪ್ರಭಾವ ಬೀರುತ್ತಲೇ ಇರುತ್ತದೆ. ತಮಿಳುನಾಡಿನ ಮಧುರೈನಲ್ಲಿ 4 ವರ್ಷದ ಮಗ ತನ್ನ ಅಮ್ಮನ ಅನೈತಿಕ ಸಂಬಂಧದ ಬಗ್ಗೆ ಅಪ್ಪನಿಗೆ ಹೇಳಿದ ಎಂಬ ಕಾರಣಕ್ಕೆ ಆತನಿಗೆ ಹೊಡೆದು, ಕೊಂದಿರುವ ದಾರುಣ ಘಟನೆ ನಡೆದಿದೆ.

ಕೊಯಮತ್ತೂರಿನ ಪೊಲ್ಲಾಚಿ ನಿವಾಸಿಯಾಗಿರುವ ದೀಪಾಳಿಗೆ 2015ರಲ್ಲಿ ಆಂಟೋನಿ ಪ್ರಕಾಶ್ ಎಂಬಾತನ ಜೊತೆ ಮದುವೆಯಾಗಿತ್ತು. ನಂತರ, ಅವರಿಬ್ಬರೂ ಪೊಲ್ಲಾಚಿಯಲ್ಲೇ ವಾಸವಾಗಿದ್ದರು. ಅವರಿಬ್ಬರಿಗೂ ಆಂಟೋನಿಯ ಗ್ರಾಮದಲ್ಲೇ ವಾಸವಾಗಿದ್ದರು. ಅವರಿಬ್ಬರಿಗೂ ಲೋಕೇಶ್​ ಎಂಬ 4 ವರ್ಷದ ಮಗನಿದ್ದ. ದೀಪಾ ಮತ್ತು ಆಂಟೋನಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೆತ್ತವರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ಅಪ್ಪ-ಅಮ್ಮನ ಜಗಳದಲ್ಲಿ ಮಗುವಿನತ್ತ ನಿರ್ಲಕ್ಷ್ಯ ವಹಿಸಲಾಗುತ್ತಿತ್ತು.

ಇದನ್ನೂ ಓದಿ: ಜಯಲಲಿತಾ ಜನ್ಮದಿನದಂದು ಹುಟ್ಟಿದ ಮಕ್ಕಳಿಗೆ ತಮಿಳುನಾಡು ಸರ್ಕಾರದಿಂದ ಚಿನ್ನದ ಉಂಗುರ ಗಿಫ್ಟ್​

ಆಂಟೋನಿ ಜೊತೆಗೆ ಜಗಳವಾಡುತ್ತಿದ್ದ ದೀಪಾಗೆ ಸೂರಿಮುತ್ತು ಎಂಬ ವ್ಯಕ್ತಿ ಆಪ್ತನಾಗಿದ್ದ. ಅವರಿಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಆಕೆಯ ಗಂಡ ಆಂಟೋನಿಗೆ ಅನುಮಾನವಿತ್ತು. ಇದೇ ಕಾರಣಕ್ಕೆ ಅವರಿಬ್ಬರ ಮಧ್ಯೆ ಜಗಳ ಜಾಸ್ತಿಯಾಗುತ್ತಿತ್ತು. ಗಂಡ ಆಂಟೋನಿ ಕೆಲಸಕ್ಕೆ ಹೊರಗೆ ಹೋದ ನಂತರ ದೀಪಾ ಹಾಗೂ ಸೂರಿಮುತ್ತು ಹೊರಗೆ ಹೋಗುತ್ತಿದ್ದರು.

ಅದೊಂದು ದಿನ ದೀಪಾ ತನ್ನ ಪ್ರಿಯಕರನ ಜೊತೆ ಹೊರಗೆ ಹೋಗುವಾಗ ಮಗ ಲೋಕೇಶ್​ನನ್ನೂ ಕರೆದುಕೊಂಡು ಹೋಗಿದ್ದಳು. ಗಂಡ ಸಂಜೆಯವರೆಗೂ ಬರುವುದಿಲ್ಲ ಎಂದು ತಿಳಿದು ಪ್ರಿಯಕರ ಸೂರಿಮುತ್ತು ಜೊತೆಗೆ ದೀಪಾ ಲಾಡ್ಜ್​ಗೆ ಹೊರಟಳು. ಲಾಡ್ಜ್​ಗೆ ಹೋದ ನಂತರ ಮಗನನ್ನು ರೂಮಿನಿಂದ ಹೊರಗೆ ನಿಲ್ಲಿಸಿ ಅವರಿಬ್ಬರೂ ಒಳಗೆ ಹೋದರು. ನಂತರ ಮಗ ಎಲ್ಲಾದರೂ ಓಡಿಹೋದರೆ ಕಷ್ಟವೆಂದು ಮತ್ತೆ ಆತನನ್ನು ರೂಮಿನೊಳಗೆ ಬಿಟ್ಟುಕೊಂಡಿದ್ದರು. ಆ ದಿನ ಬೇಗನೆ ಮನೆಗೆ ಬಂದ ಆಂಟೋನಿ ಮನೆಯಲ್ಲಿ ಹೆಂಡತಿ ಮತ್ತು ಮಗ ಕಾಣದಿದ್ದರಿಂದ ದೀಪಾಗೆ ಫೋನ್ ಮಾಡಿದ್ದರು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಗಂಡನ ಕನಸು ನನಸಾಗಿಸಲು ಸೇನೆ ಸೇರಿದ ಹೆಂಡತಿ; ಇದು ಹುತಾತ್ಮ ಯೋಧನ ಪತ್ನಿಯ ಮನಕಲಕುವ ಕತೆ

ಮೊದಲೇ ಹೆಂಡತಿಯ ನಡವಳಿಕೆ ಬಗ್ಗೆ ಅನುಮಾನವಿದ್ದುದರಿಂದ ಹೆಂಡತಿ ದೀಪಾಗೆ ಆಂಟೋನಿ ವಾಟ್ಸಾಪ್​ ವಿಡಿಯೋ ಕಾಲ್ ಮಾಡಿದ್ದರು. ಆದರೆ, ಪ್ರಿಯಕರನ ಜೊತೆ ಲಾಡ್ಜ್​ನಲ್ಲಿದ್ದ ದೀಪಾ ಗಂಡನ ಫೋನ್ ರಿಸೀವ್ ಮಾಡಿರಲಿಲ್ಲ. ಇತ್ತ, ತನ್ನನ್ನು ರೂಮಿನ ಹೊರಗೆ ಸುಮ್ಮನೆ ನಿಲ್ಲುವಂತೆ ಹೇಳಿದ ದೀಪಾಳ ಮಾತನ್ನು ಕೇಳದ ಮಗ ಲೋಕೇಶ್ ಒಳಗೆ ಬರುತ್ತೇನೆಂದು ಹಠ ಮಾಡಿದ್ದ. ಇದರಿಂದ ಕೋಪಗೊಂಡ ಸೂರಿಮುತ್ತು ಆತನ ಕೆನ್ನೆಗೆ ಬಾರಿಸಿದ್ದ. ನಂತರ ಮಗನನ್ನು ಸಮಾಧಾನ ಮಾಡಿದ ದೀಪಾ ಮಗನಿಗೆ ತನ್ನ ಮೊಬೈಲನ್ನು ನೀಡಿ, ಹೊರಗೆ ನಿಲ್ಲುವಂತೆ ಹೇಳಿದ್ದಳು.

ಹೆಂಡತಿ ಫೋನ್ ರಿಸೀವ್ ಮಾಡದ್ದನ್ನು ನೋಡಿ ಕೋಪಗೊಂಡು ಆಂಟೋನಿ ಮತ್ತೊಮ್ಮೆ ಫೋನ್ ಮಾಡಿದ್ದ. ಆಗ ಅಮ್ಮನ ಮೊಬೈಲ್​ನೊಂದಿಗೆ ಹೊರಗೆ ನಿಂತಿದ್ದ ಲೋಕೇಶ್​ ಆ ಕರೆಯನ್ನು ರಿಸೀವ್ ಮಾಡಿದ್ದ. ಮಗ ಫೋನ್ ರಿಸೀವ್ ಮಾಡುತ್ತಿದ್ದಂತೆ ಅಮ್ಮ ಎಲ್ಲಿದ್ದಾಳೆಂದು ಕೇಳಿದ ಆಂಟೋನಿಗೆ ಆತ ಎಲ್ಲ ವಿಷಯವನ್ನೂ ಹೇಳಿದ್ದ. ಸೂರಿಮುತ್ತು ತನಗೆ ಹೊಡೆದಿದ್ದನ್ನೂ ಲೋಕೇಶ್​ ತನ್ನ ಅಪ್ಪನಿಗೆ ಹೇಳಿದ್ದ.

ಇದನ್ನೂ ಓದಿ: ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕಾಗಿ ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ; ವಿಷಯ ತಿಳಿದು ಪ್ರಿಯತಮೆ ಸಾವು!

ಲೋಕೇಶ್​ ತಮ್ಮಿಬ್ಬರ ವಿಷಯವನ್ನು ಆಂಟೋನಿಗೆ ಹೇಳಿದ ವಿಷಯ ದೀಪಾ ಮತ್ತು ಸೂರಿಮುತ್ತುಗೆ ತಿಳಿಯಿತು. ಇದರಿಂದ ಕೋಪಗೊಂಡ ಸೂರಿಮುತ್ತು ಲೋಕೇಶ್​ಗೆ ಲಾಡ್ಜ್​ನಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾನೆ. ಹೊಡೆತದಿಂದ ಪ್ರಜ್ಞಾಹೀನನಾಗಿ ಬಿದ್ದ ಲೋಕೇಶ್​​ನನ್ನು ತಿರುನೆಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಸೂರಿಮುತ್ತು ಪರಾರಿಯಾಗಿದ್ದ. 2 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಲೋಕೇಶ್​ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಹೆಂಡತಿಯ ಅನೈತಿಕ ಸಂಬಂಧ ತಿಳಿದು ಕೋಪಗೊಂಡಿದ್ದ ಆಂಟೋನಿ, ಆಕೆಯ ಪ್ರಿಯಕರನಿಂದಲೇ ಮಗ ಸತ್ತಿದ್ದರಿಂದ ಆಕ್ರೋಶಗೊಂಡು ಹೆಂಡತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.

 
First published: