Crime News: ಎಂಗೇಜ್​ಮೆಂಟ್​ ಪಾರ್ಟಿಗೆ ಕರೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ತನ್ನದೇ ಎಂಗೇಜ್​ಮೆಂಟ್ ಪಾರ್ಟಿಗೆ ಗೆಳೆತಿಯನ್ನು ಆಹ್ವಾನಿಸಿ, ಆಕೆಯ ಮೇಲೆ ಗೆಳೆಯರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಂಬೈ (ನ. 16): ಮಹಾರಾಷ್ಟ್ರದ ಮುಂಬೈನಲ್ಲಿ 22 ವರ್ಷದ ಯುವತಿಯೊಬ್ಬಳನ್ನು ಎಂಗೇಜ್​ಮೆಂಟ್​ ಪಾರ್ಟಿಗೆ ಆಹ್ವಾನಿಸಿ, ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ನವೆಂಬರ್ 8ರಂದು ನಡೆದಿದ್ದ ಈ ಘಟನೆ ಬೆಳಕಿಗೆ ಬಂದಿದೆ.

    ಮುಂಬೈನ ಅಂಧೇರಿ- ಕುರ್ಲ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ನವೆಂಬರ್ 8ರಂದು ಎಂಗೇಜ್​ಮೆಂಟ್ ಪಾರ್ಟಿ ಇತ್ತು. ಅದಕ್ಕೆ ನಾನು ಮತ್ತು ಇನ್ನೂ ಇಬ್ಬರು ಯುವತಿಯರು ಹೋಗಿದ್ದೆವು. ಪಾರ್ಟಿ ಮುಗಿಸಿಕೊಂಡು ಹೊರಡುವಾಗ ನಾನೇ ಕೊನೆಯವಳಾಗಿದ್ದೆ. ಆಗ ನನ್ನ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    28 ವರ್ಷದ ಅವಿನಾಶ್ ಪಂಗೇಕರ್, 27 ವರ್ಷದ ಶಿಶಿರ, 25 ವರ್ಷದ ತೇಜಸ್ ಎಂಬ ಮೂವರು ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈ ನಿವಾಸಿಯಾಗಿರುವ ಪಂಗೇಕರ್ ತನ್ನ ಎಂಗೇಜ್​ಮೆಂಟ್ ಪಾರ್ಟಿಗೆ ಗೆಳೆಯರನ್ನು ಆಹ್ವಾನಿಸಿದ್ದ. ತನ್ನದೇ ಎಂಗೇಜ್​ಮೆಂಟ್ ಪಾರ್ಟಿಯಲ್ಲಿ ಗೆಳೆತಿಯ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ.

    ಇದನ್ನೂ ಓದಿ: Crime News: 90 ವರ್ಷದ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 20ರ ಯುವಕ!

    ನನ್ನ ಗೆಳೆಯನಾದ ಪಂಗೇಕರ್​ನ ಎಂಗೇಜ್​ಮೆಂಟ್ ಪಾರ್ಟಿಗೆ ಹೋಗಿದ್ದಾಗ ಆತ ನನಗೆ ಬಲವಂತವಾಗಿ ಆಲ್ಕೋಹಾಲ್ ಕುಡಿಸಿದ್ದ. ನನ್ನ ಜೊತೆಗೆ ಬಂದಿದ್ದ ಇನ್ನಿಬ್ಬರು ಯುವತಿಯರು ಹೋದ ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನ ಜೊತೆಗೆ ಇನ್ನಿಬ್ಬರು ಕೂಡ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.

    ಆ ಸಂತ್ರಸ್ತ ಯುವತಿ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ, ಮೂರ್ನಾಲ್ಕು ದಿನಗಳಾದ ಮೇಲೆ ಆಕೆ ತನ್ನ ಮನೆಯವರಿಗೆ ಈ ವಿಷಯ ಹೇಳಿದಳು. ಅವರು ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ, ದೂರು ಕೊಡಿಸಿದರು.
    Published by:Sushma Chakre
    First published: