ಬೆಚ್ಚಿಬಿದ್ದ ಮುಂಬೈ; ಚಾಕುವಿನಿಂದ ಇರಿದು ಶಿಕ್ಷಕಿಯನ್ನು ಬರ್ಬರವಾಗಿ ಕೊಂದ 12 ವರ್ಷದ ಬಾಲಕ

ಐವರು ಅಣ್ಣ-ತಮ್ಮಂದಿರೊಂದಿಗೆ ವಾಸವಾಗಿದ್ದ ಬಾಲಕ ತಾನು ತನ್ನ ಶಿಕ್ಷಕಿಯನ್ನು ಯಾಕೆ ಕೊಂದೆ ಎಂಬ ಬಗ್ಗೆ ಒಬ್ಬೊಬ್ಬರೊಂದಿಗೆ ಒಂದೊಂದು ಕಾರಣ ನೀಡಿದ್ದಾನೆ . ಬಾಲಕನನ್ನು ಪೊಲೀಸರು ಬಂಧಿಸಿ ಚೈಲ್ಡ್​ ವೆಲ್​ಫೇರ್ ಕಮಿಟಿಯ ವಶಕ್ಕೆ ಒಪ್ಪಿಸಿದ್ದಾರೆ.

news18-kannada
Updated:September 18, 2019, 6:08 PM IST
ಬೆಚ್ಚಿಬಿದ್ದ ಮುಂಬೈ; ಚಾಕುವಿನಿಂದ ಇರಿದು ಶಿಕ್ಷಕಿಯನ್ನು ಬರ್ಬರವಾಗಿ ಕೊಂದ 12 ವರ್ಷದ ಬಾಲಕ
ಪ್ರಾತಿನಿಧಿಕ ಚಿತ್ರ.
  • Share this:
ಮುಂಬೈ (ಸೆ. 18): ತಂದೆ-ತಾಯಿಯ ನಂತರ ಗುರುವಿಗೇ ಅತಿಹೆಚ್ಚು ಪ್ರಾಮುಖ್ಯತೆ ನೀಡುವ ಸಂಪ್ರದಾಯ ಭಾರತದಲ್ಲಿದೆ. ಆದರೆ, ಈಗೀಗ ಗುರುವಿನ ಮಹತ್ವವೂ ಕಡಿಮೆಯಾಗುತ್ತಿದೆ. ಮುಂಬೈನ 12 ವರ್ಷದ ಹುಡುಗನೊಬ್ಬ ತನ್ನ ಶಿಕ್ಷಕಿಗೆ ಚಾಕುವಿನಿಂದ ಇರಿದು ಸಾಯಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಮುಂಬೈನ ಶಿವಾಜಿನಗರದಲ್ಲಿ ಸೋಮವಾರ ಈ ದುರ್ಘಟನೆ ನಡೆದಿದೆ.  30 ವರ್ಷದ ಟ್ಯೂಷನ್​ ಶಿಕ್ಷಕಿ ಆಯಿಷಾ ಅಸ್ಲಾಂ ಹುಸಿಯಾ ಮೃತಪಟ್ಟ ಮಹಿಳೆ. ಬಾಲಕ ಹೋಂವರ್ಕ್ ಮಾಡಿಲ್ಲವೆಂದು ಶಿಕ್ಷಕಿ ಆತನನ್ನು ಕ್ಲಾಸಿನಿಂದ ಹೊರಗೆ ಹಾಕಿದ್ದರು. ಗೆಳೆಯರ ಮುಂದೆ ಅವಮಾನವಾಗಿದ್ದಕ್ಕೆ ಕೋಪಗೊಂಡಿದ್ದ ಬಾಲಕ ನೇರವಾಗಿ ಮನೆಗೆ ತೆರಳಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಮತ್ತೆ ಕ್ಲಾಸಿಗೆ ಬಂದಿದ್ದ. ಶಾಲೆಯ ಬಾತ್ ರೂಮಿನಲ್ಲಿ ಮುಖ ತೊಳೆಯುತ್ತಿದ್ದ ಆಯಿಷಾ ಟೀಚರ್​ಗೆ ಚಾಕುವಿನಿಂದ ಇರಿದಿದ್ದ ಎಂದು ಆಯಿಷಾ ಸಹೋದ್ಯೋಗಿ ಸ್ಟೆಲ್ಲಾ ಡಿಸೋಜಾ ಘಟನೆಯನ್ನು ವಿವರಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆಯಿಷಾ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎಂದು ಸ್ಟೆಲ್ಲಾ ಡಿಸೋಜಾ ತಿಳಿಸಿದ್ದಾರೆ.

ಪಂಜಾಬ್​​ನಲ್ಲಿ ಮಕ್ಕಳ ಕಳ್ಳರ ಹಾವಳಿ; ಹೆಣ್ಣು ಮಗುವನ್ನು ಕದಿಯಲೊರಟ ಕಿಡಿಗೇಡಿಯೀಗ ಪೊಲೀಸರ ಅತಿಥಿ

12 ವರ್ಷದ ಹುಡುಗ ಮತ್ತು ಶಿಕ್ಷಕಿಯ ನಡುವೆ ಹಣದ ವಿಷಯಕ್ಕೆ ವಾಗ್ವಾದ ನಡೆದಿತ್ತು. ತನ್ನ ತಾಯಿಯೊಂದಿಗೆ ಬಂದಿದ್ದ ಮಗ ತನ್ನ ಶಿಕ್ಷಕಿ ಅಮ್ಮನಿಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ.  ಆಯಿಷಾ ಅಸ್ಲಾಂ ಹುಸಿಯಾ ತನ್ನ ಗಂಡನಿಂದ ವಿಚ್ಛೇದನ ಪಡೆದಿದ್ದರು. ತನ್ನ ಮಗ ಮತ್ತು ತಾಯಿಯೊಂದಿಗೆ ವಾಸವಾಗಿದ್ದ ಆಕೆ 7ನೇ ತರಗತಿಯವರೆಗಿನ ಮಕ್ಕಳಿಗೆ ಕ್ಲಾಸ್​ ಮಾಡುತ್ತಿದ್ದರು. ಆ ಶಾಲೆಯಲ್ಲಿ ಸುಮಾರು 150 ಮಕ್ಕಳಿದ್ದಾರೆ. ಇದೇ ಶಾಲೆಯಲ್ಲಿ ಓದುತ್ತಿದ್ದ ಹುಡುಗ ಶಿಕ್ಷಕಿ ಆಯಿಷಾಗೆ ಚಾಕುವಿನಿಂದ ಇರಿದಿದ್ದಾನೆ.

ವಿದ್ಯಾವಾರಿಧಿ ಸ್ವಾಮಿ ಕಾಮಕಾಂಡ: ಹನಿಟ್ರ್ಯಾಪ್​ಗೆ ಬಿದ್ದ ಕಣ್ವಮಠದ ಶ್ರೀ; ಪೀಠ ತ್ಯಾಗಕ್ಕೆ ಸ್ವಾಮೀಜಿ ನಿರ್ಧಾರ

ಐವರು ಅಣ್ಣ-ತಮ್ಮಂದಿರೊಂದಿಗೆ ವಾಸವಾಗಿದ್ದ ಬಾಲಕ ತಾನು ತನ್ನ ಶಿಕ್ಷಕಿಯನ್ನು ಯಾಕೆ ಕೊಂದೆ ಎಂಬ ಬಗ್ಗೆ ಒಬ್ಬೊಬ್ಬರೊಂದಿಗೆ ಒಂದೊಂದು ಕಾರಣ ನೀಡಿದ್ದಾನೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. 5 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಆಯಿಷಾ ಅವರ ಟ್ಯೂಷನ್ ಕ್ಲಾಸಿಗೆ ಬರುತ್ತಿದ್ದ. ಮೊದಲು, ತನ್ನ ತಾಯಿ ಆಯಿಷಾ ಅವರ ಬಳಿ ಹಣ ಕೇಳಿದ್ದರು. ಆದರೆ, ಆಯಿಷಾ ಅದಕ್ಕೆ ಒಪ್ಪದ ಕಾರಣ ಸಾಯಿಸಿದೆ ಎಂದು ಹೇಳಿಕೆ ನೀಡಿದ್ದ. ನಂತರ ತನ್ನ ಮನೆಯ ಅಕ್ಕಪಕ್ಕದವರ ಬಳಿ, ತನ್ನ ಟೀಚರ್ ಆಯಿಷಾ ಕೋಲಿನಿಂದ ಹೊಡೆದ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಆಕೆಯನ್ನು ಚಾಕುವಿನಿಂದ ಇರಿದಿದ್ದಾಗಿ ಹೇಳಿದ್ದ. ತನ್ನ ತಂದೆಯ ಬಳಿ ಬೇರೆ ರೀತಿ ಹೇಳಿರುವ ಬಾಲಕ, ಆಯಿಷಾ ಟೀಚರ್​ ಅವರನ್ನು ಕೊಂದರೆ 2 ಸಾವಿರ ರೂ. ನೀಡುವುದಾಗಿ ಒಬ್ಬರು ಆಮಿಷವೊಡ್ಡಿದ್ದಕ್ಕೆ ಈ ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.ಪ್ರಕರಣ ಸಂಬಂಧ ತನಿಖೆ ನಡೆಸಲು ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಚೈಲ್ಡ್​ ವೆಲ್​ಫೇರ್ ಕಮಿಟಿಯ ವಶಕ್ಕೆ ಒಪ್ಪಿಸಿದ್ದಾರೆ. ಆತನ ಪೋಷಕರಿಗೂ ಸಮನ್ಸ್​ ನೀಡಲಾಗಿದೆ.

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading