ಪ್ರವಾಹ ಪೀಡಿತ ಕೇರಳ ಜನತೆಗೆ ನೆರವಾಗುವಂತೆ ಅಭಿಮಾನಿಗಳಿಗೆ ಕ್ರಿಕೆಟಿಗರ ಮನವಿ

G Hareeshkumar | news18
Updated:August 17, 2018, 8:10 PM IST
ಪ್ರವಾಹ ಪೀಡಿತ ಕೇರಳ ಜನತೆಗೆ ನೆರವಾಗುವಂತೆ ಅಭಿಮಾನಿಗಳಿಗೆ ಕ್ರಿಕೆಟಿಗರ ಮನವಿ
G Hareeshkumar | news18
Updated: August 17, 2018, 8:10 PM IST
 - ನ್ಯೂಸ್ 18 ಕನ್ನಡ 

ಬೆಂಗಳೂರು (ಆಗಸ್ಟ್ 17) : ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕೇರಳ ನೆರವಿಗೆ ಟೀಮ್ ಇಂಡಿಯಾ ಆಟಗಾರರು ಧಾವಿಸುತ್ತಿದ್ದಾರೆ. ಪ್ರವಾಹದಿಂದಾಗಿ ನಲುಗಿರುವ ಕೇರಳದ ಪ್ರವಾಹ ಪೀಡಿತರ ನೆರವಿಗೆ ನಿಂತಿರುವ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಎಡಗೈ ಬ್ಯಾಟ್ಸ್​ಮನ್ ಯುವರಾಜ್ ಸಿಂಗ್, ಕೇರಳ ಜನತೆಗೆ ನೆರವಾಗುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಕೇರಳ ಜನರ ಆಸರೆಗೆ ನಿಂತಿದ್ದಾರೆ. ಈ ಬಗ್ಗೆ ಟ್ವೀಟರ್​ನಲ್ಲಿ ಅಭಿಮಾನಿಗಳಿಗೆ ಕರೆ ನೀಡಿರುವ ಯುವರಾಜ್ ಸಿಂಗ್ ಕೇರಳ ಪ್ರವಾಹ ಪೀಡಿತ ನಿಧಿಗೆ ಧಾರಾಳವಾಗಿ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ನೆರೆಯ ಕೇರಳ ಅಕ್ಷರಶಃ ನಲುಗಿ ಹೊಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಲೆಕ್ಕವಿಲ್ಲದಷ್ಟು ಜೀವಹಾನಿಯೂ ಸಂಭವಿಸಿದೆ. ಸದ್ಯ ಸಂಕಷ್ಟದಲ್ಲಿರುವ ಕೇರಳ ನಾಗರಿಕರಿಗಾಗಿ ಪರಿಹಾರ ನಿಧಿ ಆರಂಭಿಸಲಾಗಿದ್ದು, ನೆರವು ನೀಡುವಂತೆ  ಕ್ರೀಕೆಟಿಗರು ಮನವಿ ಮಾಡಿದ್ದಾರೆ.


Loading...

 
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ