ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹ್ವಾಗ್​ ನಿರಾಸಕ್ತಿ; ಗೌತಮ್​ ಗಂಭೀರ್​ ಕಣಕ್ಕಿಳಿಯುವುದು ಬಹುತೇಕ ಖಚಿತ?

ಸೆಹ್ವಾಗ್​ಗೆ ಪಶ್ಚಿಮ ದೆಹಲಿಯಿಂದ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿತ್ತು. ಬಿಜೆಪಿ ಸಂಸದ ಪರ್ವೇಶ್​ ವರ್ಮಾ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಈಗ ಈ ಕ್ಷೇತ್ರದಿಂದ ಗೌತಮ್​ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Rajesh Duggumane | news18
Updated:March 15, 2019, 10:35 AM IST
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹ್ವಾಗ್​ ನಿರಾಸಕ್ತಿ; ಗೌತಮ್​ ಗಂಭೀರ್​ ಕಣಕ್ಕಿಳಿಯುವುದು ಬಹುತೇಕ ಖಚಿತ?
ಸೆಹ್ವಾಗ್​-ಗಂಭೀರ್​
Rajesh Duggumane | news18
Updated: March 15, 2019, 10:35 AM IST
ನವದೆಹಲಿ (ಮಾ.15): ಭಾರತೀಯ ಕ್ರಿಕೆಟ್​ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಅವರಿಗೆ ಬಿಜೆಪಿ ಆಫರ್​ ನೀಡಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ವಿಚಾರ ನಿಜ ಎಂದಿರುವ ಅವರು, ವೈಯಕ್ತಿಕ ಕಾರಣಗಳಿಂದ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

“ವೈಯಕ್ತಿಕ ಕಾರಣಗಳಿಂದ ಸೆಹ್ವಾಗ್​ ಚುನಾವಣೆ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಆದರೆ ಅವರಿಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ. ಹಾಗಾಗಿ ಅವರು ಲೋಕಸಭಾ ಚುನಾವಣೆಗೆ ನಿಲ್ಲುತ್ತಿಲ್ಲ,” ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮತ್ತೋರ್ವ ಮಾಜಿ ಕ್ರಿಕೆಟ್​ ಆಟಗಾರ ಗೌತಮ್​ ಗಂಭೀರ್​ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆಯಂತೆ. ಬಿಜೆಪಿ ಈ ಮೊದಲು ಅವರಿಗೆ ಆಫರ್​ ನೀಡಿತ್ತು. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದು, ಆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಅವರು ದೆಹಲಿಯಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಪುಲ್ವಾಮ ದಾಳಿ: 'ಸೆಹ್ವಾಗ್ ಸ್ಕೂಲ್' ಮೂಲಕ ಹುತಾತ್ಮ ಯೋಧರ ನೆರವಿಗೆ ಧಾವಿಸಿದ ವೀರೂ

ಸೆಹ್ವಾಗ್​ಗೆ ಪಶ್ಚಿಮ ದೆಹಲಿಯಿಂದ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿತ್ತು. ಬಿಜೆಪಿ ಸಂಸದ ಪರ್ವೇಶ್​ ವರ್ಮಾ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಈಗ ಈ ಕ್ಷೇತ್ರದಿಂದ ಗೌತಮ್​ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಸೆಹ್ವಾಗ್​ ಹರಿಯಾಣದ ರೊಹ್ತಕ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವರದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದಕ್ಕೆ  ಸ್ಪಷ್ಟನೆ ನೀಡಿದ್ದ ಸೆಹ್ವಾಗ್​, “2014ರಲ್ಲಿ ಇದೇ ಮಾದರಿಯ ವದಂತಿ ಹರಡಿತ್ತು. ಈಗಲೂ ಹಾಗೆಯೇ ಹಡಿದಾಡುತ್ತಿದೆ. ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ,” ಎಂದಿದ್ದರು. ಈ ಮೊದಲು ಗೌತಮ್​ ರಾಜಕೀಯಕ್ಕೆ ಸೇರಲಿದ್ದಾರೆ ಎನ್ನುವ ಮಾತಿತ್ತು. ಆದರೆ ಇದನ್ನು, ಅಲ್ಲಗಳೆದಿದ್ದರು.
Loading...

ಇದನ್ನೂ ಓದಿ: ಸೆಹ್ವಾಗ್ ಜೊತೆ ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತಿತ್ತು: ವೀರೂ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸಚಿನ್

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...