HOME » NEWS » National-international » CRICKETER IRFAN PATHAN WIFE SABA REACTS ON THE BLUR PHOTO AND PROBLEM TO HUSBAND SKTV

ಫೋಟೋದಲ್ಲಿ ಮುಖ ಬ್ಲರ್ ಮಾಡಿದ್ದು ನಾನೇ, ಗಂಡನದ್ದೇನೂ ತಪ್ಪಿಲ್ಲ: ಕ್ರಿಕೆಟಿಗ Irfan Pathan ಪತ್ನಿ

ನನಗೆ ನನ್ನ ಖಾಸಗಿ ಬದುಕು ಬಹಳ ಮುಖ್ಯ. ನಾನಾಗೇ ಇಚ್ಛಪಟ್ಟು ಫೋಟೋದಲ್ಲಿ ಮುಖ ಬ್ಲರ್ ಮಾಡಿದ್ದೇನೆ. ಅದನ್ನು ವಿನಾಕಾರಣ ನನ್ನ ಪತಿಯ ದಬ್ಬಾಳಿಕೆ ಎಂದೆಲ್ಲಾ ಭಾವಿಸಿ ನಮ್ಮ ಬದುಕಿನ ಬಗ್ಗೆ ನಿಮ್ಮದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಇರ್ಫಾನ್ ಪಠಾಣ್ ಪತ್ನಿ ಮನವಿ ಮಾಡಿದ್ದಾರೆ.

Soumya KN | news18-kannada
Updated:May 30, 2021, 5:26 PM IST
ಫೋಟೋದಲ್ಲಿ ಮುಖ ಬ್ಲರ್ ಮಾಡಿದ್ದು ನಾನೇ, ಗಂಡನದ್ದೇನೂ ತಪ್ಪಿಲ್ಲ: ಕ್ರಿಕೆಟಿಗ Irfan Pathan ಪತ್ನಿ
ವಿವಾದಿತ ಚಿತ್ರ
  • Share this:
Viral Photo: ಒಂದು ಫ್ಯಾಮಿಲೊ ಫೋಟೋ ಇಷ್ಟೊಂದು ಅವಾಂತರಗಳು, ಚರ್ಚೆಗಳಿಗೆ ಕಾರಣವಾಗುತ್ತೆ ಎಂದು ನಾನು ಖಂಡಿತಾ ಭಾವಿಸಿರಲಿಲ್ಲ. ಹೀಗೆಂದು ನೋವಿನಲ್ಲೇ ಹೇಳಿದ್ದಾರೆ ಸಫಾ ಬೇಗ್. ಸಫಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಪತ್ನಿ. ಆಗಿದ್ದಿಷ್ಟು.. ಇರ್ಫಾನ್ ಪಠಾಣ್ ತನ್ನ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡಿರೋ ಚಿತ್ರವೊಂದನ್ನು ಸಫಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ರು. ಫೋಟೋದಲ್ಲಿ ಗಂಡನ ಪಕ್ಕ ನಿಂತಿದ್ದ ಸಫಾ ಮುಖವನ್ನು ಬ್ಲರ್ ಮಾಡಲಾಗಿತ್ತು. ಅದನ್ನು ನೋಡಿ ಎಲ್ಲರೂ ಇದು ಇರ್ಫಾನ್ ಸಫಾ ಮೇಲೆ ನಡೆಸುತ್ತಿರುವ ದೌರ್ಜನ್ಯ, ಆಕೆಯ ಮುಖವನ್ನು ಫೋಟೋದಲ್ಲೂ ಕಾಣದಂತೆ ಬ್ಲರ್ ಮಾಡಿದ್ದಾನೆ ಎಂದು ಬಗೆಬಗೆಯ ಅವಮಾನಕಾರಿ ಕಮೆಂಟ್​ಗಳನ್ನು ಹಾಕಿದ್ದರು.

ಇದನ್ನೆಲ್ಲಾ ನೋಡಿ ಬೇಸರಗೊಂಡ ಸಫಾ ಈ ಫೋಟೋ ಬಗ್ಗೆ ತಾವೇ ಸ್ಪಷ್ಟೀಕರಣ ನೀಡಿದ್ದಾರೆ. ನನಗೆ ನನ್ನ ಖಾಸಗಿ ಬದುಕು ಬಹಳ ಮುಖ್ಯ. ನಾನಾಗೇ ಇಚ್ಛಪಟ್ಟು ಫೋಟೋದಲ್ಲಿ ಮುಖ ಬ್ಲರ್ ಮಾಡಿದ್ದೇನೆ. ಅದನ್ನು ವಿನಾಕಾರಣ ನನ್ನ ಪತಿಯ ದಬ್ಬಾಳಿಕೆ ಎಂದೆಲ್ಲಾ ಭಾವಿಸಿ ನಮ್ಮ ಬದುಕಿನ ಬಗ್ಗೆ ನಿಮ್ಮದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿ ಅರೆಸ್ಟ್ ಆದ್ಮೇಲೆ ಎಲ್ರೂ ಹುಡುಕುತ್ತಿರೋ ಡೊಮಿನಿಕಾ ದೇಶ ಎಲ್ಲಿದೆ ಗೊತ್ತಾ?

ಈ ಹಿಂದೆಯೂ ಇರ್ಫಾನ್ ದಂಪತಿ ಅನೇಕ ಬಾರಿ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ. ಆಗೊಮ್ಮೆ ಇರ್ಫಾನ್ ನಾನು ಆಕೆಯ ಸಂಗಾತಿ, ಮಾಲೀಕನಲ್ಲ ಎಂದು ಉತ್ತರಿಸಿದ್ದರು. ನಿವೃತ್ತ ಜೀವನ ನಡೆಸುತ್ತಿರುವ ಈ ಆಲ್​ ರೌಂಡರ್​ ಜನರ ಮಾತುಗಳಿಂದ ಅನೇಕ ಬಾರಿ ರೋಸಿಹೋಗಿದ್ದಾರೆ.

28 ವರ್ಷ ವಯಸ್ಸಿನ ಸಬಾ ಮಾಡೆಲ್ ಕೂಡಾ ಹೌದು. ಅಂದ ಮೇಲೆ ಆಕೆಗೇ ಇಷ್ಟವಿದ್ದರೆ ಫೋಟೋದಲ್ಲಿ ಮುಖ ತೋರಿಸೋದು ಕಷ್ಟದ ಕೆಲಸವಲ್ಲ. ಅದು ಆಕೆಯ ಆಯ್ಕೆ ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Black Fungus: ಕೋಳಿಯಿಂದ ಬ್ಲಾಕ್​ ಫಂಗಸ್ ಹರಡುತ್ತದಂತೆ ! ನಿಜವಾ? ಸತ್ಯ ಇಲ್ಲಿದೆ !

ನಾನು ಬಹಳ ಖಾಸಗಿ ವ್ಯಕ್ತಿ. ಒಂದು ಫ್ಯಾಮಿಲಿ ಫೋಟೋ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತೆ ಎಂದು ನಾನು ಖಂಡಿತಾ ಭಾವಿಸಿರಲಿಲ್ಲ. ಇರ್ಫಾನ್ ರನ್ನು ಪತ್ರಕರ್ತರು ಮುತ್ತಿಕೊಂಡಾಗಲೂ ನಾನು ಬೇಗನೇ ಪಕ್ಕಕ್ಕೆ ಸರಿದುಬಿಡುತ್ತೇನೆ, ಆ ಗಮನ ನನಗಿಷ್ಟವಿಲ್ಲ ಎಂದಿದ್ದಾರೆ ಸಬಾ.ಆಕೆ ತನ್ನ ಜನ್ಮಸ್ಥಳ ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುವಾಗ ಪಾಸ್​ಪೋರ್ಟ್​ನಲ್ಲಿ ಗಂಡನ ಹೆಸರು ಸೇರಿಸಿಲ್ಲ ಎಂದು ಸಮಸ್ಯೆ ಆಗಿತ್ತಂತೆ. ಆಗ ಇರ್ಫಾನ್ ತಾನೇ ಮುಂದೆ ನಿಂತು ಆಕೆಗೆ ಅದೇ ಹೆಸರೇ ಇರಲಿ ಎಂದು ಒತ್ತಾಯಿಸಿ ಸಮಸ್ಯೆ ಬಗೆಹರಿಸಿದ್ದನ್ನು ಸಬಾ ನೆನೆದಿದ್ದಾರೆ. ಇರ್ಫಾನ್ ಸದಾ ನನ್ನ ಬೆಂಬಲಕ್ಕಿದ್ದಾರೆ ಎಂದಿದ್ದಾರೆ.
Youtube Video

ತಮ್ಮ ಮಗ ಇಮ್ರಾನ್ ಬೆಳೆದು ದೊಡ್ಡವನಾದಾಗ ಅವನ ನೆನಪಿಗಾಗಿ ಒಂದಷ್ಟು ಚಿತ್ರಗಳನ್ನು ಸೇವ್ ಮಾಡೋಕೆ ಅವನ ಹೆಸರಲ್ಲಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದೇನೆ. ಅದರಲ್ಲಿ ಹಾಕಿದ ಈ ಒಂದು ಫೋಟೋ ಇಷ್ಟೆಲ್ಲಾ ಸಮಸ್ಯೆ ತಂದೊಡ್ಡಿದ್ದು ನಮಗೆಲ್ಲಾ ಆಘಾತ ತಂದಿದೆ. ಇದು 21ನೆಯ ಶತಮಾನ. ಇಲ್ಲಿ ಎಲ್ಲರೂ ಮತ್ತೊಬ್ಬರ ಆಯ್ಕೆಗಳನ್ನು ಗೌರವಿಸಬೇಕು. ಅದನ್ನು ಬಿಟ್ಟು ಹೀಗೆ ಎಲ್ಲವನ್ನೂ ಜಡ್ಜ್ ಮಾಡುತ್ತಾ ಇದ್ದರೆ ಬಹಳ ಕಷ್ಟವಾಗುತ್ತದೆ ಎಂದು ಸಬಾ ತಿಳಿಸಿದ್ದಾರೆ
Published by: Soumya KN
First published: May 30, 2021, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories