ಮನೆಯಲ್ಲಿ ಸಿಂಹವನ್ನು ಸಾಕಿದ್ದಾರಾ ಶಾಹಿದ್ ಅಫ್ರಿದಿ? ಫೋಟೋ ಬಿಚ್ಚಿಟ್ಟ ಶಾಕಿಂಗ್ ಸತ್ಯ!


Updated:June 11, 2018, 4:52 PM IST
ಮನೆಯಲ್ಲಿ ಸಿಂಹವನ್ನು ಸಾಕಿದ್ದಾರಾ ಶಾಹಿದ್ ಅಫ್ರಿದಿ? ಫೋಟೋ ಬಿಚ್ಚಿಟ್ಟ ಶಾಕಿಂಗ್ ಸತ್ಯ!
  • Share this:
ನ್ಯೂಸ್ 18 ಕನ್ನಡ

ಇಸ್ಲಮಾಬಾದ್(ಜೂ.11): ಪಾಕಿಸ್ತಾನದ ಮಾಜಿ ಆಲ್​ರೌಂಡರ್ ಶಾಹಿದ್ ಅಫ್ರಿದಿ ಕ್ರಿಕೆಟ್​ ಲೋಕದಲ್ಲಿ ಬಹಳಷ್ಟು ಪ್ರಸಿದ್ಧಿ ಗಳಿಸಿದ ಆಟಗಾರ. ಆದರೀಗ ಇವರು ಸೋಷಲ್ ಮೀಡಿಯಾಗಳಲ್ಲೂ ಬಹಳಷ್ಟು ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಇವರು ತಮ್ಮ ಮಕ್ಖಳ ಪೋಟೋಗಳನ್ನೂ ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್​ ಮಾಡಲಾರಂಭಿದ್ದಾರೆ. ಇತ್ತೀಚೆಗಷ್ಟೇ ಅಫ್ರಿದಿ ತಮ್ಮ ಟ್ವಿಟರ್​ನಲ್ಲಿ ಮಗಳ ಫೋಟೋ ಒಂದನ್ನು ಶೇರ್​ ಮಾಡಿದ್ದು, ಈ ಚಿತ್ರ ಸದ್ಯ ಭಾರೀ ಸದ್ದು ಮಾಡುತ್ತಿದೆ.


ಟ್ವಿಟರ್​ನಲ್ಲಿ "ಆತ್ಮೀಯರೊಂದಿಗೆ ಸಮಯ ಕಳೆಯುವುದು ತುಂಬಾ ಖುಷಿ ನೀಡುತ್ತದೆ. ಅದರಲ್ಲೂ ನಾನು ವಿಕೆಟ್​ ಪಡೆದ ಬಳಿಕ ಸಂಭ್ರಮಿಸುವುದನ್ನು ನನ್ನ ಮಗಳು ನಕಲು ಮಾಡುವುದು ವಿಶ್ವದಲ್ಲೇ ಅತ್ಯಂತ ಖುಷಿ ನೀಡುವ ಕ್ಷಣವಾಗಿದೆ. ಇನ್ನು ಪ್ರಾಣಿಗಳ ಆರೈಕೆ ಮಾಡಲು ಮರೆಯದಿರಿ. ಅವುಗಳು ನಮ್ಮ ಪ್ರೀತಿ ಹಾಗೂ ಆರೈಕೆಗೆ ಯೋಗ್ಯ" ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅಫ್ರಿದಿ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವುಗಳಲ್ಲಿ ಒಂದು ಫೋಟೋದಲ್ಲಿ ಮಗಳಿದ್ದು, ಆಕೆಯ ಹಿಂದೆ ಸಿಂಹ ಕುಳಿತುಕೊಂಡಿರುವುದು ಕಾಣಬಹುದು. ಇನ್ನು ಈ ಫೋಟೋ ಅವರ ಮನನೆಯಲ್ಲೇ ಕ್ಲಿಕ್ಕಿಸಿದ್ದು ಎಂಬುವುದು ಗಮನಾರ್ಹ. ಮತ್ತೊಂದು ಫೋಟೋದಲ್ಲಿ ಖುದ್ದು ಅಫ್ರಿದಿ ಜಿಂಕೆ ಮರಿಯೊಂದಕ್ಕೆ ಬಾಟಲ್​ನಲ್ಲಿ ಹಾಲು ಕುಡಿಸುತ್ತಿರುವುದು ಕಾಣಬಹುದು.

ಈ ಫೋಟೋಗಳನ್ನು ಕಂಡು ಅಚ್ಚರಿಗೊಮಡ ಟ್ವಿಟರಿಗರು ನಿಜಕ್ಕೂ ಶಾಹಿದ್​ ಅಫ್ರಿದಿ ತಮ್ಮ ಮನೆಯಲ್ಲಿ ಸಿಂಹವನ್ನು ಸಾಕಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇವರ ಪೋಸ್ಟ್​ಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅದೇನಿದ್ದರೂ ಪಾಕ್​ ಮಾಜಿ ನಾಯಕನಿಗೆ ಪ್ರಾಣಿಗಳ ಮೇಲಿರುವ ಪ್ರೀತಿ ಮೆಚ್ಚುವಂತಹುದ್ದೇ.
First published:June 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading