news18-kannada Updated:October 19, 2020, 5:33 PM IST
ಸಾಂದರ್ಭಿಕ ಚಿತ್ರ
ದಸರಾ ಮತ್ತು ದೀಪಾವಳಿಯಂತಹ ಸಾಲು ಸಾಲು ಹಬ್ಬಗಳ ಸಾಲಿನಲ್ಲಿ ಈಗ ಜನರು ಮನೆಯಲ್ಲಿಯೇ ಕುಳಿತು ಶಾಪಿಂಗ್ ಮಾಡುತ್ತಿದ್ದಾರೆ. ಹಬ್ಬಗಳಿಗೆ ಉಡುಗೊರೆ, ಬಟ್ಟೆ ಖರೀದಿ ಮಾಡಬೇಕು ಎಂಬುದು ಎಲ್ಲರ ಕನಸು. ಆದರೆ, ಕೋವಿಡ್ನ ಈ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟು ಕೂಡ ಎದುರಾಗಿರುವುದು ಸುಳ್ಳಲ್ಲ. ಇದೇ ಹಿನ್ನಲೆ ಅನೇಕರು ಸಾಲದ ಮೊರೆ ಹೋಗುತ್ತಿದ್ದಾರೆ. ಇನ್ನು ಈ ಹೊತ್ತಿನಲ್ಲಿ ಎಲ್ಲರಿಗೂ ಹೆಚ್ಚು ನೆನಪಾಗುತ್ತಿರುವುದು ಕ್ರೆಡಿಟ್ ಕಾರ್ಡ್ಗಳು. ಈ ಕಾರ್ಡ್ಗಳ ವಾಹಿವಾಟುಗಳು ಕೇವಲ ಸಾಲ ನೀಡುವುದಿಲ್ಲ. ಇದರ ಜೊತೆಗೆ ಹಲವು ಲಾಭಾದಾಯಕ ಅಂಶಗಳನ್ನು ಹೊಂದಿವೆ. ಸಾಲದ ಹೊರೆ ಕಡಿಮೆ ಮಾಡಿ, ಅತ್ಯಾಕರ್ಷಕ ಆಫರ್ ನೀಡುವ ಈ ಕ್ರೆಡಿಟ್ ಕಾರ್ಡ್ಗಳು ಗ್ರಾಹಕರ ಸ್ನೇಹಿ ಕೂಡ ಆಗಿವೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಲಾಭಾದ ಆಫರ್ ನೀಡುವ ಜೊತೆಗೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವ ಈ ಕಾರ್ಡ್ಬಗ್ಗೆ ಅರಿವಿರುವುದು ಕೂಡ ಮುಖ್ಯವಾಗಿದೆ.
ಕ್ರೆಡಿಟ್ ಅಂಕಗಳನ್ನು ಹೆಚ್ಚಿಸಿಕ್ರೆಡಿಟ್ ಕಾರ್ಡ್ನ ವಾಹಿವಾಟಿನ ಪ್ರಮುಖ ಅಂಶ ಎಂದರೆ ನೀವು ತೆಗೆದುಕೊಂಡ ಸಾಲಗಳನ್ನು ಹೇಗೆ ನಿಗದಿತ ದಿನಾಂಕದೊಳಗೆ ಮರುಪಾವತಿಸಿದರೆ ಇದಕ್ಕೆ ಕ್ರೆಡಿಟ್ ಅಂಕಗಳು ಲಭ್ಯವಾಗುತ್ತಿದೆ. ಇದರಿಂದ ನಿಮಗೆ ಬಡ್ಡಿದರ ವೆಚ್ಚವನ್ನು ಪಾವತಿ ಮಾಡುವ ಅವಕಾಶವಿರುವುದಿಲ್ಲ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ಗಳ ಬಳಕೆ ಜನರಿಗೆ ಸುಲಭವಾಗಿರುವ ಜೊತೆ ಲಾಭಾದಾಯಕವಾಗಿದೆ, ನಿಮ್ಮ ಈ ಕ್ರೆಡಿಟ್ ಸ್ಕೋರ್ಗಳನ್ನು ಹೆಚ್ಚು ಮಾಡುವ ಏಕೈಕ ಅಂಶ ಎಂದರೆ, ನಿಗದಿತ ಅವಧಿಗೆ ಮುನ್ನ ಮರುಪಾವತಿ ಮಾಡುವುದು. ಇದರ ಜೊತೆಗೆ ಶೇ 30ರಷ್ಟು ಮೀರಿ ಖರ್ಚು ಮಾಡುವುದನ್ನು ತಪ್ಪಿಸಿದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಮುಂದೆ ಯಾವುದೇ ರೀತಿಯ ಸಾಲ ಪಡೆಯುವಾಗ ಹೆಚ್ಚಿನ ಅನುಕೂಲಕರವಾಗಲಿದೆ.
ಹಣ ಉಳಿಕೆಯಲ್ಲಿ ಸಹಕಾರಿ
ಹಬ್ಬದ ಸಮಯದಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಲವಾರು ವ್ಯಾಪಾರಿಗಳು ಕ್ರೆಡಿಟ್ ಕಾರ್ಡ್ಗಳಿಗೆ ರಿವರ್ಡ್ ಪಾಯಿಂಟ್ಗಳನ್ನು ನೀಡುತ್ತವೆ. ಅಲ್ಲದೇ, ಕಾರ್ಡ್ಗಳ ಬಳಕೆಯಲ್ಲಿ ರಿಯಾಯತಿಯನ್ನು ಘೋಷಿಸುತ್ತವೆ. ಕ್ಯಾಶ್ ಬ್ಯಾಕ್, ಗಿಫ್ಟ್ ವೋಚರ್ ನಂತ ಸೇವೆಗಳು ಕೂಡ ಕ್ರೆಡಿಟ್ ಕಾರ್ಡ್ಗಳ ಬಳಕೆಯಿಂದ ಸಿಗಲಿವೆ. ಇಂತಹ ಸೇವೆಯನ್ನು ಪಡೆದಲ್ಲಿ ಕಾರ್ಡ್ ಮೂಲಕ ಹಣ ಗಳಿಸಲು ಬಹುದು. ಇತಂಹ ಸೇವೆಗಳನ್ನು ನೀವು ಪತ್ತೆ ಮಾಡಬೇಕು.
ಒಂದು ವೇಳೆ ವ್ಯಾಪಾರಿಗಳಿಂದ ಈ ರೀತಿಯ ಪ್ರಯೋಜನ ಲಭ್ಯವಾಗದಿದ್ದರೂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ನ ಲಾಭಾವಂತೂ ಗ್ರಾಹಕರಿಗೆ ಇದ್ದೆ ಇರಲಿದೆ. ಈ ರಿವಾರ್ಡ್ ಪಾಯಿಂಟ್ಗಳ ಮುಕ್ತಾಯ ದಿನಾಂಕಗಳು ಬರುವ ಮೊದಲೇ ಅ ಅಂಕಗಳನ್ನು ಬಳಸಿ ನಿಮ್ಮ ಶಾಪಿಂಗ್ ಮುಗಿಸಬಹುದು.
ಬಡ್ಡಿರಹಿತ ಅವಧಿಯ ಹಣದ ವಾಹಿವಾಟುಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮೊದಲ ಅಂಶ ಎಂದರೆ, ಕಾರ್ಡ್ನ ವಹಿವಾಟು ದಿನ ಹಾಗೂ ಅದರ ಅವಧಿ ದಿನ. ಈ ಎರಡರ ಮೇಲೆ ನಿಮ್ಮ ಗಮನವಿದ್ದಲ್ಲಿ ಬಡ್ಡಿಯಿಂದ ತಪ್ಪಿಸಿಕೊಳ್ಳಬಹುದು. ಅವಧಿಗೆ ಮುನ್ನವಾಗಿ ವಾಹಿವಾಟು ಮಾಡಿದಲ್ಲಿ ಅಥವಾ ಮರುಪಾವತಿ ಮಾಡಿದಲ್ಲಿ ಬಡ್ಡಿಯಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ಅನೇಕ ಕಾರ್ಡ್ಗಳು ಈ ಬಡ್ಡಿ ರಹಿತ ಸೇವೆಯನ್ನು ಕೂಡ ಒದಗಿಸುತ್ತದೆ. ಕಾರ್ಡ್ ಮರುಪಾವತಿ ದಿನಾಂಕಕ್ಕೆ 18 ರಿಂದ 55 ದಿನಗಳವರೆಗೆ ಸಮಯವಿದ್ದು, ಅದರೊಳಗೆ ನೀವು ಪಾವತಿ ಮಾಡಿದರೆ ಬಡ್ಡಿಯ ಲಾಭಾ ಪಡೆಯಬಹುದು.
ಇಎಂಐ ವೆಚ್ಚದ ಲಾಭಾ
ಅನೇಕ ಕ್ರೆಡಿಟ್ ಕಾರ್ಡ್ಗಳು ಇಎಂಐ ವೆಚ್ಚವಿಲ್ಲದ ರೀತಿ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ, ಆನ್ಲೈನ್ ಅಥವಾ ನೇರವಾಗಿ ವಸ್ತುಗಳನ್ನು ಕೊಳ್ಳವಾಗ ನಿಮಗೆ ಇಎಂಐ ಸೇವೆ ನೀಡಲಾಗುವುದು. ಅಲ್ಲದೇ ಕೆಲವೊಂದು ಖರೀದಿಗಳು ಇಎಂಐ ಆಧಾರದ ಮೇಲೆ ಯಾವುದೇ ವೆಚ್ಚವಿಲ್ಲದಂತೆ ಕೊಂಡುಕೊಳ್ಳವ ಸೌಲಭ್ಯ ನೀಡಲಾಗಿರುತ್ತದೆ.
ತಕ್ಷಣಕ್ಕೆ ಸಾಲ ಸೌಲಭ್ಯ
ಕ್ರೆಡಿಟ್ ಕಾರ್ಡ್ ಹಣಪಾವತಿಯಲ್ಲಿ ನೀವು ಉತ್ತಮ ರೆಕಾರ್ಡ್ ಹೊಂದಿದ್ದರೆ, ಅಂದರೆ, ಸರಿಯಾದ ಸಮಯದಲ್ಲಿ ಹಣ ಪಾವತಿ ಮಾಡಿದಲ್ಲಿ ಸಾಲ ಸಿಗುವುದು ಸುಲಭ. ನಿಗದಿತ ಅವಧಿಯಲ್ಲಿ ವ್ಯಕ್ತಿಯೊಬ್ಬ ಮರುಪಾವತಿ ಮಾಡುತ್ತಾನೋ ಇಲ್ಲವೋ ಎಂಬ ಕಾರಣಕ್ಕೆ ಸಾಲ ನೀಡುವಾಗ ಅನೇಕ ದಾಖಲಾತಿ, ಶೂರಿಟಿಗಳು ಅಗತ್ಯ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಪಾವತಿಗಳಲ್ಲಿ ನೀವು ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಸುಲಭವಾಗಿ ಅವಧಿ ಪೂರ್ವಕವಾಗಿಯೇ ಸಾಲ ಸಿಗಲಿದೆ. ಕೆಲವು ಕಾರ್ಡ್ಗಳು ಅವಧಿ ಪೂರ್ವ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದರಿಂದ ನಿಮಗೆ ಆರ್ಥಿಕ ತುರ್ತು ಪರಿಸ್ಥಿತಿಯಿಂದ ಪಾರಾಗಬಹುದು
Published by:
Seema R
First published:
October 19, 2020, 4:55 PM IST