ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 11 ಮಂದಿ ಸಾವು

ಆಂಧ್ರದ ವಿಶಾಖಪಟ್ಟಣಂನ ಕಡಲತೀರದಲ್ಲಿರುವ ಹಿಂದೂಸ್ಥಾನ್ ಶಿಪ್​ಯಾರ್ಡ್ ಸಂಸ್ಥೆಯ ಹಡಗುದಾಣದಲ್ಲಿ ನೂತನ ಕ್ರೇನ್ ಅನ್ನು ಇನ್​ಸ್ಟಾಲ್ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

news18-kannada
Updated:August 1, 2020, 4:01 PM IST
ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 11 ಮಂದಿ ಸಾವು
ವಿಶಾಖಪಟ್ಟಣದ ಹಿಂದೂಸ್ಥಾನ್ ಶಿಪ್​ಯಾರ್ಡ್ ಬಂದರಿನಲ್ಲಿ ಕುಸಿದುಬಿದ್ದ ಕ್ರೇನ್
  • Share this:
ವಿಶಾಖಪಟ್ಟಣಂ(ಆ. 01): ಆಂಧ್ರದ ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಶಿಪ್​ಯಾರ್ಡ್ ಬಳಿ ಬೃಹತ್ ಕ್ರೇನ್​ವೊಂದನ್ನು ಸ್ಥಾಪಿಸುವ ವೇಳೆ ಅದು ಕುಸಿದುಬಿದ್ದು ಹನ್ನೊಂದು ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಅಪಾಯ ಇದೆ.

ದುರಂತ ನಡೆದ ಕೆಲವೇ ಹೊತ್ತಲ್ಲಿ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಗಳನ್ನ ಕೈಗೊಂಡರೆನ್ನಲಾಗಿದೆ. ನಾಲ್ಕು ಮೃತ ದೇಹಗಳನ್ನ ಸದ್ಯ ಹೊರತೆಗೆಯಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆದಿದೆ..

ಇದನ್ನೂ ಓದಿ: ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

ವಿಶಾಖಪಟ್ಟಣಂನ ಬಂದರಿನಲ್ಲಿರುವ ಹಿಂದೂಸ್ಥಾನ್ ಶಿಪ್​ಯಾರ್ಡ್ ಸಂಸ್ಥೆಯ ಹಡಗುದಾಣದಲ್ಲಿ ನೂತನ ಕ್ರೇನ್ ಅನ್ನು ಇನ್​ಸ್ಟಾಲ್ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅನುಪಮ್ ಹೆಸರಿನ ಈ ಕ್ರೇನ್ ಬರೋಬ್ಬರಿ 70 ಟನ್ ತೂಕ ಇದೆ. ಇದರ ಸಂಯೋಜನೆ ಎಲ್ಲವೂ ಆಗಿ ಪೂರ್ಣಪ್ರಮಾಣದ ಕಾರ್ಯಾಚರಣೆಗೆ ಇಳಿಸುವ ಮುನ್ನ ಟ್ರಯಲ್ ರನ್ ಮಾಡಲಾಗುತ್ತಿತ್ತು.

ಮೃತಪಟ್ಟವರಲ್ಲಿ ನಾಲ್ವರು ಹಿಂದೂಸ್ಥಾನ್ ಶಿಪ್​ಯಾರ್ಡ್ ಸಂಸ್ಥೆಯ ಉದ್ಯೋಗಿಗಳಾಗಿದ್ದಾರೆ. ಇನ್ನುಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.

ಶಿಪ್​ಯಾರ್ಡ್ ಸಂಸ್ಥೆ ಮತ್ತು ಜಿಲ್ಲಾಡಳಿತದಿಂದ ತನಿಖೆಗಳು ನಡೆಯುತ್ತವೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿನಯ್ ಚಂದ್ ಹೇಳಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ವೈ.ಎಸ್. ಜಗನ್​ಮೋಹನ್ ರೆಡ್ಡಿ ಅವರು ಘಟನೆಯ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಸಿ ಮತ್ತು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Published by: Vijayasarthy SN
First published: August 1, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading