ಕಾಶ್ಮೀರದಲ್ಲಿ ಕರ್ಫ್ಯೂ; ನಗರ ಪ್ರವೇಶಿಸಲು ಯತ್ನಿಸಿದ ಕಮ್ಯೂನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ ಹಾಗೂ ಡಿ. ರಾಜ ಬಂಧನ!

ಜಮ್ಮು-ಕಾಶ್ಮೀರದಲ್ಲಿ ನಡೆಯಬಹುದಾದ ಸಂಭಾವ್ಯ ರ್ಯಾಲಿ ಹಾಗೂ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಸೇರಿದಂತೆ 400 ಕ್ಕೂ ಹೆಚ್ಚು ಪ್ರಮುಖ ನಾಯಕರನ್ನು ಈಗಾಗಲೇ ಬಂಧಿಸಿ ಜೈಲಿನಲ್ಲಿಟ್ಟಿದೆ.

MAshok Kumar | news18
Updated:August 9, 2019, 2:42 PM IST
ಕಾಶ್ಮೀರದಲ್ಲಿ ಕರ್ಫ್ಯೂ; ನಗರ ಪ್ರವೇಶಿಸಲು ಯತ್ನಿಸಿದ ಕಮ್ಯೂನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ ಹಾಗೂ ಡಿ. ರಾಜ ಬಂಧನ!
ಸೀತಾರಾಮ್ ಯೆಚೂರಿ
  • News18
  • Last Updated: August 9, 2019, 2:42 PM IST
  • Share this:
ಶ್ರೀನಗರ (ಆಗಸ್ಟ್.08); ಕಣಿವೆ ರಾಜ್ಯ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಲು ಯತ್ನಿಸಿದ ಮಾರ್ಕ್ಸಿಸ್ಟ್ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಪಕ್ಷದ ನಾಯಕ ಡಿ. ರಾಜ ಅವರನ್ನು ಪೊಲೀಸ್ ಅಧಿಕಾರಿಗಳು ಕಾಶ್ಮೀರ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೋಳಪಡಿಸಿದ್ದಾರೆ.

ಸೀತಾರಾಮ್ ಯೆಚೂರಿ ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ ಶಾಸಕ ಎಂ.ವೈ. ತಾರಿಗಾಮಿ ಅವರನ್ನು ಭೇಟಿ ಯಾಗುವುದಕ್ಕಾಗಿ ಕಾಶ್ಮೀರಕ್ಕೆ ಆಗಮಿಸುತ್ತಿರುವುದಾಗಿ ಮುಂಚಿತವಾಗಿಯೇ ರಾಜ್ಯಪಾಲರಿಗೆ ಪತ್ರಬರೆದು ಮಾಹಿತಿ ನೀಡಿದ್ದಾರೆ. ಆದರೆ, ಅವರು ಕಾಶ್ಮೀರಕ್ಕೆ ಆಗಮಿಸಿದ ನಂತರ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಅಲ್ಲದೆ, ಪಕ್ಷದ ಶಾಸಕರನ್ನೂ ಭೇಟಿಯಾಗಲು ಅನುಮತಿ ನೀಡಲಾಗಿಲ್ಲ. ಹೀಗಾಗಿ ಈ ಅಕ್ರಮ ಬಂಧನವನ್ನು ಕಮ್ಯೂನಿಸ್ಟ್ ಪಕ್ಷ ಟ್ವಿಟರ್​ನಲ್ಲಿ ಬಲವಾಗಿ ಖಂಡಿಸಿದೆ.

ಕೇಂದ್ರ ಸರ್ಕಾರ ಕಲಂ 370 ಅನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದೇ ಕಾರಣಕ್ಕೆ ಕಣಿವೆ ರಾಜ್ಯದ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಅಲ್ಲದೆ ಗುರುವಾರದಿಂದ ಕರ್ಫ್ಯೂ ಅನ್ನು ಜಾರಿಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೀತಾರಾಮ್ ಯೆಚೂರಿ ಆಗಮನಕ್ಕೆ ತಡೆಯೊಡ್ಡಿರುವ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಆದರೆ, ತಮ್ಮ ಬಂಧನದ ಕುರಿತು ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಸೀತಾರಾಂ ಯೆಚೂರಿ, “ಅನಾರೋಗಕ್ಕೆ ತುತ್ತಾಗಿರುವ ನನ್ನ ಕಾಶ್ಮೀರದ ಸಹೋದ್ಯೋಗಿ ಮೊಹಮ್ಮದ್ ಯೂಸುಫ್ ತಾರಿಗಾಮಿ ಹಾಗೂ ಇಲ್ಲಿರುವ ನನ್ನ ಒಡನಾಡಿಗಳನ್ನು ಬೇಟಿಯಾಗಲು ಯಾವುದೇ ಅಡೆತಡೆಗಳು ಉಂಟಾಗಬಾರದು ಎಂದು ನಾನು ಕಾಶ್ಮೀರಕ್ಕೆ ಹೊರಡುವ ಮುನ್ನವೇ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಪತ್ರ ಬರೆದು ಅನುಮತಿ ಕೇಳಿದ್ದೆ.

ಇದನ್ನೂ ಓದಿ : PM Narendra Modi Speech: ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭ; ಪ್ರಧಾನಿ ಮೋದಿಯ ಇಂದಿನ ಭಾಷಣದಲ್ಲಿ ಏನೇನಿತ್ತು? ಇಲ್ಲಿದೆ ಪೂರ್ಣ ಮಾಹಿತಿ!

ಆದರೆ, ಅದರ ಹೊರತಾಗಿಯೂ ನನ್ನನ್ನು ಹಾಗೂ ಡಿ. ರಾಜಾ ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ. ಭದ್ರತಾ ಕಾರಣಗಳಿಂದಾಗಿ ನಮ್ಮ ಕಾಶ್ಮೀರ ಪ್ರವೇಶವನ್ನು ನಿರ್ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ಕಾನೂನು ದಾಖಲಾತಿಗಳನ್ನು ತೋರಿಸುತ್ತಿದ್ದಾರೆ. ಈ ಕುರಿತು ಅವರ ಜೊತೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.ಬುಧವಾರ ಶ್ರೀನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಗುಲಾಮ್ ನಬಿ ಆಜಾದ್ ಅವರನ್ನೂ ಸಹ ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಂದ ವಾಪಾಸ್ ಕಳುಹಿಸಲಾಗಿತ್ತು. ಅಲ್ಲದೆ ಭದ್ರತೆಯ ದೃಷ್ಟಿಯಿಂದ ಯಾವುದೇ ನಾಯಕರು ಕಣಿವೆ ರಾಜ್ಯಕ್ಕೆ ಆಗಮಿಸುವುದನ್ನು ನಿಷೇಧಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ನಡೆಯಬಹುದಾದ ಸಂಭಾವ್ಯ ರ್ಯಾಲಿ ಹಾಗೂ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಸೇರಿದಂತೆ 400 ಕ್ಕೂ ಹೆಚ್ಚು ಪ್ರಮುಖ ನಾಯಕರನ್ನು ಈಗಾಗಲೇ ಬಂಧಿಸಿ ಜೈಲಿನಲ್ಲಿಟ್ಟಿದೆ.

ಅಲ್ಲದೆ ಗುರುವಾರ ಜಮ್ಮು-ಕಾಶ್ಮೀರದ ಕಲಂ 370 ರದ್ದು ಮಾಡಿದ ಕಾರಣದ ಕುರಿತು ಇಡೀ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಣಿವೆ ರಾಜ್ಯದಲ್ಲಿ ಈದ್ ಹಬ್ಬದ ಆಚರಣೆಗೆ ಯಾವುದೇ ದಕ್ಕೆ ಬಾರದಂತೆ ಶಾಂತಿಯನ್ನು ಕಾಪಾಡುವ ಕುರಿತು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿ; ಅಂತಾರಾಷ್ಟ್ರೀಯ ಸಮುದಾಯಕ್ಕೆ ನೊಬೆಲ್ ವಿಜೇತೆ ಮಲಾಲ ಒತ್ತಾಯ!

First published: August 9, 2019, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading