ಗುರುಗ್ರಾಮದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

ಆರೋಪಿಗಳು ರಾಜಧಾನಿ ದೆಹಲಿಗೆ ಗೋಮಾಂಸ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ

Latha CG | news18
Updated:June 26, 2019, 11:22 AM IST
ಗುರುಗ್ರಾಮದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಪ್ರಾತಿನಿಧಿಕ ಚಿತ್ರ
  • News18
  • Last Updated: June 26, 2019, 11:22 AM IST
  • Share this:
ಗುರುಗ್ರಾಮ ​ (ಜೂ.26): ಹರಿಯಾಣದ ಗುರುಗ್ರಾಮ​ ಜಿಲ್ಲೆಯಲ್ಲಿ ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ಜನರ ಗುಂಪೊಂದು ಇಬ್ಬರು ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಸ್ಲಾಂಪುರ ಗ್ರಾಮದ ಸಮೀಪ 'ಗೋ ರಕ್ಷಣಾ ಘಟಕ'ದ ಗುಂಪು ಇಂದು ಬೆಳಗ್ಗೆ ಗೋ ಮಾಂಸ ಸಾಗಿಸುತ್ತಿದ್ದ ಎರಡು ವ್ಯಾನ್​ಗಳನ್ನು ತಡೆಹಿಡಿದು, ಯುವಕರಿಗೆ ಥಳಿಸಿದ್ದಾರೆ ಎಂದು ಗುಂಪಿನ ನಾಯಕತ್ವ ವಹಿಸಿದ್ದ ಸವಿತಾ ಕಟಾರಿಯಾ ಎಂಬ ವ್ಯಕ್ತಿ ಹೇಳಿದ್ದಾರೆ.

ಗೋಮಾಂಸ ಸಾಗಿಸುತ್ತಿದ್ದ ಪಲ್ವಾಲ್​ ಜಿಲ್ಲೆಯ ಶಾತಿಲ್​ ಅಹ್ಮದ್​ ಮತ್ತು ತಾಯ್ಯದ್​ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆ ಸ್ಥಳದಿಂದ ಪರಾರಿಯಾಗಿರುವ ಮತ್ತಿಬ್ಬರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಗುರ್​ಗಾವ್​ ಪೊಲೀಸರು ತಿಳಿಸಿದ್ಧಾರೆ.

ಇದನ್ನೂ ಓದಿ: 'ಜೈ ಶ್ರೀರಾಮ್'​ ಹೇಳದ ಮದರಸಾ ಶಿಕ್ಷಕನಿಗೆ ನೀಡಿದ ಶಿಕ್ಷೆಯೇನು ಗೊತ್ತೇ?

ಅಹ್ಮದ್​ ಮತ್ತು ತಾಯ್ಯದ್​​ ವ್ಯಾನ್​​ಗಳಲ್ಲಿ ಗೋಮಾಂಸ ಸಾಗಿಸುತ್ತಿದ್ದರು. ಇದನ್ನು ನೋಡಿದ ಗ್ರಾಮಸ್ಥರು ವ್ಯಾನ್​ಗಳನ್ನು ಅಡ್ಡಹಾಕಿ ಆ ಇಬ್ಬರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸವಿತಾ ಕಟಾರಿಯಾ ಹೇಳಿದ್ದಾರೆ.

ಆರೋಪಿಗಳು ರಾಜಧಾನಿ ದೆಹಲಿಗೆ ಗೋಮಾಂಸ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗೋಮಾಂಸ ಸಾಗಿಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಮೇಲೆ ಎಫ್​ಐಆರ್ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ." ನಾವು ವಿವಿಧ ಸೆಕ್ಷನ್​ಗಳಡಿ ಆರೋಪಿಗಳ ಮೇಲೆ ಎಫ್​ಐಆರ್​ ದಾಖಲಿಸುತ್ತೇವೆ. ಹರಿಯಾಣ ಗೌವನ್ಶ್ ಸಂರಕ್ಷಣ್​​ ಮತ್ತು ಗೌಸಮ್ವರ್ಧನ್ ಕಾಯ್ದೆ 2015 ರ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ," ಎಂದು ಪೊಲೀಸರು ಹೇಳಿದ್ದಾರೆ.
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ