ಸಾಮಾನ್ಯವಾಗಿ ನಾವು ಪ್ಲಾಸ್ಟಿಕ್ (Plastic) ವಸ್ತುಗಳನ್ನು ಉಪಯೋಗಿಸಿ, ನಂತರ ಅವುಗಳನ್ನು ರಸ್ತೆ (Road) ಬದಿಯಲ್ಲಿರುವ ಕಸದ ಕಂಟೇನರ್ಗಳಲ್ಲಿ ಅಥವಾ ಹೊರಗಡೆ ಖಾಲಿ ಜಾಗದಲ್ಲಿ ಬಿಸಾಡುತ್ತೇವೆ. ನಂತರ ಅದನ್ನು ಬೀದಿಯಲ್ಲಿ ಓಡಾಡುವ ಜಾನುವಾರುಗಳು (Cow) ತಿನ್ನುತ್ತವೆ.ಅನೇಕ ಎನ್ಜಿಒಗಳು ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬೇಡಿ. ಒಂದು ವೇಳೆ ಬಳಸಿದರೂ ಅವುಗಳನ್ನು ಜೋಪಾನವಾಗಿ ಬಿಸಾಡಿ ಎಂದು ಹೇಳುತ್ತಲೇ ಇರುತ್ತವೆ. ಆದರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ನಮ್ಮ ಈ ಅಸಡ್ಡೆಯ ವರ್ತನೆಯು ಮೂಕ ಪ್ರಾಣಿಗಳ ಆರೋಗ್ಯಕ್ಕೆ ದೊಡ್ಡ ಕಂಟಕವಾಗಬಹುದು.
ನಾವು ರಸ್ತೆಯ ಬದಿಯಲ್ಲಿ ಅಥವಾ ಬಯಲಿನಲ್ಲಿ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಚ್ಚಾಗಿ ಈ ಬೀದಿಯಲ್ಲಿ ಓಡಾಡುವ ಹಸುಗಳು ಸೇವಿಸುತ್ತವೆ. ಇತ್ತೀಚೆಗೆ ಹಸುವೊಂದು ಅನಾರೋಗ್ಯದಿಂದ ಬಳಲುತ್ತಿದ್ದು, ಅದರ ಅನಾರೋಗ್ಯಕ್ಕೆ ಕಾರಣವೇನೆಂದು ನೋಡಿದರೆ ಆ ಹಸುವಿನ ಹೊಟ್ಟೆಯಲ್ಲಿ ಸುಮಾರು 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಗುಜರಾತಿನ ಆನಂದ್ ಜಿಲ್ಲೆಯ ಪಶು ವೈದ್ಯರು ಹಸುವಿನ ಹೊಟ್ಟೆಯಿಂದ ತ್ಯಾಜ್ಯವನ್ನು ತೆಗೆದು ಹಾಕಿದಾಗ ಅದರಲ್ಲಿ ಐಸ್ ಕ್ರೀಮ್ ಕಪ್, ಚಮಚಗಳು ಮತ್ತು ಪ್ಲಾಸ್ಟಿಕ್ ಕಪ್ಗಳು ಸೇರಿವೆ ಎಂದು ಹೇಳಲಾಗುತ್ತಿದೆ.
ವೆಟ್ಸ್ ತಂಡವು ನಿರ್ವಹಿಸಿದ ಶಸ್ತ್ರಚಿಕಿತ್ಸೆಯು ಆನಂದ್ನ ಪಶು ಆಸ್ಪತ್ರೆಯಲ್ಲಿ ಎರಡೂವರೆ ಗಂಟೆಗಳ ಕಾಲ ನಡೆಯಿತು. ವರದಿಯ ಪ್ರಕಾರ, ಎನ್ಜಿಒದವರು ಅನಾರೋಗ್ಯದಿಂದ ಬಳಲುತ್ತಿರುವ ಹಸುವನ್ನು ಆಸ್ಪತ್ರೆಗೆ ಕರೆ ತಂದಿದ್ದರು.
ಶಸ್ತ್ರಚಿಕಿತ್ಸೆ ತಂಡದ ಭಾಗವಾಗಿದ್ದ ಡಾ. ಪಿನೇಶ್ ಪಾರಿಖ್ ಹಸುವಿನ ಹೊಟ್ಟೆಯಿಂದ ತೆಗೆದುಹಾಕಲಾದ ಪ್ಲಾಸ್ಟಿಕ್ ತ್ಯಾಜ್ಯವು ಹೆಚ್ಚಾಗಿ ಜನರು ತಮ್ಮ ಊಟವನ್ನು ಸೇವಿಸಿದ ನಂತರ ರಸ್ತೆ ಬದಿಯಲ್ಲಿ ಎಸೆದಿರುವಂತದ್ದು ಆಗಿದೆ ಎಂದು ಹೇಳಿದರು. ಆದರೂ, ಬೀಡಾಡಿ ಹಸುಗಳು ಆಹಾರವನ್ನು ಹುಡುಕುತ್ತಾ ಆಕಸ್ಮಿಕವಾಗಿ ಸಿಕ್ಕ ಸಿಕ್ಕ ಪ್ಲಾಸ್ಟಿಕ್ ವಸ್ತುಗಳನ್ನು ಸೇವಿಸುತ್ತಿವೆ ಎಂಬ ಅಂಶದ ಬಗ್ಗೆ ನಾಗರಿಕರು ಕಿಂಚಿತ್ತೂ ಆಲೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: AIDS : ಎಚ್ಐವಿ ಸೋಂಕಿತ ಎಂದು ಗೊತ್ತಿದ್ರೂ ಮೋಸ ಮಾಡಿ ಸಂಸಾರ ನಡೆಸಿದವನಿಗೆ 5 ವರ್ಷ ಜೈಲು
ಜನರ ಈ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಿ ಹೊರಗೆ ಬಿಸಾಡುವ ಕೆಟ್ಟ ಅಭ್ಯಾಸಗಳಿಂದ ಅನೇಕ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಆನಂದ್ನ ಈ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮಾತ್ರ ರಸ್ತೆ ಬದಿಯ ಡಂಪ್ಸ್ಟರ್ಗಳಿಂದ ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯ ಪೀಡಿತವಾಗಿರುವ ಹಸುಗಳ ಪ್ರಕರಣಗಳು ಪ್ರತಿ ವಾರ 3 ರಿಂದ 4 ಬರುತ್ತಿವೆ.
"ಪ್ರತಿ ಬಾರಿಯೂ ಈ ಜಾನುವಾರುಗಳ ಹೊಟ್ಟೆಯಲ್ಲಿ ತ್ಯಾಜ್ಯವು 10 ಕೆಜಿಯಿಂದ 60 ಕೆಜಿಯವರೆಗೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಜನರು ಸಾಮಾನ್ಯವಾಗಿ ಎಸೆಯುವ ಪ್ಲಾಸ್ಟಿಕ್ ಹಗ್ಗಗಳನ್ನು ಹಸುಗಳು ಆಕಸ್ಮಿಕವಾಗಿ ಸೇವಿಸಿದ ಪ್ರಕರಣಗಳನ್ನು ಸಹ ನಾವು ನೋಡಿದ್ದೇವೆ" ಎಂದು ಕಾಮಧೇನು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಪಶು ವೈದ್ಯಕೀಯ ಕಾಲೇಜಿನ ಪಶು ವೈದ್ಯಕೀಯ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಪಾರಿಖ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನು ಓದಿ: Viral News: ಈಕೆಗೆ ಮದುವೆಯಾಗೋ ಚಟವಂತೆ, ಹನ್ನೊಂದು ಸಲ ಬೇರೆ ಬೇರೆಯವರನ್ನು ಮದ್ವೆಯಾಗಿದ್ದಾಳೆ ಕಿಲಾಡಿ ಲೇಡಿ!
ಪ್ಲಾಸ್ಟಿಕ್ ತ್ಯಾಜ್ಯವು ಜಾನುವಾರುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ ಡಾ. ಪಾರಿಖ್, ಈ ಹಸುಗಳು ಪ್ಲಾಸ್ಟಿಕ್ ಸೇವಿಸಿದ ನಂತರ ಅಜೀರ್ಣ ಸಮಸ್ಯೆಗಳಿಂದ ಬಳಲುತ್ತವೆ ಎಂದು ಹೇಳಿದರು. ಪ್ಲಾಸ್ಟಿಕ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಹಸುಗಳ ಜೀರ್ಣಕ್ರಿಯೆಯ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಅವು ಅನಾರೋಗ್ಯಕ್ಕೆ ಒಳಗಾಗುತ್ತವೆ. ಕೆಲವೊಮ್ಮೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಜಾನುವಾರುಗಳು ಸಾವನ್ನಪ್ಪುತ್ತವೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ