ಹಸು, ಓಂ ಹೆಸರು ಕೇಳಿದರೇ ಕೆಲವರಿಗೆ ಆತಂಕವಾಗುತ್ತದೆ; ಮಥುರಾದಲ್ಲಿ ಪ್ರಧಾನಿ ಮೋದಿ ಲೇವಡಿ

ಇಂದು ಉತ್ತರಪ್ರದೇಶದ ಮಥುರಾದಲ್ಲಿ ಜಾಗೃತಿ ಕಾರ್ಯಮವೊಂದರಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅಲ್ಲಿನ ಕೆಲಸಗಾರರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಸು ಮತ್ತು ಕರುಗಳ ಜೊತೆಗೆ ಕೆಲ ಸಮಯ ಕಳೆದಿದ್ದಾರೆ.

Sushma Chakre | news18-kannada
Updated:September 11, 2019, 3:44 PM IST
ಹಸು, ಓಂ ಹೆಸರು ಕೇಳಿದರೇ ಕೆಲವರಿಗೆ ಆತಂಕವಾಗುತ್ತದೆ; ಮಥುರಾದಲ್ಲಿ ಪ್ರಧಾನಿ ಮೋದಿ ಲೇವಡಿ
ನರೇಂದ್ರ ಮೋದಿ
  • Share this:
ನವದೆಹಲಿ (ಸೆ. 11): ನಮ್ಮ ದೇಶದಲ್ಲಿ ಕೆಲವು ಜನರಿಗೆ ಹಸು ಮತ್ತು ಓಂ ಎಂಬ ಪದ ಕೇಳಿದರೇ ಗಾಬರಿಯಾಗುತ್ತಾರೆ. ಇದು ನಮ್ಮ ದುರಾದೃಷ್ಟವೇ ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಸು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರ ಕೂದಲು ಎದ್ದುನಿಲ್ಲುತ್ತದೆ. ಈ ಬಗ್ಗೆ ಮಾತನಾಡಿದರೆ ನಮ್ಮ ದೇಶ 16ನೇ ಶತಮಾನಕ್ಕೆ ವಾಪಾಸ್ ಹೋಗುತ್ತಿದೆ ಎಂದು ಲೇವಡಿ ಮಾಡುತ್ತಾರೆ. ಆದರೆ, ಅಂಥವರು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಾಣಿಗಳ ಬಗ್ಗೆ ಮಾತನಾಡದೆ ಗ್ರಾಮೀಣ ಭಾಗದ ಆರ್ಥಿಕತೆ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಪರಿಸರ ಮತ್ತು ಪ್ರಾಣಿ-ಪಕ್ಷಿಗಳು ಭಾರತೀಯ ಆರ್ಥಿಕತೆಗೆ ಬಹಳ ಮುಖ್ಯವಾದುವು. ಇವೆರಡನ್ನೂ ಬ್ಯಾಲೆನ್ಸ್ ಮಾಡಿದರೆ ನೂತನ ಮತ್ತು ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯವಿದೆ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಲ್ಮೆಟ್​ ಫ್ರೀ; ವಿನೂತನ ಅಭಿಯಾನಕ್ಕೆ ಮುಂದಾದ ಒರಿಸ್ಸಾ ಸರ್ಕಾರ


ಇಂದು ಉತ್ತರಪ್ರದೇಶದ ಮಥುರಾದಲ್ಲಿ ಜಾಗೃತಿ ಕಾರ್ಯಮವೊಂದರಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅಲ್ಲಿನ ಕೆಲಸಗಾರರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಸು ಮತ್ತು ಕರುಗಳ ಜೊತೆಗೆ ಕೆಲ ಸಮಯ ಕಳೆದಿದ್ದಾರೆ. ಹಾಗೇ, ನೆಲದ ಮೇಲೆ ಕುಳಿತು ಕೆಲಸಗಾರರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳ್ನು ವಿಂಗಡಣೆ ಮಾಡಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಸ್ವಚ್ಛತೆಯೇ ಸೇವೆ ಎಂಬ ಘೋಷಣೆಯ ಭಾಗವಾಗಿ ಕೆಲಸಗಾರರ ಜೊತೆ ಮೋದಿ ಸಂವಹನ ಮಾಡಿದ್ದಾರೆ.

First published: September 11, 2019, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading