ಕೊರೋನಾ ಲಸಿಕೆ ಸಿದ್ಧವಾಗಿದೆ, ಕೆಲವೇ ವಾರಗಳಲ್ಲಿ ಜನರ ಬಳಕೆಗೆ ಲಭ್ಯ: ಡೊನಾಲ್ಡ್​ ಟ್ರಂಪ್ ಘೋಷಣೆ

ಅಮೆರಿಕದಲ್ಲಿ ಕೊರೋನಾ ಲಸಿಕೆ ಸಿದ್ಧವಾಗಿದೆ. ಇದನ್ನು ವಾರಗಳಲ್ಲಿ ಘೋಷಿಸಲಾಗುವುದು ಮತ್ತು ಅದನ್ನು ಜನರಿಗೆ ತಲುಪಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭರವಸೆ ನೀಡಿದ್ದಾರೆ.

news18-kannada
Updated:October 23, 2020, 11:40 AM IST
ಕೊರೋನಾ ಲಸಿಕೆ ಸಿದ್ಧವಾಗಿದೆ, ಕೆಲವೇ ವಾರಗಳಲ್ಲಿ ಜನರ ಬಳಕೆಗೆ ಲಭ್ಯ: ಡೊನಾಲ್ಡ್​ ಟ್ರಂಪ್ ಘೋಷಣೆ
ಡೊನಾಲ್ಡ್​ ಟ್ರಂಪ್.
  • Share this:
ಅಮೆರಿಕ: ಸಾಂಕ್ರಾಮಿಕ ವೈರಸ್ COVID-19ಗೆ ಲಸಿಕೆ ಸಿದ್ಧವಾಗಿದ್ದು, ಈ ವಾರದಲ್ಲಿ ಅದನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ. ಚುನಾವಣೆಗೆ ಮುನ್ನ ಅಂತಿಮ ಬಾರಿಗೆ ಡೆಮಾಕ್ರಟಿಕ್ ಚಾಲೆಂಜರ್ ಜೋ ಬಿಡೆನ್ ಅವರೊಂದಿಗೆ ಅಧ್ಯಕ್ಷೀಯ ಚರ್ಚೆಯ ಸಂದರ್ಭದಲ್ಲಿ ಟ್ರಂಪ್ ಅವರು ಕೋವಿಡ್ ಲಸಿಕೆಗೆ ಸಂಬಂಧಿಸಿದ ಈ ಮಹತ್ವ ಘೋಷಣೆಯನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ನವೆಂಬರ್ 3 ರಂದು ಅಮೆರಿಕದಲ್ಲಿ ಮಹತ್ವದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ಎರಡು ವಾರಗಳಿಗಿಂತಲೂ ಮುಂಚಿನಿಂದಲೂ ಅಧ್ಯಕ್ಷೀಯ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸಾರ್ವಜನಿಕ ಚರ್ಚೆ ನಡೆಯುತ್ತಲೇ ಇದೆ. ಗುರುವಾರ ಇಂತಹದ್ದೇ ಒಂದು ಚರ್ಚೆಯಲ್ಲಿ ಜೋ ಬಿಡೆನ್ ಅವರ ಮಾತು ಮುಗಿದ ನಂತರ ಡೊನಾಲ್ಡ್ ಟ್ರಂಪ್ ಕೊರೋನಾ ಲಸಿಕೆಯ ಕುರಿತು ಮಾಹಿತಿ ನೀಡಿದ್ದಾರೆ.

ಟ್ರಂಪ್-ಬಿಡೆನ್ ಮುಖಾಮುಖಿಯಾದ ಆರಂಭಿಕ ದಿನಗಳಲ್ಲಿ ಅಮೆರಿಕದಲ್ಲಿ ಕೊರೋನಾ ವೈರಸ್ ಪ್ರಾಬಲ್ಯ ಸಾಧಿಸಿತ್ತು. ಈ ವೇಳೆ ಮಾತನಾಡಿದ್ದ ಅಧ್ಯಕ್ಷ ಟ್ರಂಪ್ ಈ ಸೋಂಕನ್ನು "ವಿಶ್ವದ ಸಮಸ್ಯೆ" ಎಂದು ಅಭಿಪ್ರಾಯಪಟ್ಟಿದ್ದರು.

"ಇದು ವಿಶ್ವಾದ್ಯಂತದ ಸಮಸ್ಯೆಯಾಗಿದೆ, ಆದರೆ ನಾವು ಏನು ಮಾಡಲು ಸಾಧ್ಯವಾಯಿತು ಎಂಬುದರ ಕುರಿತು ಅನೇಕ ದೇಶಗಳು ನನ್ನನ್ನು ಅಭಿನಂದಿಸಿವೆ" ಎಂದು ಟೆನ್ನೆಸ್ಸೀಯ ನ್ಯಾಶ್ವಿಲ್ಲೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಹೇಳಿದ್ದರು.

ಆದರೆ, ಗುರುವಾರದ ಚರ್ಚೆಯ ವೇಳೆ ಟ್ರಂಪ್, "ಅಮೆರಿಕದಲ್ಲಿ ಕೊರೋನಾ ಲಸಿಕೆ ಇದೆ, ಅದು ಸಿದ್ಧವಾಗಿದೆ. ಇದನ್ನು ವಾರಗಳಲ್ಲಿ ಘೋಷಿಸಲಾಗುವುದು ಮತ್ತು ಅದನ್ನು ಜನರಿಗೆ ತಲುಪಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಕೊರೋನಾ ಆರಂಭವಾದ ಕಾಲದಿಂದ ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅನೇಕ ಪ್ರಯೋಗಗಳು ಮೂರನೇ ಹಂತವಾದ ಕ್ರಿನಿಕಲ್​ ಟ್ರಯಲ್​ವರೆಗೂ ನಡೆದಿದ್ದು ಕೆಲವು ವಿಫಲವಾಗಿವೆ.

ಇದನ್ನೂ ಓದಿ : ಉಚಿತ ಕೋವಿಡ್​ ಲಸಿಕೆ ಭರವಸೆ; ಟ್ರೋಲ್​ಗೆ ಒಳಗಾಗುತ್ತಿರುವ ಬಿಹಾರದ ಬಿಜೆಪಿ ಚುನಾವಣಾ ಪ್ರಣಾಳಿಕೆ!ಇತ್ತೀಚೆಗೆ ಬ್ರೆಸಿಲ್​ನಲ್ಲಿ ಅಸ್ಟ್ರಾಜೆನೆಕಾ ಎಂಬ ಕಂಪೆನಿ ನಡೆಸಿದ್ದ ಕ್ರಿನಿಕಲ್ ಟ್ರಯಲ್​ನಲ್ಲಿ ಲಸಿಕೆಯನ್ನು ಪಡೆದಿದ್ದ ವ್ಯಕ್ತಿ ಮೃತಪಟ್ಟಿದ್ದ. ಇದಲ್ಲದೆ, ತಿಂಗಳ ಹಿಂದೆಯೇ ರಷ್ಯಾ ದೇಶ ತಾವು ಕೊರೋನಾಗೆ ಲಸಿಕೆಯನ್ನು ಕಂಡುಹಿಡಿದಿದ್ದೇವೆ ಎಂದು ಘೋಷಿಸಿತ್ತು. ಆದರೆ, ತದನಂತರ ಅದೂ ಸಹ ವಿಫಲವಾಗಿದೆ ಎಂಬ ಸುದ್ದಿಗಳು ಭಿತ್ತರವಾಗಿತ್ತು.

ಈ ನಡುವೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೊನಾಲ್ಡ್​ ಟ್ರಂಪ್ ಸಹ ಕೊರೋನಾಗೆ ಲಸಿಕೆಯನ್ನು ಅನ್ವೇಷಿಸಲಾಗಿದೆ ಎಂದು ಹೇಳಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವಪಡೆದುಕೊಂಡಿದೆ. ಆದರೆ, ಈ ಲಸಿಕೆ ಜನರ ಬಳಕೆಗೆ ಲಭ್ಯವಾದ ನಂತರವಷ್ಟೇ ಈ ಹೇಳಿಕೆಗಳ ಸತ್ಯಾಸತ್ಯತೆ ತಿಳಿಯಲಿದೆ.
Published by: MAshok Kumar
First published: October 23, 2020, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading