Night curfew ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ; WHO‌ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌..!

ಭಾರತದಲ್ಲಿ ಈಗಾಗಲೇ ಓಮೈಕ್ರಾನ್‌ ಪ್ರಕರಣಗಳ ಉಲ್ಬಣ ಪ್ರಾರಂಭವಾಗಿದೆ ಮತ್ತು ಕೆಲವು ಮಹಾ ನಗರಗಳಲ್ಲಿ ಇದು ಈಗ ವೇಗವಾಗಿ ಹರಡುತ್ತಿದೆ ಮತ್ತು ಬಹಳಷ್ಟು ಜನರಿಗೆ ಸೋಂಕು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ

ಡಾ. ಸೌಮ್ಯ ಸ್ವಾಮಿನಾಥನ್

ಡಾ. ಸೌಮ್ಯ ಸ್ವಾಮಿನಾಥನ್

  • Share this:
ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕೋವಿಡ್-19 ವೈರಸ್ (Covid-19 virus) ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅಲ್ಲಿನ ರಾಜ್ಯ ಸರ್ಕಾರಗಳು (State Governments) ರಾತ್ರಿ ಕರ್ಫ್ಯೂ ಅನ್ನು ಈಗಾಗಲೇ ಜಾರಿ ಮಾಡಿದೆ. ಆದರೆ ಇದು ನಿಜಕ್ಕೂ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುವುದೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.ಇದರ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ (Soumya Swaminathan)ಅವರು ಭಾರತದಲ್ಲಿ ರಾತ್ರಿ ಕರ್ಫ್ಯೂಗಳನ್ನು ಜಾರಿಗೆ ತರುವ ಹಿಂದೆ ಯಾವುದೇ ವಿಜ್ಞಾನವಿಲ್ಲ ಎಂದು ಹೇಳಿದ್ದಾರೆ.

ತಳ್ಳಿ ಹಾಕಿದ ರಾತ್ರಿ ಕರ್ಫ್ಯೂ ಕ್ರಮ
ಟಿವಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, ಡಾ. ಸೌಮ್ಯ ಸ್ವಾಮಿನಾಥನ್ ಅವರು ರಾತ್ರಿ ಕರ್ಫ್ಯೂಗಳನ್ನು ಮಾಡಿರುವ ಕ್ರಮವನ್ನು ತಳ್ಳಿ ಹಾಕಿದ್ದಾರೆ. "ರಾತ್ರಿ ಕರ್ಫ್ಯೂಗಳಂತಹ ವಿಷಯಗಳ ಹಿಂದೆ ನಿಜವಾಗಿಯೂ ಯಾವುದೇ ವಿಜ್ಞಾನವಿಲ್ಲ. ಸರ್ಕಾರಗಳು ಸಾರ್ವಜನಿಕ ಆರೋಗ್ಯ ಸುಧಾರಿತ ಕ್ರಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು" ಎಂದು ಅವರು ಹೇಳಿದರು.

ಇದನ್ನೂ ಓದಿ: Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

ಈ ಹೊಸ ರೂಪಾಂತರ ಓಮೈಕ್ರಾನ್‌ನಿಂದಾಗಿ ಪ್ರಕರಣಗಳ ಹೆಚ್ಚಳಕ್ಕೆ ಸರ್ಕಾರಗಳ ಪ್ರತಿಕ್ರಿಯೆ ಏನಾಗಿರಬೇಕು ಎಂದು ಕೇಳಿದಾಗ ಅವರು "ರಾಜಕಾರಣಿಗಳು ಮತ್ತು ನೀತಿಗಳನ್ನು ರೂಪಿಸುವವರು ಈ ಕೋವಿಡ್-19 ಪ್ರಸರಣವನ್ನು ನಿಯಂತ್ರಿಸಲು ಮತ್ತು ಜನರ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡಲು ವಿಶೇಷವಾಗಿ ಸಾವುಗಳನ್ನು ಕಡಿಮೆ ಮಾಡಲು ಮತ್ತು ಅದೇ ಸಮಯದಲ್ಲಿ ಆರ್ಥಿಕತೆಗಳನ್ನು ತೆರೆದಿಡುವುದು, ಜೀವನೋಪಾಯಗಳ ಮೇಲೆ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಿತ ವಿಧಾನಗಳನ್ನು ಒಂದು ಸಮತೋಲನದಲ್ಲಿ ಪ್ರಾರಂಭಿಸಬೇಕು, ಏಕೆಂದರೆ ಜನರು ಈಗಾಗಲೇ ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ" ಎಂದು ಅವರು ಹೇಳಿದರು.

ಅಪಾಯವು ಹೆಚ್ಚಾಗಿದೆ
“ಶಾಲೆಗಳನ್ನು ನೀವು ಕೊನೆಯದಾಗಿ ಮುಚ್ಚಬೇಕು ಮತ್ತು ಎಲ್ಲವನ್ನೂ ತೆರೆದಾಗ ಶಾಲೆಗಳನ್ನು ಮೊದಲಿಗೆ ತೆರೆಯಬೇಕು, ಏಕೆಂದರೆ ಶಾಲಾ ಶಿಕ್ಷಣದ ನಷ್ಟವು ನಮ್ಮ ಮಕ್ಕಳ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು. ಮನರಂಜನಾ ಸ್ಥಳಗಳ ಮೇಲಿನ ನಿರ್ಬಂಧಗಳು ಸ್ವಾಭಾವಿಕ ಎಂದು ಅವರು ಒಪ್ಪಿಕೊಂಡರು, ಏಕೆಂದರೆ ಮುಚ್ಚಿದ ಮತ್ತು ಕಿಕ್ಕಿರಿದ ಪರಿಸರದಲ್ಲಿ ಈ ರೋಗವು ಹರಡುವ ಅಪಾಯವು ಹೆಚ್ಚಾಗಿದೆ ಎಂದು ಹೇಳಿದರು. ಪ್ರಾಥಮಿಕ ಆರೋಗ್ಯ ಮತ್ತು ಸಂಬಂಧಿತ ಆರೋಗ್ಯ ಸಿಬ್ಬಂದಿಯನ್ನು ಬಲಪಡಿಸುವುದು ಮತ್ತು ಜನರಿಗೆ ಸಮಗ್ರ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವುದು ಪ್ರಮುಖವಾಗಿದೆ ಎಂದೂ ಅವರು ಹೇಳಿದರು.

ಅಲೆ ಎದುರಿಸಲು ಸಿದ್ಧರಾಗಿ
ಭಾರತೀಯರು ಈ ಅಲೆಗೆ ಸಿದ್ಧರಾಗಿರಬೇಕು, ಆದರೆ ಭಯಭೀತರಾಗಿರಬಾರದು ಎಂದು ಅವರು ಒತ್ತಿ ಹೇಳಿದರು. "ಭಾರತದಲ್ಲಿ ಈಗಾಗಲೇ ಓಮೈಕ್ರಾನ್‌ ಪ್ರಕರಣಗಳ ಉಲ್ಬಣ ಪ್ರಾರಂಭವಾಗಿದೆ ಮತ್ತು ಕೆಲವು ಮಹಾ ನಗರಗಳಲ್ಲಿ ಇದು ಈಗ ವೇಗವಾಗಿ ಹರಡುತ್ತಿದೆ ಮತ್ತು ಬಹಳಷ್ಟು ಜನರಿಗೆ ಸೋಂಕು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ" ಎಂದು ಅವರು ಹೇಳಿದರು. ಮತ್ತೊಂದು ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಡಬ್ಲ್ಯೂಹೆಚ್ಒ ಮುಖ್ಯ ವಿಜ್ಞಾನಿ ಕೋವಿಡ್ ವಿರುದ್ಧ ಸ್ವಯಂ ಔಷಧೋಪಚಾರ ತೆಗೆದುಕೊಳ್ಳುವುದರ ವಿರುದ್ಧ ಎಚ್ಚರಿಸಿದ್ದಾರೆ. "ಸ್ವಯಂ ಔಷಧೋಪಚಾರ ಮಾಡಿಕೊಳ್ಳಬೇಡಿ. ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ ಅಥವಾ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳಬಾರದು" ಎಂದು ಹೇಳಿದ್ದಾರೆ.

ಇದನ್ನೂ ಓದಿ: Travel Safely: ಸೋಂಕಿನ ಅಪಾಯವನ್ನು ಕಡಿಮೆ ಮಾಡಿಕೊಂಡು ಸುರಕ್ಷಿತವಾಗಿ ವಿಮಾನ ಪ್ರಯಾಣ ಮಾಡುವುದು ಹೇಗೆ..?

"ಇದು ಮತ್ತೊಂದು ಅಲೆಯ ಪ್ರಾರಂಭದಂತೆ ಕಾಣುತ್ತದೆ, ಹಾಗಾಗಿ ಆದಷ್ಟು ಈ ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಕಡಿಮೆ ಮಾಡಬೇಕು” ಎಂದು ಅವರು ಹೇಳಿದರು. ಜನವರಿ 4 ರಂದು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,892 ಓಮಿಕ್ರಾನ್ ರೂಪಾಂತರದ ಪ್ರಕರಣಗಳು ಪತ್ತೆ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Published by:vanithasanjevani vanithasanjevani
First published: