ನವದೆಹಲಿ(ಜ.20): XBB.1.5, ವಿಶ್ವದಾದ್ಯಂತ ಭೀತಿ ಸೃಷ್ಟಿಸಿರುವ ಕೊರೊನಾದ (Coronavirus) ಹೊಸ ತಳಿ ಇತರ ರೂಪಾಂತರಗಳಿಗಿಂತ ಲಸಿಕೆ ಪಡೆದ ಜನರು ಮತ್ತು ಕೊರೊನಾ ಸೋಂಕಿಗೆ ಒಳಗಾದ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೊಸ ಸಂಶೋಧನೆಯಲ್ಲಿ ಈ ವಿಚಾರ ಬಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ 38 ದೇಶಗಳಲ್ಲಿ XBB.1.5 ರೂಪಾಂತರದ ಪ್ರಕರಣಗಳು ಕಂಡುಬಂದಿವೆ ಎಂದು ವರದಿ ಮಾಡಿದೆ, ಈ ರೂಪಾಂತರವು US ನಲ್ಲಿ 82 ಪ್ರತಿಶತದಷ್ಟು ಕೊರೊನಾ ಪ್ರಕರಣಗಳಿಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಬ್ರಿಟನ್ನ (Britain) ಎಂಟು ಪ್ರತಿಶತ ಮತ್ತು ಡೆನ್ಮಾರ್ಕ್ನ (Denmark) ಎರಡು ಪ್ರತಿಶತ ಕೊರೊ ಪ್ರಕರಣಗಳು ಈ ರೂಪಾಂತರದ ಕಾರಣದಿಂದಾಗಿವೆ. ಅಧ್ಯಯನದ ಪ್ರಕಾರ, ಈ ರೂಪಾಂತರವು ಲಸಿಕೆ ಹಾಕಿದ ಅಥವಾ ಹಿಂದೆ COVID-19 ಸೋಂಕು ತಗುಲಿದವರಿಗೆ ತಗಲುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
XBB.1.5 ಸ್ಟ್ರೈನ್ ಒಮಿಕ್ರಾನ್ XBB ರೂಪಾಂತರಗಳ ಭಾಗವಾಗಿದೆ, ಇದು Omicron BA.2.10.1 ಮತ್ತು BA.2.75 ಉಪ-ರೂಪಾಂತರಗಳಿಂದ ರೂಪಿತಗೊಂಡ ತಳಿಯಾಗಿದೆ. XBB ಮತ್ತು XBB.1.5 US ನಲ್ಲಿ 44 ಪ್ರತಿಶತದಷ್ಟು ಕೊರೊನಾ ಪ್ರಕರಣಗಳಿಗೆ ಕಾರಣವಾಗಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್ (ECDC) ಪ್ರಕಾರ, ಈ ತಳಿ ಪ್ರಸ್ತುತ ಇತರ ರೂಪಾಂತರಗಳಿಗಿಂತ US ನಲ್ಲಿ 12.5 ಪ್ರತಿಶತ ವೇಗವಾಗಿ ಹರಡುತ್ತಿದೆ.
ಇದನ್ನೂ ಓದಿ: China : 35 ದಿನಗಳಲ್ಲಿ ಕೊರೊನಾಗೆ 60 ಸಾವಿರ ಮಂದಿ ಬಲಿ! ಕೊನೆಗೂ ಸಾವಿನ ವರದಿ ಬಿಚ್ಚಿಟ್ಟ ಚೀನಾ
ರಾಯಿಟರ್ಸ್ ಪ್ರಕಾರ, ಜನವರಿ ಮೊದಲ ವಾರದಲ್ಲಿ 30 ಪ್ರತಿಶತ ಪ್ರಕರಣಗಳು ಈ ತಳಿಯದ್ದೆಂದು ವರದಿಯಲ್ಲಿ ಬಹಿರಂಗವಾಗಿದೆ. ಇದು ಕಳೆದ ವಾರದ CDC ಅಂದಾಜು ಮಾಡಿದ 27.6% ಕ್ಕಿಂತ ಹೆಚ್ಚು.
ಈ ರೂಪಾಂತರವು ಲಸಿಕೆ ಹಾಕಿದ ಜನರಿಗೂ ತಗುಲಬಹುದು
NYC ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಮತ್ತು ಮೆಂಟಲ್ ಹೈಜೀನ್ನ ಇತ್ತೀಚಿನ ಅಧ್ಯಯನದಲ್ಲಿ XBB.1.5 ತಳಿ COVID-19 ನ ಅತ್ಯಂತ ವೇಗವಾಗಿ ಹರಡುವ ರೂಪಾಂತರವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ತಳಿ ಕೊರೊನಾ ಮಣಿಸಲು ಲಸಿಕೆ ಪಡೆದವರನ್ನೂ ಸೋಂಕಿಗೀಡು ಮಾಡುವ ಸಾಧ್ಯತೆ ಅಧಿಕವಿದೆ ಅಥವಾ ಈ ಹಿಂದೆ COVID-19 ತಗುಲಿದವರಿಗೂ ಇದು ಬಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊ ತಡೆಗಟ್ಟಲು ವ್ಯಾಕ್ಸಿನೇಷನ್ ಅಗತ್ಯ
ಇದೇ ವೇಳೆ ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸಲು ಒತ್ತಾಯಿಸಲಾಗಿದ್ದು, "XBB.1.5 ಹೆಚ್ಚು ತೀವ್ರವಾದ ಹಾನಿಯುಂಟು ಮಾಡಬಹುದೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಅದಕ್ಕಾಗಿಯೇ ಲಸಿಕೆ ಮತ್ತು COVID-19 ನ ನವೀಕರಿಸಿದ ಬೂಸ್ಟರ್ ಡೋಸ್ನೊಂದಿಗೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Kraken Variant: ನಿಲ್ಲುತ್ತಿಲ್ಲ ಕೊರೊನಾ, ಈಗ ಮತ್ತೊಂದು ಆತಂಕ, ಏನಿದು ಕ್ರಾಕನ್?
ಭಾರತದಲ್ಲಿ ಈ ರೂಪಾಂತರದ ಒಟ್ಟು 26 ಪ್ರಕರಣಗಳು
ಮೂರು ದಿನಗಳ ಹಿಂದೆ INSACOG ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 26 XBB.1.5 ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಈ ರೂಪಾಂತರವು ಇಲ್ಲಿಯವರೆಗೆ ದೆಹಲಿ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ COVID ಪ್ರಕರಣಗಳ ಉಲ್ಬಣಕ್ಕೆ XBB.1.5 ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ