Covid 19 Update: ದೇಶದಲ್ಲಿ ಮತ್ತೆ ಕೋವಿಡ್ XBB 1.16 ರೂಪಾಂತರದ ಆರ್ಭಟ; ಭಾರತದಲ್ಲಿ 610 ಪ್ರಕರಣಗಳು ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ ಕೋವಿಡ್‌ ರೂಪಾಂತರಗಳಿಗೆ ಸಂಬಂಧಿಸಿದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಕೊರೊನಾಗೆ ಸಂಬಂಧಿಸಿದ ನಿಯಮಗಳನ್ನು ಈಗಾಗಲೇ ಎಲ್ಲವನ್ನೂ ತೆಗೆದುಹಾಕಲಾಗಿದೆ. ಇದೀಗ ದೇಶದೆಲ್ಲೆಡೆ ಮತ್ತೆ ಕೊರೊನಾ ಹೊಸ ರೂಪಾಂತರ ಎಂಟ್ರಿ ನೀಡಿದ್ದು ಇದರಿಂದ ಜನರೆಲ್ಲರೂ ಆತಂಕ ಪಡುವಂತಾಗಿದೆ. ಇದಲ್ಲದೆ ಈಗಾಗಲೇ ಭಾರತದಲ್ಲೇ ಒಟ್ಟು 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಮುಂದೆ ಓದಿ ...
  • Share this:

ಕೊರೊನಾ (Corona) ಹೆಸರು ಕೇಳಿದರೆ ಸಾಕು ಇಡೀ ಜಗತ್ತೇ ಒಮ್ಮೆ ಬೆಚ್ಚಿ ಬೀಳುತ್ತೆ. ಇಂತಹ ಸಂದರ್ಭದಲ್ಲಿ ಮತ್ತೆ ಕೊರೊನಾ ಅಪ್ಪಳಿಸುವ ಸಾಧ್ಯತೆ ಇದೆ ಎಂದರೆ ವಿಶ್ವವೇ ನಡುಗಿ ಹೋಗುತ್ತದೆ. ಈ ಹಿಂದೆ ಕೋವಿಡ್ -19 (Covid-19)ನಿಂದಾಗಿ ಯಾವುದೇ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆ ಕಾಣದಿದ್ದರೂ, ಇದರ ರೂಪಾಂತರಗಳ (Covid Veriant) ಹಾವಳಿಯಿಂದಾಗಿ ಕೋವಿಡ್‌ ಪ್ರಕರಣಗಳು ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಲೇ ಇದೆ. ಇದೀಗ ಮತ್ತೆ ಕೊರೊನಾದ ಹೊಸ ರೂಪಾಂತರ ಭಾರತದಲ್ಲಿ ಕಂಡುಬಂದಿದ್ದು, ಇದರಿಂದ ಜನರೆಲ್ಲರೂ ಆತಂಕದಿಂದಿದ್ದಾರೆ.


ಹೌದು, ಭಾರತದಲ್ಲಿ ಕೋವಿಡ್‌ ರೂಪಾಂತರಗಳಿಗೆ ಸಂಬಂಧಿಸಿದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎಲ್ಲಾ ವೈರಸ್ ಪ್ರೇರಿತ ನಿರ್ಬಂಧಗಳನ್ನು ತೆಗೆದುಹಾಕಿರುವ ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯಿಂದ ಭಯದ ಮನೆ ಮಾಡಿದೆ.


ದೇಶಾದ್ಯಂತ 610 ಪ್ರಕರಣಗಳು ದಾಖಲು


ದೇಶಾದ್ಯಂತ ಕೋವಿಡ್‌ನ XBB.1.16 ರೂಪಾಂತರದ ಒಟ್ಟು 610 ಪ್ರಕರಣಗಳು ಪತ್ತೆಯಾಗಿದ್ದು, ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಇದೇ ಕಾರಣವಾಗಿರಬಹುದು ಎಂದು INSACOG ಡೇಟಾ ಹೇಳಿದೆ.


ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಮತ್ತೋರ್ವ ‘ಕೈ’ ಮುಖಂಡ! ಯಾಕೆ ಗೊತ್ತಾ?


ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ XBB.1.16 ಆರ್ಭಟ


ದೇಶಾದ್ಯಂತ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ರೂಪಾಂತರದ ಮಾದರಿಗಳು ಕಂಡುಬಂದಿವೆ. ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ತಲಾ 164, ತೆಲಂಗಾಣದಲ್ಲಿ 93, ಕರ್ನಾಟಕದಲ್ಲಿ 86 ರೂಪಾಂತರ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ 19 ಪ್ರಕರಣ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು INSACOG ಡೇಟಾ ತಿಳಿಸಿದೆ.


ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕೋವಿಡ್‌ನ XBB.1.16 ರೂಪಾಂತರ ಆರ್ಭಟ ನಡೆಸುತ್ತಿದ್ದು, ಈ ರಾಜ್ಯದಲ್ಲಿ ತ್ವರಿತ ಕ್ರಮದ ಅಗತ್ಯತೆ ಇದೆ. ಜನವರಿಯಲ್ಲಿ ಈ ರೂಪಾಂತರ ಮೊದಲ ಬಾರಿಗೆ ಪತ್ತೆಯಾದಾಗ, ಎರಡು ಮಾದರಿಗಳು ಪಾಸಿಟಿವ್ ಆಗಿ ದೃಢಪಟ್ಟಿದ್ದವು.


XBB.1.16 ಆರ್ಭಟ ಕೊರೋನ ವೈರಸ್ ಪ್ರಕರಣದಲ್ಲಿ ಹೆಚ್ಚಳ


ಭಾರತದಲ್ಲಿ ಇತ್ತೀಚೆಗೆ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೀಡಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 1,805 ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 134 ದಿನಗಳ ನಂತರ 10,000ಕ್ಕೆ ಏರಿಕೆಯಾಗಿದೆ.


ಸಾಂದರ್ಭಿಕ ಚಿತ್ರ


ಈ ರೂಪಾಂತರದ ಕಾರಣದಿಂದ ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ್​​ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಈ ಹಿಂದೆ ತಿಳಿಸಿದ್ದರು.


ಸಾವಿನ ಸಂಖ್ಯೆ 5,30,837ಕ್ಕೆ ಏರಿಕೆ


ಕಳೆದ 24 ಗಂಟೆಗಳಲ್ಲಿ ಇನ್ನೂ ಆರು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,30,837 ಕ್ಕೆ ತಲುಪಿದೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ (4,47,05,952) ಆಗಿದೆ.


ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳಲ್ಲಿ 0.02 ಪ್ರತಿಶತವನ್ನು ಒಳಗೊಂಡಿವೆ. ಆದರೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು 98.79 ಪ್ರತಿಶತದಷ್ಟು ದಾಖಲಾಗಿದೆ. ಇದರ ಮಧ್ಯೆ, ದೇಶಾದ್ಯಂತ ಹಠಾತ್ ಹೆಚ್ಚಾದ ಪ್ರಕರಣಗಳನ್ನು ಎದುರಿಸಲು ದೆಹಲಿ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ.


top videos    ರೂಪಾಂತರಗಳ ಹಾವಳಿ ನೇರವಾಗಿ ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವುದರಿಂದ ಜನರು ದೇಶದಲ್ಲಿ ಯಾವುದೇ ನಿಯಮಗಳಿಲ್ಲದಿದ್ದರೂ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ. ವೈದ್ಯರು ಕೂಡ ಮುಂಚೆ ಅನುಸರಿಸುತ್ತಿದ್ದ ಕ್ರಮಗಳನ್ನು ಮುಂದುವರೆಸುವಂತೆ ಶಿಫಾರಸು ಮಾಡುತ್ತಿದ್ದಾರೆ.

    First published: