• Home
  • »
  • News
  • »
  • national-international
  • »
  • Wuhan: ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯ ಶಾಕಿಂಗ್ ಹೇಳಿಕೆ, ಡ್ರ್ಯಾಗನ್ ಬಣ್ಣ ಬಯಲು

Wuhan: ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯ ಶಾಕಿಂಗ್ ಹೇಳಿಕೆ, ಡ್ರ್ಯಾಗನ್ ಬಣ್ಣ ಬಯಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಮೆರಿಕದ ವಿಜ್ಞಾನಿಯೊಬ್ಬರು ಸಂವೇದನಾಶೀಲ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಲ್ಯಾಬ್‌ನಿಂದ ಸೋರಿಕೆಯಾದ ಕೋವಿಡ್-19 'ಮಾನವ ನಿರ್ಮಿತ ವೈರಸ್' ಎಂದು ಹೇಳಲಾಗಿದೆ

  • Share this:

ಚೀನಾದ ವುಹಾನ್‌ನಲ್ಲಿರುವ (Wuhan, China) ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ (Research Centre) ಕೆಲಸ ಮಾಡುತ್ತಿರುವ ಅಮೆರಿಕದ ವಿಜ್ಞಾನಿಯೊಬ್ಬರು ಸಂವೇದನಾಶೀಲ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಲ್ಯಾಬ್‌ನಿಂದ (Wuhan Lab)ಸೋರಿಕೆಯಾದ ಕೋವಿಡ್-19 'ಮಾನವ ನಿರ್ಮಿತ ವೈರಸ್' ಎಂದು ಹೇಳಲಾಗಿದೆ. ಯುಎಸ್ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೊಸ ಪುಸ್ತಕದಲ್ಲಿ, ಕೋವಿಡ್ -19 ವೈರಸ್ ಎರಡು ವರ್ಷಗಳ ಹಿಂದೆ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ. ಇದು ಚೀನಾ ಸರ್ಕಾರದಿಂದ ನಡೆಸಲ್ಪಡುವ ಮತ್ತು ಧನಸಹಾಯದ ಸಂಶೋಧನಾ ಪ್ರಯೋಗಾಲಯವಾಗಿದೆ.


ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ತನ್ನ ಹೊಸ ಪುಸ್ತಕ 'ದಿ ಟ್ರೂತ್ ಅಬೌಟ್ ವುಹಾನ್' ನಲ್ಲಿ, ಚೀನಾದಲ್ಲಿ ಕೊರೋನಾ ವೈರಸ್ ಸಂಶೋಧನೆಗೆ ಯುಎಸ್ ಸರ್ಕಾರದ ಧನಸಹಾಯದಿಂದ ಸಾಂಕ್ರಾಮಿಕ ರೋಗ ಆರಂಭವಾಗಿದ್ದು ಎಂದು ಹೇಳಿದ್ದಾರೆ. ಹಫ್ ಅವರ ಪುಸ್ತಕದ ಆಯ್ದ ಭಾಗಗಳು ಬ್ರಿಟನ್‌ನ ಟ್ಯಾಬ್ಲಾಯ್ಡ್ ದಿ ಸನ್‌ನಲ್ಲಿ ಕಾಣಿಸಿಕೊಂಡಿವೆ.


ಇದನ್ನೂ ಓದಿ: ‘ಕೊರೋನಾಗೆ ಅಂತ್ಯ ಯಾವಾಗ? ಎಂದು ಹೇಳಲಾಗುವುದಿಲ್ಲ, ನಿರ್ನಾಮವಾಗದೇ ಉಳಿಯಬಹುದು‘ - ವಿಶ್ವ ಆರೋಗ್ಯ ಸಂಸ್ಥೆ


ಚೀನಾ ನಡೆಸುವ ಲ್ಯಾಬ್


ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಚೀನಾದ ಗೇನ್-ಆಫ್-ಫಂಕ್ಷನ್ ಪ್ರಯೋಗಗಳನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಮಾಡಲಾಗಿಲ್ಲ ಎಂದು ಹಫ್ ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದು, ಇದೇವುಹಾನ್ ಲ್ಯಾಬ್‌ನಲ್ಲಿ ಸೋರಿಕೆಗೆ ಕಾರಣವಾಯಿತು.


ಬಾವಲಿಗಳ ಮೇಲೆ ಪ್ರಯೋಗ


ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಪ್ರಯೋಗಾಲಯವು ಬಾವಲಿಗಳಲ್ಲಿನ ಹಲವಾರು ಕೊರೋನಾ ವೈರಸ್‌ಗಳನ್ನು ಅಧ್ಯಯನ ಮಾಡಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ನಿಂದ ಹಣವನ್ನು ಪಡೆಯುತ್ತಿದೆ ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಕೋವಿಡ್-19 ಬಿಕ್ಕಟ್ಟು: ಇಡೀ ಸಂಬಳ ಬಿಟ್ಟುಕೊಟ್ಟ ಅಂಬಾನಿ; 15 ಲಕ್ಷದವರೆಗಿನ ಸಂಬಳದ ಉದ್ಯೋಗಿಗಳಿಗಿಲ್ಲ ವೇತನ ಕಡಿತ


NIH ಮತ್ತು ವುಹಾನ್ ಪ್ರಯೋಗಾಲಯದ ನಡುವೆ ನಿಕಟ ಸಂಬಂಧವು ಬೆಳೆದಿದೆ. NIH ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗಾಗಿ US ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ. ಕೋವಿಡ್ -19 ವೈರಸ್ ಲ್ಯಾಬ್‌ನಲ್ಲಿ ಸೃಷ್ಟಿಯಾದ ವೈರಸ್ ಎಂದು ಚೀನಾ ಮೊದಲ ದಿನದಿಂದಲೇ ತಿಳಿದಿತ್ತು ಎಂದು ಹಫ್ ಬರೆದಿದ್ದಾರೆ. ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನಾಕ್ಕೆ ವರ್ಗಾಯಿಸಲು ಸಮೆರಿಕ ಸರ್ಕಾರವೇ ನೇರ ಹೊಣೆ ಎಂದಿರುವ ಹಫ್ 'ನಾನು ಕಂಡದ್ದನ್ನು ನೋಡಿ ನಾನು ಹೆದರುತ್ತಿದ್ದೆ. ನಾವು ಅವರಿಗೆ ಕೇವಲ ಜೈವಿಕ ಅಸ್ತ್ರಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಮಾತ್ರ ಹಸ್ತಾಂತರಿಸುತ್ತಿದ್ದೆವು ಎಂದಿದ್ದಾರೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು