Melinda Gates: ವಿಚ್ಛೇದನದ ನಂತರ ಮೆಲಿಂಡಾ ಗೇಟ್ಸ್ ತಮ್ಮ ಹಣವನ್ನು ಹೇಗೆ ಖರ್ಚು ಮಾಡಲಿದ್ದಾರೆ..?

ಮೆಲಿಂಡಾ ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ಬಗ್ಗೆ ಈ ಮೊದಲಿನಿಂದಲೂ ಧ್ವನಿ ಎತ್ತಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಮೆಲಿಂಡಾ ಗೇಟ್ಸ್​

ಮೆಲಿಂಡಾ ಗೇಟ್ಸ್​

  • Share this:
    ಮೈಕ್ರೋಸಾಫ್ಟ್ ದಿಗ್ಗಜ ಹಾಗೂ ಪ್ರಪಂಚದ ಆಗರ್ಭ ಶ್ರೀಮಂತ ಉದ್ಯಮಿಯಾದ ಬಿಲ್ ಗೇಟ್ಸ್ ತಮ್ಮ 27 ವರ್ಷಗಳ ಕಾಲದ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಇತ್ತೀಚೆಗೆ ಹಂಚಿಕೊಂಡರು. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ ಅಡಿಯಲ್ಲಿ ಇವರಿಬ್ಬರು ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಾಸಗಿ ದತ್ತಿ ಪ್ರತಿಷ್ಠಾನಗಳಲ್ಲಿ ಒಂದಾಗಿದೆ ಹಾಗೂ ಇವರ ವಿಚ್ಛೇದನವು ಜಗತ್ತಿನಾದ್ಯಂತ ವಿವಿಧ ಲೋಕೋಪಕಾರಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಆದರೂ, ಜಗತ್ತಿನ ಜನರ ಒಳಿತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಸ್ಥಾಪಿಸಿರುವ ಸಂಸ್ಥೆಯಲ್ಲಿ ಲೋಕೋಪಕಾರಿ ಚಟುವಟಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಆ ಮೂಲಕ ಜಗತ್ತಿನ ಜನರನ್ನು ತಲುಪುತಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಮಾಜಿ ವಿಶ್ವದ ಶ್ರೀಮಂತ ವ್ಯಕ್ತಿಯೊಂದಿಗೆ ವಿಚ್ಛೇದನದ ನಂತರವೂ, ಮೆಲಿಂಡಾ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಉಳಿಯುತ್ತಾರೆ. ಅವರು ಈ ಹಣವನ್ನು ತಮ್ಮ ಲೋಕೋಪಕಾರಿ ಕಾರ್ಯಗಳಿಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ.

    ಸಿಎನ್ಎನ್ ವರದಿಯ ಪ್ರಕಾರ, ಮೆಲಿಂಡಾ ಅವರ ಕೆಲಸವನ್ನು ನೋಡಿದರೆ, ಲೋಕೋಪಕಾರಿ ಪ್ರಪಂಚವು ಅವರ ಈ ಎಲ್ಲಾ ಪ್ರಯತ್ನಗಳಿಂದ ಪ್ರಭಾವಿತವಾಗಿದೆ. ಈ ವರದಿಯು ಅವರು ಯಾವೆಲ್ಲಾ ಪ್ರಮುಖ ಕಾರ್ಯಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಹಾಗೂ ಅದರ ಏಳಿಗೆಗಾಗಿ ದುಡಿಯಲಿದ್ದಾರೆ ಎಂಬುದನ್ನೂ ಸಹ ತೋರಿಸುತ್ತದೆ.

    ಮಹಿಳಾ ಸಬಲೀಕರಣ
    ಮೆಲಿಂಡಾ ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ಬಗ್ಗೆ ಈ ಮೊದಲಿನಿಂದಲೂ ಧ್ವನಿ ಎತ್ತಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು 2015ರಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ರಚನಾತ್ಮಕ ಅಸಮಾನತೆಯನ್ನು ಪರಿಹರಿಸಲು , ತಮ್ಮ ಹೂಡಿಕೆ ಮತ್ತು ಇನ್ಕ್ಯುಬೇಷನ್ ಕಂಪನಿ ಪಿವೊಟಲ್ ವೆಂಚರ್ಸ್ ಅನ್ನು ಪ್ರಾರಂಭಿಸಿದ್ದರು. ಕಂಪನಿಯು ಮಹಿಳಾ ಕೇಂದ್ರಿತ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕ ಕಚೇರಿಯಲ್ಲಿ ಸ್ಪರ್ಧಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತದೆ. ಮಹಿಳೆಯರಿಗೆ ಗರ್ಭನಿರೋಧಕಗಳ ಅಗತ್ಯತೆ ಬಗ್ಗೆ ಈ ಮೊದಲೇ ಮೆಲಿಂಡಾ ಅವರು ಧ್ವನಿ ಎತ್ತಿದ್ದಾರೆ ಮತ್ತು ಇದನ್ನು ವಿಶ್ವದ ಅತ್ಯಂತ ಬಡತನ ವಿರೋಧಿ ಸಾಧನವೆಂದು ಕರೆದಿದ್ದಾರೆ.

    ಕೋವಿಡ್ ಹರಡುವ ಭೀತಿ: 4 ಮಿಲಿಯನ್ ಮಿಂಕ್‍ಗಳ ಮೃತದೇಹ ಉತ್ಖನನಕ್ಕೆ ನಿರ್ಧರಿಸಿದ ಡೆನ್ಮಾರ್ಕ್

    ಕೋವಿಡ್ -19 ಲಸಿಕೆ
    ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತದ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಈ ಮಹಾಮಾರಿಯ ಹರಡುವಿಕೆಯನ್ನು ಕೊನೆಗೊಳಿಸಬೇಕು ಎಂದರೆ ಅದಕ್ಕೆ ಜನರಿಗೆ ಲಸಿಕೆ ನೀಡುವುದು. ಪ್ರತಿಯೊಬ್ಬರೂ ಈ ಲಸಿಕೆಯನ್ನು ಪಡೆಯಲೇಬೇಕು ಎಂದು ಮೆಲಿಂಡಾ ಒತ್ತಿ ಹೇಳಿದ್ದಾರೆ. ನಾವು ಲಸಿಕೆಯನ್ನು ಹೆಚ್ಚಿನ ಆದಾಯದ ದೇಶಗಳಿಗೆ ಮಾತ್ರ ಸೀಮಿತಗೊಳಿಸಿದರೆ, ರೋಗವು ಮತ್ತೆ ಉಲ್ಭಣಗೊಳಿಸುತ್ತದೆ. ಹಾಗಾಗಿ ವಿಶ್ವದ ವಿವಿಧ ಭಾಗಗಳಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮಗಳಿಗಾಗಿ ಮೆಲಿಂಡಾ ಅವರು ತಮ್ಮ ಕಾರ್ಯಹಸ್ತ ವಿಸ್ತರಿಸುವ ನಿರೀಕ್ಷೆಯಿದೆ.

    ಮಾನಸಿಕ ಆರೋಗ್ಯ
    ಹಲವಾರು ಮಾನಸಿಕ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಮೆಲಿಂಡಾ ಅವರ ಜತೆಗಾರಿಕೆ ಇದ್ದು, ಮುಂಬರುವ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಅವರ ಗಮನ ಹಾಗೂ ಕೆಲಸ ಕೈಗೊಳ್ಳುತ್ತಾರೆ ಎಂದು ಸೂಚಿಸುತ್ತದೆ. ಈ ಹಿಂದೆ ಪ್ರಾರಂಭವಾಗಿದ್ದ 'ಸೌಂಡ್ ಇಟ್ ಔಟ್' ಮತ್ತು ಕಳೆದ ವರ್ಷ ಪ್ರಾರಂಭಿಸಿದ ಹದಿಹರೆಯದ ಮಾನಸಿಕ ಆರೋಗ್ಯಕ್ಕಾಗಿ ಅಪ್‌ಸ್ವಿಂಗ್ ಫಂಡ್‌ನಂತಹ ಉಪಕ್ರಮಗಳೊಂದಿಗೆ ತಮ್ಮ ಸಂಯೋಜನೆಯನ್ನು ಹೊಂದಿದ್ದಾರೆ.

    ವೇತನ ಸಹಿತ ರಜೆಗಳು
    ಮೆಲಿಂಡಾ ಗೇಟ್ಸ್ ಪಿವೊಟಲ್ ವೆಂಚರ್ಸ್ ಸಂಸ್ಥೆಯು ಯುಎಸ್ ನ ವಿವಿಧ ರಾಷ್ಟ್ರೀಯ ಅಭಿಯಾನಗಳೊಂದಿಗೆ ವೇತನ ಸಹಿತ ರಜೆಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ಸಿಎನ್ಎನ್ ಪ್ರಕಾರ, 2016 ರಲ್ಲಿ, ಅವರು ಸಮಗ್ರ ಫೆಡರಲ್ ವೇತನ ರಜೆ ನೀತಿಯನ್ನು ತರಲು 65 ಮಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಾರೆ. 2019ರಲ್ಲಿ, ಯುಎಸ್ಎ ಮಾತ್ರ ಸರ್ಕಾರದಿಂದ ಅನುದಾನಿತ ಕುಟುಂಬ ರಜೆ ಹೊಂದಿರದ ಏಕೈಕ ದೇಶ ಎಂದು ಅವರು ಗಮನಸೆಳೆದರು. ಬಿಲಿಯನೇರ್ ಮೆಲಿಂಡಾ ಭವಿಷ್ಯದಲ್ಲಿ ಈ ರಂಗದಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ.
    Published by:Latha CG
    First published: