Covid Pill: ಮುಂದಿನ ವಾರದಿಂದ ಎಲ್ಲಾ ಕಡೆ ಕೋವಿಡ್ ಮಾತ್ರೆ ಲಭ್ಯ, ಬೆಲೆ ಎಷ್ಟು? ಎಲ್ಲಿ ಸಿಗುತ್ತದೆ? ಫುಲ್ ಡೀಟೆಲ್ಸ್

Covid pill india: ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಹೇಳಿದೆ.ಇನ್ನು ಪ್ರತಿ ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರೆಗಳಿಗೆ ರೂ. 1,400 ವೆಚ್ಚ ತಗುಲಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೊನಾ(Corona) ಒಂದು ಮತ್ತು ಎರಡನೇ ಅಲೆಯ ಅಬ್ಬರ ಕಡಿಮೆಯಾಯಿತು ಎನ್ನುವಾಗಲೇ ದೇಶದಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರೋನ್(Omicron) ಆರ್ಭಟ ಶುರುವಾಗಿದೆ. ಹೀಗಾಗಿ ಜನರನ್ನು ಮತ್ತಷ್ಟು ಆರೋಗ್ಯವಾಗಿ(Health) ಇರಿಸಲು ಕೇಂದ್ರ ಸರ್ಕಾರ ಕೆಲವು ನಿರ್ದಿಷ್ಟ ವಯಸ್ಸಿನವರಿಗೆ ಬೋಸ್ಟರ್ ಡೋಸ್ ಲಸಿಕೆ(Booster Dose vaccine) ನೀಡುತ್ತಿದೆ.. ಅಲ್ಲದೆ ಶಾಲಾ ಕಾಲೇಜುಗಳ(School and college) ಮಕ್ಕಳಿಗೂ ಲಸಿಕೆ ನೀಡಲು ಪ್ರಾರಂಭ ಮಾಡಿದೆ.. ಈಗಾಗಲೇ ದೇಶದಲ್ಲಿ ಬಳಕೆಯಾಗುತ್ತಿರುವ ಕೊರೊನಾ ಔಷಧಿ ಗಳ ಜೊತೆಗೆ ಮತ್ತಷ್ಟು ಕೊರೊನಾ ಔಷಧಿ ಗಳಿಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರ ಸೋಂಕು ನಿಯಂತ್ರಣ ಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.. ಹೀಗಾಗಿಯೇ ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್-19 ಲಸಿಕೆ ಕೋವೊವಾಕ್ಸ್, ಬಯೋಲಾಜಿಕಲ್ ಇ ಸಂಸ್ಥೆಯ ಕಾರ್ಬೆವಾಕ್ಸ್ ಮತ್ತು ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಅನ್ನು ಕೇಂದ್ರ ಔಷಧ ಪ್ರಾಧಿಕಾರ ಸಿಡಿಎಸ್‌ಸಿಒ ಅನುಮೋದಿಸಿದೆ.

    ದೇಶದಾದ್ಯಂತ ಕೋವಿಡ್ ಮಾತ್ರೆ ಪರಿಚಯಿಸಲು ಸಿದ್ಧತೆ

    ಕೊರೊನಾ ಲಸಿಕೆಗಳಿಗೆ ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ತುರ್ತು ಬಳಕೆಗಾಗಿ ಅನುಮೋದಿಸುವಂತೆ ಭಾರತೀಯ ಔಷಧ ನಿಯಂತ್ರಕ ಜನರಲ್ ಗೆ ಶಿಫಾರಸ್ಸು ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಹ ಮೊಲ್ನುಪಿರವಿರ್ ಕೋವಿಡ್ ಮಾತ್ರೆ ತುರ್ತು ಬಳಕೆಗೆ ಅನುಮತಿ ನೀಡಿತ್ತು.. ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮೊಲ್ನುಪಿರವಿರ್ ಮಾತ್ರೆಯನ್ನು ದೇಶಾದ್ಯಂತ ಪರಿಚಯ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಇದನ್ನೂ ಓದಿ: ರೆಮಿಡಿಸಿವರ್​ ಅಲ್ಲ, ಈ ಮೂರು ಔಷಧ ಸೋಂಕಿತರ ಚಿಕಿತ್ಸೆಗೆ ರಾಮಬಾಣವಂತೆ

    ಜೊತೆಗೆ ಮೊಲ್ನುಪಿರವಿರ್ ಎಂಬ ಮಾತ್ರೆಗಳನ್ನು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲು ಸಮ್ಮತಿಸಲಾಗಿದೆ
    ಹದಿಮೂರು ಕಂಪೆನಿಗಳು ಸೇರಿ ಮೊಲ್ನುಪಿರವಿರ್ ಮಾತ್ರೆಯನ್ನು ಅಭಿವೃದ್ಧಿ ಪಡಿಸಿವೆ. ಈವರೆಗೂ ಕೋವಿಡ್ ಚಿಕಿತ್ಸೆಗೆ ನಿರ್ದಿಷ್ಟವಾದ ಮಾತ್ರೆ ಅಥವಾ ಚುಚ್ಚುಮದ್ದು ಲಭ್ಯವಿಲ್ಲ. ರೋಗಿಯ ದೇಹಸ್ಥಿತಿ ಆಧರಿಸಿ ಲಭ್ಯ ಇರುವ ಔಷಧಿಗಳನ್ನೇ ನೀಡಲಾಗುತ್ತಿತ್ತು. ಮೊಲ್ನುಪಿರವಿರ್ ಮಾತ್ರೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಗಂಭೀರ ರೋಗಗಳಿಂದ ಬಳಲುತ್ತಿರುವ ವಯಸ್ಕ ರೋಗಿಗಳಿಗೆ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

    ಕೇವಲ 35 ರೂಪಾಯಿಗೆ ಸಿಗಲಿದೆ ಮಾತ್ರೆ..

    ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಹೇಳಿದೆ.ಇನ್ನು ಪ್ರತಿ ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರೆಗಳಿಗೆ ರೂ. 1,400 ವೆಚ್ಚ ತಗುಲಲಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಈ ಮಾತ್ರೆಗಳಲ್ಲಿ ತಯಾರಿಸಲಾಗಿದೆ. ಮುಂದಿನ ವಾರ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಈ ಮಾತ್ರೆಗಳು ದೊರೆಯಲಿವ.

    ಇದನ್ನೂ ಓದಿ: ಕೋವಿಡ್​ ಗೆ ಇನ್ಮೇಲೆ ಮಾತ್ರೆ ತಗೊಂಡ್ರೆ ಸಾಕು !? ಯುಕೆಯಲ್ಲಿ ಆಗ್ಲೇ ಬಳಕೆ ಶುರು!

    18 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸ್ಸಿನ ಮೇಲೆ ಮಾತ್ರೆ

    ಮೊಲ್ನುಪಿರವಿರ್ ಮಾತ್ರೆಯ ಬಳಕೆಗೆ ಅನುಮತಿ ನೀಡುವಂತೆ ಡಾ.ರೆಡ್ಡಿಸ್ ಲ್ಯಾಬೋರೆಟರಿ ಸಿಪ್ಲಾ ಮತ್ತು ಮೈಲಾನ್, ಟೋರೆಮಟ್, ಎಮ್ಯೂಕುರ್ ಮ್ತು ಸನ್ ಫಾರ್ಮಾ ಒಕ್ಕೂಟ ಪ್ರಸ್ತಾವನೆ ಸಲ್ಲಿಸಿದ್ದವು. 200 ಎಂಜಿಯ ಈ ಮಾತ್ರೆಗಳನ್ನು 18 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸ್ಸು ಆಧರಿಸಿ ನೀಡಬಹುದಾಗಿದೆ.
    ದಿನಕ್ಕೆ ಎರಡು ಬಾರಿ ಐದು ದಿನಗಳ ವರೆಗೆ ಮಾತ್ರ ಬಳಕೆ ಮಾಡಬಹುದಾಗಿದೆ. ಗರ್ಭೀಣಿಯರು ಮತ್ತು ಬಾಣಂತಿಯರು ಈ ಮಾತ್ರೆಗಳನ್ನು ಬಳಸಲು ಅನುಮತಿಸಿಲ್ಲ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೋಗ ಲಕ್ಷಣಗಳಿರುವ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವಾಗಲೂ ಇವನ್ನು ಬಳಸಬಹುದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
    Published by:ranjumbkgowda1 ranjumbkgowda1
    First published: