HOME » NEWS » National-international » COVID FINANCIAL CRISIS ODISHA COLLEGE GIRL JOINS ZOMATO AS DELIVERY PARTNER STG SESR

Covid Effect: ಕೆಲಸ ಕಳೆದುಕೊಂಡ ಅಪ್ಪ, ಝೊಮ್ಯಾಟೋ ಡೆಲಿವರಿ ಗರ್ಲ್‌ ಆದ ಮಗಳು..!

ಅಪ್ಪ ಕೆಲಸ ಕಳೆದುಕೊಂಡ ಪರಿಣಾಮ ಬದುಕು ನಿರ್ವಹಣೆ ಕಷ್ಟವಾಗಿದೆ. ಮನೆಯ ಹಿರಿಯ ಮಗಳಾಗಿ ಈ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗುವುದು ನನ್ನ ಕರ್ತವ್ಯ ಎನ್ನುತ್ತಿದ್ದಾರೆ ಈ ಯುವತಿ.

news18-kannada
Updated:June 11, 2021, 5:05 PM IST
Covid Effect: ಕೆಲಸ ಕಳೆದುಕೊಂಡ ಅಪ್ಪ, ಝೊಮ್ಯಾಟೋ ಡೆಲಿವರಿ ಗರ್ಲ್‌ ಆದ ಮಗಳು..!
ಅಪ್ಪ ಕೆಲಸ ಕಳೆದುಕೊಂಡ ಪರಿಣಾಮ ಬದುಕು ನಿರ್ವಹಣೆ ಕಷ್ಟವಾಗಿದೆ. ಮನೆಯ ಹಿರಿಯ ಮಗಳಾಗಿ ಈ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗುವುದು ನನ್ನ ಕರ್ತವ್ಯ ಎನ್ನುತ್ತಿದ್ದಾರೆ ಈ ಯುವತಿ.
  • Share this:

ಭಾರತದಲ್ಲಿ ಕೋವಿಡ್ -19 ಕೇವಲ ಸಾವುನೋವಿಗೆ ಕಾರಣವಾಗಿಲ್ಲ. ಜೀವಂತ ಉಳಿದವರ ಬದುಕಿನ ನಿರ್ವಹಣೆಗೂ ಸವಾಲೊಡ್ಡಿದೆ. ಕೊರೋನಾ ಇನ್ನೇನು ಕೆಲ ಕಾಲದಲ್ಲೇ ತೊಲಗಿದರೂ ಆರ್ಥಿಕತೆಯ ಕುಸಿತ, ನಿರುದ್ಯೋಗದ ದೀರ್ಘ ಪರಿಣಾಮಗಳನ್ನು ಬಿಟ್ಟು ಹೋಗುವ ಲಕ್ಷಣಗಳು ಕಾಣಿಸುತ್ತಿದೆ.ಕೊರೋನಾ ಹರಡದಂತೆ ತಡೆಯಲು ಹೇರುತ್ತಿರುವ ಲಾಕ್​ಡೌನ್​ಗಳಿಂದಾಗಿ ಅನೇಕರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಕೆಲಸವಿಲ್ಲದೇ ಅನೇಕ ಕುಟುಂಬ ಸಂಕಷ್ಟ ಅನುಭವಿಸುತ್ತಿದೆ.


ಒಡಿಶಾದ ಕಟಕ್​ನ ವಿಷ್ಣುಪ್ರಿಯಾ ಸ್ವೈನ್ ಎಂಬ 12ನೇ ತರಗತಿಯ ಕಾಲೇಜು ವಿದ್ಯಾರ್ಥಿನಿಯ ಕನಸನ್ನೂ ಈ ಕೊರೋನಾ, ಲಾಕ್​ಡೌನ್​ ಕಿತ್ತುಕೊಳ್ಳಲು ಹೊರಟಿದೆ. ಚೆನ್ನಾಗಿ ಕಲಿತು ಡಾಕ್ಟರ್ ಆಗಬೇಕು ಎಂಬುದು ಈಕೆಯ ಕನಸಾಗಿತ್ತು. ಅಪ್ಪ ವೃತ್ತಿಯಲ್ಲಿ ಚಾಲಕನಾಗಿದ್ದರೂ ಆಕೆ ಮಾತ್ರ ಎದೆಗುಂದದೆ, ವಿಜ್ಞಾನವನ್ನೇ ಆಯ್ದುಕೊಂಡು ಅಧ್ಯಯನವನ್ನು ಮಾಡುತ್ತಿದ್ದಳು. ಇನ್ನೇನು ಎಲ್ಲವೂ ಸರಿಯಾಗಿದ್ದರೆ ಚೆನ್ನಾಗಿ ಓದಿ ಉತ್ತಮ ಅಂಕ ಪಡೆದು, ಪಿಯು ಮುಗಿಸಿ ವೈದ್ಯಕೀಯ ಕೋರ್ಸ್​​ಗೆ ಸೇರಬೇಕಿತ್ತು. ಆದರೆ ಕೊರೋನಾ ಆಕೆಯ ಭವಿಷ್ಯದ ಮುಂದೆ ದೊಡ್ಡ ಬಂಡೆಗಲ್ಲನ್ನು ಇಟ್ಟುಬಿಟ್ಟಿದೆ.ಲಾಕ್‍ಡೌನ್ ಕಾರಣದಿಂದ ಅಪ್ಪ ನೌಕರಿ ಕಳೆದುಕೊಂಡ. ಮನೆಯಲ್ಲಿ ಅಪ್ಪ, ಅಮ್ಮ, ಇಬ್ಬರು ತಂಗಿಯಂದಿರು  ಊಟಕ್ಕೆ ಕಷ್ಟಪಡುವಂತೆ ಆಗಿದೆ. ಮನೆಯವರ ಕಷ್ಟ ನೋಡಲಾಗದೆ ಆಕೆ ತನ್ನ ಕನಸಿಗೆ ಕೊಳ್ಳಿ ಇಡುವ ನಿರ್ಧಾರಕ್ಕೆ ಬಂದಿದ್ದಾಳೆ.


ಟ್ಯೂಷನ್​ಗೂ ಕಲ್ಲು ಹಾಕಿದ ಕೋವಿಡ್:


“ನಾನು ಟ್ಯೂಷನ್ ಹೇಳಿಕೊಡುತ್ತಿದ್ದೆ. ಕೋವಿಡ್ ಕಾರಣದಿಂದ ಮಕ್ಕಳು ತರಗತಿಗೆ ಬರುವುದನ್ನು ನಿಲ್ಲಿಸಿದರು. ಮನೆಯಲ್ಲಿ ಆರ್ಥಿಕ ಸಂಕಷ್ಟ ದಿನೇ ದಿನೇ ಹೆಚ್ಚಾಗುತ್ತಿತ್ತು. ನಾನು ನನ್ನ ಶಿಕ್ಷಣ, ಕುಟುಂಬದ ನಿರ್ವಹಣೆಗಾಗಿ ಝೊಮ್ಯಾಟೋದಲ್ಲಿ ನೌಕರಿ ಮಾಡಲು ನಿರ್ಧರಿಸಿದೆ” ಎಂದು ವಿಷ್ಣುಪ್ರಿಯಾ ಮಾಧ್ಯಮವೊಂದಕ್ಕೆ ಹೇಳಿದ್ದಾಳೆ.

“ಅಪ್ಪ ನೌಕರಿ ಕಳೆದುಕೊಂಡ ಮೇಲೆ ಆತನ ಮೂರು ಮಕ್ಕಳಲ್ಲಿ ದೊಡ್ಡವಳಾದ ನಾನು ಮನೆಯಿಂದ ಹೊರಬಂದು ದುಡಿಯಲು ನಿರ್ಧರಿಸಿದೆ. ಅದು ನನ್ನ ನೈತಿಕ ಹೊಣೆಯಾಗಿತ್ತು. ಯಾವುದೇ ಕೆಲಸ ಸಣ್ಣದೂ ಅಲ್ಲ ದೊಡ್ಡದೂ ಅಲ್ಲ. ನನ್ನ ಕುಟುಂಬವನ್ನು ಸಂತೋಷವಾಗಿಡಲು ನಾನು ನನ್ನಿಂದಾಗುವುದೆಲ್ಲ ಪ್ರಯತ್ನಿಸುವೆ. ನನ್ನ ತಂಗಿಯಂದಿರಾದರೂ ಚೆನ್ನಾಗಿ ಓದಿ ಮುಂದೆ ಬರುವಂತೆ ಮಾಡಲು ಶ್ರಮಿಸುವೆ” ಎಂದು ಆಕೆ ಹೇಳುತ್ತಾಳೆ.


ಇದನ್ನು ಓದಿ: ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ರೆ ಹೀಗೆ ಮಾಡಿ ನೋಡಿ!

ಇದೀಗ ಆಕೆ ತನ್ನ ವಿದ್ಯಾಭ್ಯಾಸವನ್ನೂ, ಝೊಮ್ಯಾಟೋದಲ್ಲಿ ತನ್ನ ಕೆಲಸವನ್ನೂ ಏಕಕಾಲದಲ್ಲಿ ನಿರ್ವಹಿಸುತ್ತಿದ್ದಾಳೆ. ಕಷ್ಟಗಳು ಬೆನ್ನಟ್ಟಿ ಬಂದರೂ ಓದುವ ಉತ್ಸಾವನ್ನು ಬಿಟ್ಟುಕೊಟ್ಟಿಲ್ಲ. ಹಗಲು ಕಾಲೇಜು ಅಧ್ಯಯನಗಳು, ರಾತ್ರಿ ಝೊಮ್ಯಾಟೋ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈ ಕೆಲಸ ಅವಳಿಗೆ ಅಪಾಯಕಾರಿಯಾಗಿದ್ದರೂ ಆಕೆಯು ಎದೆಗುಂದಿಲ್ಲ. ನಿಧಾನವಾಗಿ ಲಾಕ್ಡೌನ್ ತೆರವು ಆಗುತ್ತಿರುವುದರಿಂದ ಆಕೆ ಬೆಳಗ್ಗೆ ಟ್ಯೂಷನ್ ಕೂಡ ಆರಂಭಿಸಿದ್ದಾಳೆ.


ವಿಷ್ಣುಪ್ರಿಯಾಳ ಸಾಹಸಿ ಬದುಕು, ಛಲ, ಕಲಿಯುವ ಹಂಬಲ ಈಗ ಎಲ್ಲರ ಗಮನವನ್ನೂ ಸೆಳೆಯುತ್ತಿದೆ. ಬದುಕಿನಲ್ಲಿ ತನ್ನ ಕನಸುಗಳನ್ನು ಆಕೆ ನನಸು ಮಾಡಿಕೊಳ್ಳಬಲ್ಲಳೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
First published: June 11, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories