HOME » NEWS » National-international » COVID CASES RAISING ANTHER LOCKDOWN IN MUMBAI SESR

Covid19: ಕೋವಿಡ್​ ಪ್ರಕರಣದಲ್ಲಿ ಏರಿಕೆ; ಮುಂಬೈನಲ್ಲಿ ಜಾರಿಯಾಗಲಿದೆಯಾ ಮತ್ತೊಂದು ಲಾಕ್​ಡೌನ್​?

ಎಂಟರಿಂದ ಹತ್ತು ದಿನಗಳಲ್ಲಿ ಪ್ರಕರಣದ ಸಂಖ್ಯೆಯನ್ನು ನಿಯಂತ್ರಣಕ್ಕೆ ತರದಿದ್ದರೆ ಲಾಕ್​ಡೌನ್​ ವಿಧಿಸುವುದು ಅನಿವಾರ್ಯವಾಗಲಿದೆ.

news18-kannada
Updated:March 8, 2021, 7:07 PM IST
Covid19: ಕೋವಿಡ್​ ಪ್ರಕರಣದಲ್ಲಿ ಏರಿಕೆ; ಮುಂಬೈನಲ್ಲಿ ಜಾರಿಯಾಗಲಿದೆಯಾ ಮತ್ತೊಂದು ಲಾಕ್​ಡೌನ್​?
ಸಾಂದರ್ಭಿಕ ಚಿತ್ರ
  • Share this:
ಮುಂಬೈ (ಮಾ. 8): ನೆರೆಯ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕೊರೋನಾ ಪ್ರಕರಣಗಳು ದಿನಂದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮತ್ತೊಂದು ಲಾಕ್​ಡೌನ್​ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಪ್ರಕರಣಗಳು, ಕಳೆದ ನಾಲ್ಕು ತಿಂಗಳಿಂದ ಗರಿಷ್ಠ ಮಟ್ಟಕ್ಕೆ ಏರಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಮಹಾನಗರಿಯಲ್ಲಿ (Mumbai) ಮತ್ತೊಂದು ಲಾಕ್​ಡೌನ್​ ಅನಿವಾರ್ಯವಿದ್ದು, ಈ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಈ ಹಿನ್ನಲೆ ಇದರ ಜಾರಿಗೆ ಉದ್ಧವ್​ ಠಾಕ್ರೆ ಸರ್ಕಾರ ಮುಂದಾಗುವ ಸಾಧ್ಯತೆ ಎನ್ನಲಾಗಿದೆ. ನಗರ ರಕ್ಷಕರ ಸಚಿವರಾಗಿರುವ ಅಸ್ಲಮ್​ ಶೇಖ್​, ನಗರದಲ್ಲಿ ಭಾಗಶಃ ಲಾಕ್​ಡೌನ್​ ವಿಧಿಸುವ ಚಿಂತನೆ ಬಗ್ಗೆ ಮಾತನಾಡಿರುವ ಕುರಿತು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಈ ಕುರಿತು ಮಾತನಾಡಿರುವ ಅವರು, ಎಂಟರಿಂದ ಹತ್ತು ದಿನಗಳಲ್ಲಿ ಪ್ರಕರಣದ ಸಂಖ್ಯೆಯನ್ನು ನಿಯಂತ್ರಣಕ್ಕೆ ತರದಿದ್ದರೆ ಲಾಕ್​ಡೌನ್​ ವಿಧಿಸುವುದು ಅನಿವಾರ್ಯವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಪತ್ತೆಯಾಗಿದ್ದ ಗರಿಷ್ಠ ಪ್ರಕರಣದ ಸಂಖ್ಯೆಯನ್ನು ಮತ್ತೊಮ್ಮೆ ಮುಟ್ಟುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಮೊದಲ ಹಂತವಾಗಿ ಮಾಸ್ಕ್​ ಕಡ್ಡಾಯ, ಜನಸಂದಣಿ ಕಡಿಮೆ ಮಾಡುವ ಕ್ರಮವನ್ನು ಜಾರಿಗೆ ತರುವ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ. ಈ ಮೂಲಕ ಸೋಂಕು ನಿಯಂತ್ರಕಕ್ಕೆ ಪ್ರಯತ್ನಿಸಲಾಗುವುದು. ಜೊತೆಗೆ ಸೋಂಕು ಪತ್ತೆ, ಪರೀಕ್ಷೆ ಹೆಚ್ಚಿಸುವುದರ ಜೊತೆಗೆ ಲಸಿಕೆ ವಿತರಣಾ (covid vaccine) ವೇಗ ಹೆಚ್ಚಿಸಲಾಗುವುದು. ಈ ಎಲ್ಲಾ ಕ್ರಮಗಳ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಾಗ ಲಾಕ್​ಡೌನ್​ ಬಗ್ಗೆ ಚಿಂತಿಸಲಾಗುವುದು ಎಂದರು.

ಇದನ್ನು ಓದಿ: ಕೋವಿಡ್​ ಪ್ರಕರಣದ ವರದಿ ಬಗ್ಗೆ ಅನುಮಾನ ಮೂಡಿಸುತ್ತಿವೆ ಈ ದೇಶಗಳ ದತ್ತಾಂಶಗಳು

ಸರ್ಕಾರದ ಮುಂದೆ ಈ ರೀತಿಯ ಒಂದು ಪ್ರಸ್ತಾವ ಇರುವ ಸಮಯದಲ್ಲಿ ಇಲ್ಲಿನ ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​, ಮುಂಬೈನಲ್ಲಿ ಹೆಚ್ಚುವರಿ ನಿರ್ಬಂಧ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದೆ. ಅಲ್ಲದೇ ಲಾಕ್​ಡೌನ್​ ಮತ್ತು ನೈಟ್​ ಕರ್ಫ್ಯೂ ಬಗ್ಗೆ ಕೂಡ ಚಿಂತನೆ ಇಲ್ಲ. ಆದರೆ, ಜನಸಾಮಾನ್ಯರು ಕೋವಿಡ್​ ಮಾರ್ಗಸೂಚಿಯನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.

ಕಳೆದೆರಡು ದಿನಗಳಿಂದ 10 ಸಾವಿರ ಹೊಸ ಪ್ರಕರಣಗಳು ಮುಂಬೈನಗರದಲ್ಲಿ ದಾಖಲಾಗಿದೆ, ಭಾನುವಾರ 11, 141 ಸೋಂಕು ಪತ್ತೆಯಾಗಿದೆ. ಇದೇ ರೀತಿ ಸೋಂಕು ಪ್ರಕರಣ ಹೆಚ್ಚಾದರೆ ಏಪ್ರಿಲ್​ ವೇಳೆಗೆ ಮಹಾರಾಷ್ಟ್ರದಲ್ಲಿ 2 ಲಕ್ಷ ಸಕ್ರಿಯ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆ ಈ ಕುರಿತ ಅಧ್ಯಯನಕ್ಕೆ ಕೇಂದ್ರ ತಂಡ ಕೂಡ ಮುಂಬೈಗೆ ಭೇಟಿ ನೀಡಲಿದೆ.
Published by: Seema R
First published: March 8, 2021, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories